‘ಸತ್ಯ’ ಕವನ – ಜ್ಯೋತಿ ಡಿ ಬೊಮ್ಮಾ

ಮುಕ್ತಿ ಎನ್ನುವದು ಸಾವಿನ ನಂತರದ ಆಸೆ…ಕವಿಯತ್ರಿ ಜ್ಯೋತಿ ಡಿ ಬೊಮ್ಮಾ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಸತ್ಯದ ಅನ್ವೇಷಣೆಯಲ್ಲಿ
ಯುಗ ಯುಗಗಳೆ ಕಳೆದವು

ಹುಡುಕಾಟದ ಹಾದಿಯಲ್ಲಿ
ಸಿಕ್ಕಿರುವದೆಲ್ಲ
ಮತ್ತೆ ಕಳೆದು ಹೋಗುವ ವಸ್ತುಗಳೆ

ಬಾಳ ಪಯಣದ ಜೊತೆಗಾರರು
ಎಂಬುದೆ ಒಂದು ಭ್ರಮೆ

ಸಾಂಗತ್ಯ ಎನ್ನುವದು ಬಿಡಲಾಗದ
ಒಂದು ವ್ಯಸನ

ಬದುಕೆಂದರೆ ಅಷ್ಟೆ ,
ಬರಿ ಲಾಭ ನಷ್ಟಗಳ ಲೆಕ್ಕಾಚಾರ

ಮುಕ್ತಿ ಎನ್ನುವದು
ಸಾವಿನ ನಂತರದ ಆಸೆ

ಸುಃಖ ಎನ್ನುವದು
ಎಂದಿಗೂ ತೀರದ ದಾಹ

ದುಃಖ ಎನ್ನುವದು
ಬೆನ್ನ ಹಿಂದಿನ ನೆರಳು

ಸೇವೆ , ತ್ಯಾಗಗಳೆಲ್ಲ
ಪುಣ್ಯದ ಆಕಾಂಕ್ಷಿಗಳೆ

ಒಳ್ಳೆತನವೆಂಬುದು
ಮನಸ್ಸಿನ ದೊಡ್ಡಸ್ತಿಕೆ
ಮೌನ ಎನ್ನುವದು ಬಯಲು

ಕೊನೆಗೆ ಲೋಕದ ಸತ್ಯಗಳು
ಎರಡೇ ಎರಡು
ಪ್ರೀತಿ ಮತ್ತು ಮೃತ್ಯು.


  • ಜ್ಯೋತಿ ಡಿ ಬೊಮ್ಮಾ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading