ಮರೆಯಾದ ಕಲಾಮಾಣಿಕ್ಯ ಶನಿ ಮಹಾದೇವಪ್ಪ
೪-೫ ದಶಕಗಳ ಕಾಲ ನಮ್ಮ ಚಿತ್ರರಂಗದಲ್ಲಿ ಕಲಾರಸಿಕರನ್ನು ರಂಜಿಸಿದ ನಮ್ಮ ಕನ್ನಡದ ಮರೆಯಾದ ಕಲಾಮಾಣಿಕ್ಯ ‘ಶನಿ ಮಹಾದೇವಪ್ಪʼನವರಿಗೆ ಆಕೃತಿ ಕನ್ನಡ ಬಳಗದಿಂದ ಭಾವಪೂರ್ಣ ಶ್ರದ್ದಾಂಜಲಿ.

“ಕಮಲೇ ಕಮಲೋತ್ಪತ್ತಿಃ” ಎಂಬ ಸಂಭಾಷಣೆಯನ್ನು ʼಕವಿ ರತ್ನ ಕಾಳಿದಾಸʼ ಚಿತ್ರದಲ್ಲಿ ಬಹಳಷ್ಟು ಜನ ಕೇಳಿರ್ತಾರೆ. ಡಿಂಡಿಮ ಕವಿಯಾಗಿ ಗಡಸು ಧ್ವನಿಯಲ್ಲಿ ಸವಾಲಾಕುವ ಪಾತ್ರವದು. ನಿಜಕ್ಕೂ ಆ ಪಾತ್ರ ಇಂದಿಗೂ ಜನ ಮರೆಯೋಕೆ ಸಾಧ್ಯವಿಲ್ಲಾ. ಆದರೆ ನಮ್ಮ ಚಿತ್ರರಂಗಕ್ಕೆ ಬಹಳಷ್ಟು ಜನಕ್ಕೆ ಆ ಪಾತ್ರಧಾರಿ ಮತ್ತೆ ನೆನಪಾಗಿದ್ದು ನಿನ್ನೆ ಮಾತ್ರ. ಅದು ಅವರು ನಮ್ಮನ್ನು ಅಗಲಿದ ಅಂತಿಮ ದಿನ. ನಿಜ ಇದು ನಮ್ಮನ್ನಗಲಿದ ನಮ್ಮ ಬಣ್ಣದ ಲೋಕದ ಹಿರಿಯ ಕಲಾವಿದರಾದ ʼಶನಿ ಮಹಾದೇವಪ್ಪʼ ನವರ ಜೀವನಗಾಥೆ.

ಶನಿ ಮಹಾದೇವಪ್ಪನವರು ಚಿತ್ರರಂಗದಲ್ಲಿ ತನ್ನದೇ ಆದ ವಿಭಿನ್ನ ಮಾತು, ನಡೆ-ನುಡಿಯ ಮೂಲಕ ಕನ್ನಡಿಗರ ಗಮನ ಸೆಳೆದಂಥ ನಟರು. ಮಹಾದೇವಪ್ಪನವರು ಮಾರ್ಚ್‌ ೩, ೧೯೩೦ರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಜನಿಸಿದರು. ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಜನಿಸಿದ ಮಹಾದೇವಪ್ಪನವರಿಗೆ ಹಸಿವಿನ ಸಂಕಟವೆಂಬುದು ಸಾಮಾನ್ಯವಾಗಿತ್ತು. ಬಾಲ್ಯದಲ್ಲಿಯೇ ವಿದ್ಯಾಭ್ಯಾಸ ನಿಲ್ಲಿಸಿ ಕೂಲಿ ಕೆಲಸಕ್ಕೆ ಸೇರಿದರು. ಕೂಲಿ ಕೆಲಸ ಮಾಡುವಾಗಲೇ ಅವರಿಗೆ ಕಲೆಯ ಮೇಲೆ ಆಸಕ್ತಿ ಯುಂಟಾಗಿದ್ದು. ಆವಾಗಲೇ ರಂಗ ಪ್ರಕಾಶನ, ರಂಗ ಸಮೂಹ, ಸತ್ಯನಾರಾಯಣ ನಾಟಕ ಮಂಡಳಿಯಂತಹ ರಂಗ ಸಂಸ್ಥೆಗಳಲ್ಲಿ ನಾಟಕವಾಡುವುದನ್ನು ಹವ್ಯಾಸವಾಗಿಸಿಕೊಂಡರು. ಅಭಿನಯದಲ್ಲಿ ಅವರ ವಿಭಿನ್ನ ರೌದ್ರ ಕಣ್ಣುಗಳು, ಬೆಂಕಿಯಂತಹ ದೃಷ್ಠಿಯ ನೋಟವನ್ನು ಕಂಡ ನಿರ್ದೇಶಕರು ಅವರಿಗೆ ಹೆಚ್ಚಾಗಿ ರೌದ್ರಮಯ ಪಾತ್ರಗಳನ್ನೆ ಕೊಡುತ್ತಿದ್ದರು.ಒಂದು ಬಾರಿ ʼಶನಿ ಮಹಾತ್ಮೆʼ ಎಂಬ ನಾಟಕದಲ್ಲಿ ಶನಿದೇವನ ಪಾತ್ರವನ್ನು ಅದ್ಭುತವಾಗಿ ಮಾಡಿದ್ದರು. ಆಮೇಲೆ ಬರಿ ಮಹಾದೇವಪ್ಪನಾಗಿದ್ದವರು ನಂತರ ಜನ ಮನದಲ್ಲಿ ʼಶನಿ ಮಹಾದೇವಪ್ಪʼ ಎಂದೇ ಹೆಸರುವಾಸಿಯಾದರು. ಒಮ್ಮೆ ಅವರ ಶನಿ ಪಾತ್ರದ ಅಭಿನಯವನ್ನು ಕಂಡ ಗುಬ್ಬಿವೀರಣ್ಣನವರು ಅವರನ್ನು ತಮ್ಮ ನಾಟಕ ಕಂಪನಿಗೆ ಸೇರಿಸಿಕೊಂಡರು.

ಫೋಟೋ ಕೃಪೆ : Today femous

ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೂಡ ಹೆಚ್ಚಾಗಿ ಶನಿ ಪಾತ್ರಗಳನ್ನೆ ನಿಭಾಯಿಸುತ್ತಿದ್ದರು. ಅಷ್ಟೆ ಅಲ್ಲದೇ ಇತರೆ ನಾಟಕಗಳಲ್ಲಿ ನಾಯಕನಾಗಿ ಕೂಡ ಮಹಾದೇವಪ್ಪನವರೆ ಇರುತ್ತಿದ್ದರು. ಗುಬ್ಬಿ ಕಂಪನಿಯ ಬಡವನ ಬಾಳು, ಚಂದ್ರಹಾಸ, ಅತ್ತೆಸೊಸೆ, ಬಿಡುಗಡೆಯಂತಹ ಸುಂದರ ನಾಟಕಗಳಲ್ಲಿ ನಾಯಕನಾಗಿ ತಮ್ಮ ಅಭಿನಯದ ಛಾಪನ್ನು ತೋರಿಸಿದ್ದರು. ಅಂದಿನ ಕಾಲದ ಕಲಾವಿದರಾದಂತಹ ಡಾ.ರಾಜ್‌ ಕುಮಾರ್‌, ನರಸಿಂಹ ರಾಜು, ಬಾಲಣ್ಣನಂತಹ ಸಕಲ ಕಲಾವಿದರೊಂದಿಗೂ ಗುಬ್ಬಿ ಕಂಪನಿಯಲ್ಲಿ ಜೊತೆಗಾರರಾಗಿ ಕೆಲಸ ಮಾಡಿದರು. ಅಭಿನಯದ ಜೊತೆಗೆ ರಂಗದ ಹಿನ್ನಲೆಯಲ್ಲೂ ಕೂಡ ಕೆಲಸಗಾರರಾಗಿ ದುಡಿದರು.

ಒಂದು ಬಾರಿ ನಿರ್ದೇಶಕರಾದಂತಹ ಶಂಕರ್‌ ಸಿಂಗ್‌ ರವರು ಅವರ ನಾಟಕದಲ್ಲಿನ ಅಭಿನಯವನ್ನು ಕಂಡು ೧೯೬೨ರಲ್ಲಿ ತಮ್ಮ ಚಿತ್ರವಾದ ʼಶ್ರೀ ಧರ್ಮ ಸ್ಥಳ ಮಹಾತ್ಮೆʼ ಚಿತ್ರದಲ್ಲಿ ಬ್ರಹ್ಮದೇವನ ಪಾತ್ರವನ್ನು ನೀಡುತ್ತಾರೆ. ಅದರಲ್ಲಿನ ಮಹಾದೇವಪ್ಪನವರ ಅಭಿನಯವನ್ನು ಕಂಡ ನಿರ್ದೇಶಕರುಗಳಿಗೆ ಕಂಚಿನ ಕಂಠದ ಒಳ್ಳೇಯ ಕಲಾವಿದ ಕನ್ನಡಕ್ಕೆ ಸಿಕ್ಕಿದಂತಾಯಿತು. ನಂತರದಲ್ಲಿ ಪೌರಾಣಿಕ, ಸಾಮಾಜಿಕ, ಐತಿಹಾಸಿಕದಂತಹ ಚಿತ್ರಗಳಲ್ಲಿ ಎಲ್ಲಾ ಥರದ ಪಾತ್ರಗಳಲ್ಲೂ ಮಹಾದೇವಪ್ಪ ಬಣ್ಣ ಹಚ್ಚಿದರು.ಅತೀ ಹೆಚ್ಚು ಚಿತ್ರಗಳಲ್ಲಿ ಡಾ.ರಾಜ್‌ ಕುಮಾರವರೊಂದಿಗೆ ನಟಿಸಿದ್ದಾರೆ. ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ, ಮಯೂರ, ತ್ರಿಮೂರ್ತಿ, ಬಭ್ರು ವಾಹನ, ಯಾರಿವನು…? ಹೀಗೆ ೭೦ ರಿಂದ ೮೦ ಚಿತ್ರಗಳನ್ನು ಒಟ್ಟಿಗೆ ಮಾಡಿದ್ದಾರೆ. ಡಾ.ರಾಜ್‌ ಕುಮಾರವರೊಂದಿಗೆ ತುಂಬಾ ಆತ್ಮೀಯರಾಗಿದ್ದರು. ಇಷ್ಟೆ ಅಲ್ಲದೆ ವಿಷ್ಣುವರ್ಧನ್‌, ಪ್ರಭಾಕರ್‌, ಶ್ರೀನಾಥ್‌, ಅಶೋಕ್‌, ರಾಜೇಶರಂತಹ ಕಲಾವಿದರೊಂದಿಗೂ ತುಂಬಾ ಸಹ ಬಾಳ್ವೆಯಿಂದ ಇದ್ದಂತಹವರು.

This slideshow requires JavaScript.

೪ ದಶಕಗಳ ಕಾಲ ಸುಮಾರು ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ

ತಮಿಳು, ತೆಲುಗು ಚಿತ್ರಗಳಲ್ಲೂ ಸಹ ನಟಿಸಿ ಹೆಸರುವಾಸಿಯಾಗಿದ್ದರು. ಒಮ್ಮೆ ಶನಿ ಮಹಾದೇವಪ್ಪನವರನ್ನು ತಮಿಳು ಚಿತ್ರ ರಂಗದಲ್ಲಿಯೇ ಶಾಶ್ವತವಾಗಿ ನಟಿಸಲು ಕರೆದಾಗ, “ಮಹಾದೇವಪ್ಪನವರು ಕನ್ನಡದ ಮೇಲಿನ ಭಾಷಾಭಿಮಾನದಿಂದ ನಾನು ಕನ್ನಡ ನಾಡಲ್ಲಿಯೇ ತಿಳಿ ಗಂಜಿಯಾದರು ಕುಡಿದು ಬದುಕುತ್ತೇನೆ. ಆದರೆ ಎಂದೂ ಬೇರೆಯವರ ಹಂಗಲ್ಲಿ ಇರಲಾರೆ ಎಂದು ಹೇಳಿ ತಮ್ಮ ಕನ್ನಡದ ಮೇಲಿನ ಅಪಾರ ಅಭಿಮಾನ ಎಂತದ್ದು ಎಂಬುದನ್ನು ತೋರಿಸಿದ್ದರು.


ಆದರೆ ಕೊನೆಗೆ ನಮ್ಮ ಕನ್ನಡ ಚಿತ್ರರಂಗ ಮಾತ್ರ ಅವರ ಕೈ ಹಿಡಿಯಲಿಲ್ಲ

ತಮ್ಮ ಕೊನೆ ದಿನಗಳಲ್ಲಿ ತುಂಬಾ ಕಷ್ಟವನ್ನು ಅನುಭವಿಸುವಂತಾಯಿತು. ಅವಕಾಶಗಳಿಲ್ಲದೆ ಪರದಾಡಬೇಕಾಯಿತು. ಕೊನೆ-ಕೊನೆಗೆ ಶನಿ ಮಹಾದೇವಪ್ಪ ಎಂಬ ನಟ ಇದ್ದಾರೆಯೆ ?ಎನ್ನುವಂತಾಗಿ ಬಿಟ್ಟರು. ಅವರ ಕೊನೆಯ ಚಿತ್ರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ರವರ ೨೦೧೦ ರಲ್ಲಿ ಬಂದಂತಹ ಶೌರ್ಯ ಎಂತಹ ಅದ್ಭುತ ನಾಯಕರೊಂದಿಗೆ ಮುಖ್ಯ ಪಾತ್ರದಲ್ಲಿ ನಟಿಸಿದಂತಹ ಮಹಾದೇವಪ್ಪನವರು ತಮ್ಮ ಕೊನೆಯ ಚಿತ್ರಗಳಲ್ಲಿ ಚಿಕ್ಕ-ಚಿಕ್ಕ ಪಾತ್ರಗಳನ್ನು ಮಾಡುವಂತಾದರು. ಒಂದು ಸಂದರ್ಶನದಲ್ಲಿ ಅವರು ಹೇಳಿದ್ದು ನೆನಪಿದೆ.ಇವಾಗಲೂ ನಾನು ಪಾತ್ರ ಮಾಡಲು ತಯಾರಿದ್ದೇನೆ. ನನ್ನಲ್ಲಿ ಹುಮ್ಮಸಿದೆ. ಕಡಿಮೆ ಸಂಭಾವನೆ ಕೊಟ್ಟರು ಪರವಾಗಿಲ್ಲಾ. ಯಾವುದೇ ಥರದ ಪೋಷಕ ಪಾತ್ರ ಕೊಟ್ಟರು ನಾನು ನಿಭಾಯಿಸಬಲ್ಲೆ ಎಂದು ಹೇಳಿದ್ದರು. ನಮ್ಮ ನಿರ್ಮಾಪಕರುಗಳಿಗೆ ಮಹಾದೇವಪ್ಪನಂಥಹ ಪ್ರಾವೀಣ್ಯ ಕಲಾವಿದರಿಗಿಂತ ಹೊರಗಿನವರೆ ಹೆಚ್ಚಾಗಿ ಬೇಕಾಗಿದ್ದರು.

ನಂತರದ ದಿನಗಳಲ್ಲಿ ಮಹಾದೇವಪ್ಪನವರು ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಿವಿಯೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಇಲ್ಲಗಳ ಜೊತೆಯಲ್ಲಿಯೆ ತಮ್ಮ ಕೊನೆಯ ದಿನಗಳನ್ನು ಕಳೆದರು ಮಹಾದೇವಪ್ಪನವರು. ಆದರು ಸಹ ಸ್ವಾಭಿಮಾನವನ್ನು ಬಿಟ್ಟು ಹಣಕ್ಕಾಗಿ ಯಾರಿಗೂ ಕೈ ಚಾಚಿದವರಲ್ಲ. ತಮ್ಮ ೯೦ನೇ ವಯಸ್ಸಿನಲ್ಲಿ ಜನವರಿ ೩, ೨೦೨೧ರಂದು ಮಹಾದೇವಪ್ಪನವರು ತಮ್ಮ ಅಪಾರ ಕಲಾ ಬಂಧು ಬಳಗವನ್ನು ಬಿಟ್ಟು ಹೋದರು. ಇಂದು ಪೋಷಕ ಪಾತ್ರಗಳಿಗೆಲ್ಲಾ ನಮ್ಮ ನಿರ್ಮಾಪಕರುಗಳು ಎಷ್ಟೆ ನಟರನ್ನು ಕರೆತರಬಹುದು. ಆದರೆ ನಮ್ಮಲ್ಲಿಯೇ ಇರುವಂತಹ ಹಿರಿಯ ಕಲಾವಿದರು ಯಾವ ನಟರಿಗೂ ಕಡಿಮೆಯಿಲ್ಲಾ. ನಾವುಗಳೆ ನಮ್ಮವರಲ್ಲಿನ ಪ್ರತಿಭೆಗಳನ್ನು ಮೂಲೆ ಗುಂಪು ಮಾಡಿ, ಕಲಾವಿದರನ್ನು ಮೂಲೆಗೆ ಇಟ್ಟವರು. ಅದರ ಪರಿಣಾಮವೇ ಇಂದು ನಮ್ಮ ಚಿತ್ರರಂಗ ಬೇರೆ ಭಾಷೆಗಳನ್ನು ಅವಲಂಬಿಸಿದ್ದು ಅನಿಸುತ್ತಿದೆ. ಒಂದು ಕಾಲದಲ್ಲಿ ನಮ್ಮವರು ಕೊಟ್ಟಂತಹ ಪ್ರಯೋಗಾತ್ಮಕ, ದಾಖಲೆ ಚಿತ್ರಗಳನ್ನು ಎಷ್ಟು ಜನ ಕೊಟ್ಟಿದಾರೆ ಹೇಳಿ.ಇಂದು ನಮ್ಮವರೆ ನಮ್ಮವರನ್ನು ನಿರ್ಲಕ್ಷಿಸುತ್ತಿದ್ದಾರೆ. ಇನ್ನು ಮುಂದಾದರು ನಮ್ಮವರಿಗೆ ಹೆಚ್ಚು ಅವಕಾಶಗಳು ಸಿಗುವಂತಾಗಲಿ. ೪-೫ ದಶಕಗಳ ಕಾಲ ನಮ್ಮ ಚಿತ್ರರಂಗದಲ್ಲಿ ಕಲಾರಸಿಕರನ್ನು ರಂಜಿಸಿದ ನಮ್ಮ ʼಶನಿ ಮಹಾದೇವಪ್ಪʼನವರಿಗೆ ನಮ್ಮ ಆಕೃತಿ ಕನ್ನಡ ಬಳಗದಿಂದ ಭಾವಪೂರ್ಣ ಶ್ರದ್ದಾಂಜಲಿ.


  • ನಾಗರಾಜ್ ಲೇಖನ್

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ಅದ್ಭುತ ನಟ. ಓಂ ಶಾಂತಿ

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW