‘ಜೊತೆಯಾಗಿ ಬೆಳೆಸೋಣ ಗಿಡ ಮರಗಳ…ಉಳಿಸೋಣ ವನಸಿರಿಗಳ’… ನವೀನ ಗಾಂಧಿ ಅವರ ಲೇಖನಿಯಲ್ಲಿ ಅರಳಿದ ವನ್ಯಸಿರಿ ಪ್ರೇಮದ ಕುರಿತಾದ ಕವನವನ್ನು ತಪ್ಪದೆ ಓದಿ…
ಬೆಳೆಸೋಣ ಬಾರ ಗಿಡಮರಗಳ
ಉಳಿಸೋಣ ಬಾರ ವನಸಿರಿಗಳ
ಕಂಡ ಕಂಡಲ್ಲೆಲ್ಲ ಹಸಿರು ರಾಶಿ
ಸುತ್ತ ಮುತ್ತೆಲ್ಲಾ ಸಸ್ಯ ಕಾಶಿ
ಊರ ಮುಂದಿದೆ ಹಸಿರು ಕಾನನ
ಊರ ಹೊರಗಿದೆ ಪ್ರಾಣಿ ಸಂಕುಲಗಳ ತಾಣ
ರಸ್ತೆ ಪಕ್ಕದಲ್ಲಿ ಸಾಲು ಶಾಲು ಮರಗಳು
ಮನೆ ಮನೆಗಳಲ್ಲಿ ಗಿಡ ಕಂಟಿಗಳು
ಊರ ತುಂಬೆಲ್ಲಾ ಹೂ ಬಳ್ಳಿಗಳು
ಮಂಜಿನ ಹನಿಗಳು ಕರಗಿ
ಬೆಟ್ಟ ಗುಡ್ಡಗಳಲ್ಲಿ ಝರಿಯಾಗಿ
ಪ್ರಶಾಂತ ಅಲೆಗಳ ನದಿಯಾಗಿ
ಹಸಿರಲಿ ಹಸಿರಾಗಿ
ಹಸಿರಲಿ ಉಸಿರಾಗಿ
ಉಸಿರಲಿ ಹೆಸರಾಗಿ
ಜೊತೆಯಾಗಿ ಬೆಳೆಸೋಣ ಗಿಡ ಮರಗಳ
ಉಳಿಸೋಣ ವನಸಿರಿಗಳ
ಪ್ರಕೃತಿಯ ಮಡಿಲಲಿ ಮಗುವಾಗಿ
ಪ್ರಕೃತಿಯ ಸೊಬಗಿದೆ ಮರುಳಾಗಿ
ಪ್ರಕೃತಿ ಅಂದಕೆ ನಾಚಿ ನೀರಾಗಿ
ನಮ್ಮ ಸಂತಸಕೆ ನೀ ಕಾರಣವಾಗಿ
ಗಿಡಮರ ಬಳ್ಳಿಗೆ ನೀ ಆಸರೆಯಾಗಿ !! !!
ಊರ ಮುಂದಿದೆ ಹಸಿರು ತೋರಣ
ಊರ ಒಳಗೆ ನೆಮ್ಮದಿಗೆ ನೀ ಕಾರಣ
ಅಲ್ಲಿ ಹಸಿರು , ಇಲ್ಲಿ ಹಸಿರು ಎಲ್ಲೆಲ್ಲೂ ಹಸಿರು
ಹಸಿರನು ಉಳಿಸಿ ಬೆಳೆಸಲು ಮುಡಿಪಾಗಿಸೋಣ
ನಮ್ಮ ಉಸಿರು ನಮ್ಮ ಉಸಿರು !! !!
- ನವೀನ ಗಾಂಧಿ