ಐಸ್ ಸ್ಕೇಟಿಂಗ್ ನಲ್ಲಿ ಹೆಸರು ಮಾಡಿದ ಮೊದಲ ಕನ್ನಡಿಗ ಎಂದರೆ ರಾಘವೇಂದ್ರ ಸೋಮಯಾಜಿ. ಮೈನಸ್ ಡಿಗ್ರಿ ಚುಮು- ಚುಮು ಚಳಿ ಇದ್ದಾಗ ಮನೆಯಲ್ಲಿಬೆಚ್ಚಗೆ ಹೊಂದ್ಕೊಂಡು ಮಲಗಿ ಬಿಡಬೇಕು ಅನ್ನಿಸುತ್ತದೆ. ಆದರೆ ಆ ಚಳಿಯಲ್ಲಿಯೇ ರಾಘವೇಂದ್ರ ಅವರು ಸ್ಕೇಟಿಂಗ್ ಕಟ್ಟಿಕೊಂಡು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪದಕಗಳನ್ನು ಗೆದ್ದಿರುವ ರಾಘವೇಂದ್ರ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗಿಟ್ಟಿಸಿಕೊಳ್ಳುವಲ್ಲಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಐಸ್ ಸ್ಕೇಟಿಂಗ್ ಅಭ್ಯಾಸ ಮಾಡಲು ನಮ್ಮಲ್ಲಿ ಐಸ್ ಸ್ಕೇಟಿಂಗ್ ರಿಂಕ್ ವ್ಯವಸ್ಥೆಗಳಿಲ್ಲ. ಅದು ಇದ್ದರು ಕೂಡ ದೆಹಲಿಯಂತಹ ದೂರದ ಸ್ಥಳಗಳಲ್ಲಿ ಇದೆ. ರಾಘವೇಂದ್ರ ಅವರು ಐಸ್ ಸ್ಕೇಟಿಂಗ್ ಸ್ಪರ್ಧೆಗಳಿದ್ದಾಗ ಕರ್ನಾಟಕದಿಂದ ದೆಹಲಿಗೆ ಹೋಗಿ ಹದಿನೈದು ದಿನ ಅಲ್ಲಿಯೇ ಅಭ್ಯಾಸ ಮಾಡಿ,ಸ್ಪರ್ಧೆಗೆ ಸಿದ್ಧರಾಗುತ್ತಾರೆ.ಇಂತಹ ಸಮಸ್ಯೆಗಳ ನಡುವೆ ಕರ್ನಾಟಕಕ್ಕೆ ಸಾಕಷ್ಟು ಪದಕಗಳನ್ನುತಂದುಕೊಟ್ಟಿದ್ದಾರೆ. ರಾಘವೇಂದ್ರ ಸೋಮಯಾಜಿ ಅವರು ತಮ್ಮ ಐಸ್ ಸ್ಕೇಟಿಂಗ್ ಅನುಭವವನ್ನು ನಮ್ಮ ಆಕೃತಿ ಕನ್ನಡದಲ್ಲಿ ಹಂಚಿಕೊಂಡಿದ್ದಾರೆ.
೧. ನೀವು ಐಸ್ ಸ್ಕೇಟಿಂಗ್ ಆರಂಭ ಮಾಡಿದ್ದು ಯಾವಾಗ ? ಅದರ ಅನುಭವ ಹೇಗಿತ್ತು?
೨.ಬೆಂಗಳೂರಿನ ಸುತ್ತಮುತ್ತ ಐಸ್ ಸ್ಕೇಟಿಂಗ್ ರಿಂಕ್ ಗಳಿಲ್ಲ. ಹಾಗಿದ್ದಾಗ ನೀವು ಐಸ್ ಸ್ಕೇಟಿಂಗ್ ಅಭ್ಯಾಸ ಹೇಗೆ ಮಾಡುತ್ತೀರಿ?
೩.ನೀವು ಐಸ್ ಸ್ಕೇಟಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪದಕಗಳನ್ನು ಗೆದ್ದುಕೊಂಡಿದ್ದೀರಿ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳು ಏಕೆ ಬಂದಿಲ್ಲ?
೪. ಇತರೆ ಆಟಕ್ಕೆ ಸಿಕ್ಕಷ್ಟು ಜನಪ್ರಿಯತೆ ಸ್ಕೇಟಿಂಗ್ ಆಟಕ್ಕೆ ಸಿಕ್ಕಿಲ್ಲ, ಇದಕ್ಕೆ ಕಾರಣ?
ರಾಘವೇಂದ್ರ ಸೋಮಯಾಜಿ ಬಗ್ಗೆ ಇನ್ನಷ್ಟು ಓದಿ :
ಲೇಖನ :ಶಾಲಿನಿ ಪ್ರದೀಪ್