‘ಶೈಲಪುತ್ರಿಯೆ ಶ್ರೀ ಜಗದಂಬೆ…ಪ್ರಕೃತಿ ಸ್ವರೂಪಿಣಿ ಶ್ರೀ ಅಂಬೆ’… ಅನುಸೂಯ ಯತೀಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ…
ಶರನ್ನವರಾತ್ರಿಯ ಶ್ರೀ ಆದಿ ಪೂಜಿತೆ
ಭಕ್ತರು ನಿನ್ನ ಸ್ಮರಣೆ ಮರೆಯಲಾದೀತೆ
ಶಕ್ತಿ ಸ್ವರೂಪಿಣಿ ಕಲಹ ನಿವಾರಿಣಿ
ಪಾಲಿಸೆಮ್ಮನು ಅನುಗ್ರಹಧಾರಿಣಿ
ಶೈಲಪುತ್ರಿಯೆ ಶ್ರೀ ಜಗದಂಬೆ
ಪ್ರಕೃತಿ ಸ್ವರೂಪಿಣಿ ಶ್ರೀ ಅಂಬೆ
ಕರದಲಿ ಕಮಲ ಪಿಡಿದ ಕಾತ್ಯಾಯಿನಿ
ಬೇಡಿದ ವರಗಳ ನೀಡುವ ಶುಭದಾಯಿನಿ
ಶ್ವೇತ ವಸ್ತ್ರಧಾರಿಣಿ ಸೌಜನ್ಯ ರೂಪಿಣಿ
ತ್ರಿಶೂಲಧಾರಿ ಚಕ್ರಾರೂಢ ದುಷ್ಟ ಸಂಹಾರಿಣಿ
ತ್ರಿಮೂರ್ತಿಗಳಿಗೂ ಶಕ್ತಿ ಪ್ರಧಾಯಿಸಿದ ಜಗನ್ಮಾತೆ
ಮನೋನಿಗ್ರಹ ಶಕ್ತಿ ದಯಾಪಾಲಿಸೆ ವಿಖ್ಯಾತೆ
ಮಲ್ಲಿಗೆಯ ಮುಡಿಗಿರಿಸಿ ಆರಾಧಿಸುವೆ ಮಾತೆಯೆ
ಶಿರದಲಿ ಚಂದ್ರನ ಧರಿಸಿದ ಪರ್ವತ ರಾಜನ ಪುತ್ರಿಯೆ
ಚಂಚಲ ಚಿತ್ತಕ್ಕೆ ಕಡಿವಾಣ ಹಾಕಿ ಪೊರೆಯಮ್ಮ ಮಾಯೆ
ಸಕಲ ಗುಣಗಳ ನಮಗೆ ದಯಪಾಲಿಸು ತಾಯೆ
- ಅನುಸೂಯ ಯತೀಶ್
