‘ಮೋದಿಜಿ ಮತ್ತೊಮ್ಮೆ ಪ್ರಧಾನಿಯಾಗಬೇಕು’ ಇದು ಪುಟ್ಟ ಬಾಲಕನ ಆಸೆ…

ನನ್ನ ಏಳು ವರ್ಷದ ಮಗ ರಾತ್ರಿ ಮಲಗುವ ಮುನ್ನ ನನ್ನ ಹತ್ತಿರ ಬಂದು ‘ಅಮ್ಮ… ನಿನಗೆ ಒಂದು ಮಾತು ಕೇಳ್ತೀನಿ. ಪ್ಲೀಸ್… ಆ ಮಾತನ್ನ ನಡಿಸಿಕೊಡತಿಯಾ?’ ಎಂದ. ಅಷ್ಟು ಸಣ್ಣ ಹುಡುಗ ಹೆಚ್ಚೆಂದರೆ ತನ್ನ ತಾಯಿಯ ಹತ್ತಿರ ಏನು ಕೇಳಬಹುದು’ ನನಗೆ ಆಟ ಸಾಮಾನು ಕೊಡಸು ಅಥವಾ ವಾರದ ಕೊನೆ ನನಗೆ ಮಾಲ್ ಸುತ್ತಿಸು ಎನ್ನುವ ಸಣ್ಣ ಪುಟ್ಟ ಆಸೆಗಳನ್ನು ಕೇಳಬಹುದು. ಅದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚು ಏನು ಕೇಳಿಯಾನು?. ಆ ಧೈರ್ಯದ ಮೇಲೆ ನಾನು ಹಿಂದೂ-ಮುಂದೂ ನೋಡದೆಯೇ ‘ಆಯ್ತು’ ಎಂದು ಒಪ್ಪಿಕೊಂಡೆ. ಆದರೆ ಅವನು ಕೇಳಿದ್ದು ‘ಅಮ್ಮ, ದಯವಿಟ್ಟು ನೀನು ಮೋದಿಜಿ ಅವರಿಗೆ ಓಟ್ ಹಾಕಬೇಕು. ಇಲ್ಲಾಂದ್ರೆ ನಾನು ನಿನ್ನ ಜೊತೆ ಮಾತಾಡೋದಿಲ್ಲ’ ಎಂದಾಗ ಒಂದು ಕ್ಷಣ ನಾನು ದಂಗಾದೆ.

ಆ ಆಲೋಚನೆಗಳು ಅವನ ವಯಸ್ಸಿಗೆ ಮೀರಿದ್ದಾದರೂ ನನ್ನ ಮಗ ಮೋದಿಜಿಯವರ ಬಗ್ಗೆ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾನೆ ಎನ್ನುವ ಕುತೂಹಲ ಒಂದು ಕಡೆ ಇತ್ತು. ಆ ಕಾರಣಕ್ಕೆ ಯಾಕೆ ಮೋದಿಜಿಗೆ ಓಟ್ ಮಾಡಬೇಕು? ಎಂದು ಕೇಳಿದೆ. ಆಗ ಅವನು ಹೇಳಿದ್ದು ‘ಅಮ್ಮ… ಪಾಕಿಸ್ತಾನ ಉಗ್ರರು ಪುಲ್ವಾಮಾ ಮೇಲೆ ದಾಳಿ ಮಾಡಿದಾಗ ನಮ್ಮ ಎಷ್ಟೋ ಜನ ಸೈನಿಕರು ಹುತಾತ್ಮರಾದರು. ಪಾಕಿಸ್ತಾನ ಅಂತಹ ಹೀನ ಕೆಲಸ ಮಾಡಬಾರದಾಗಿತ್ತು. ಮೋದಿಜಿ ಅವರು ಅದಕ್ಕೆ ಸುಮ್ಮನೆ ಕೂಡಲಿಲ್ಲ. ಆ ಸಮಯದಲ್ಲಿ ಏರ್ ಸ್ಟ್ರೈಕ್ ಮಾಡಿಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಿದ್ರು. ನಮ್ಮ ದೇಶ ಮೋದಿಜಿ ಅವರ ಕೈಯಲ್ಲಿ ಸುರಕ್ಷಿತವಾಗಿದೆ. ಒಂದು ವೇಳೆ ಮೋದಿಜಿ ಅವರು ಸೋತುಬಿಟ್ಟರೆ ಪಾಕಿಸ್ತಾನ ಮತ್ತೆ ನಮ್ಮ ಮೇಲೆ ದಾಳಿ ಮಾಡಬಹುದು ಎನ್ನೋ ಭಯವಿದೆ. ಅಮ್ಮ ಪ್ಲೀಸ್…ಮೋದಿಜಿಗೆ ನಿನ್ನ ಓಟ್ ಹಾಕಬೇಕು. ನಮ್ಮ ದೇಶದ ಪ್ರಧಾನಿ ಆಗಿ ಮತ್ತೆ ಅವರೇ ಆಯ್ಕೆಯಾಗಬೇಕು’ ಎಂದಾಗ ನನ್ನ ಮಗನ ಪ್ರಬುದ್ಧತೆಗೆ ಬಿಗಿದಪ್ಪಿಕೊಂಡೆ. ನಮ್ಮ ದೇಶದ ಇಂದಿನ ಸ್ಥಿತಿಯನ್ನು ಸಣ್ಣ ಹುಡುಗ ಎಷ್ಟು ಚನ್ನಾಗಿ ಅರ್ಥ ಮಾಡಿ ಕೊಂಡಿದ್ದಾನಲ್ಲ ಎನ್ನುವುದಕ್ಕೆ ಕಣ್ಣಲ್ಲಿ ನೀರು ಕೂಡ ಬಂತು. ಕೊನೆಗೆ ತನ್ನ ಪುಟ್ಟ ಪ್ರಪಂಚದಲ್ಲಿ ದೇಶದ ಬಗ್ಗೆ ಇಷ್ಟೆಲ್ಲ ಖಾಳಜಿ ಅವನಿಗೆ ಇದ್ದದ್ದು ನೋಡಿ ಖುಷಿಯು ಆಯಿತು.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಸತ್ಯದ ಮಾತು ನನ್ನ ಮಗನಿಂದ ಅರ್ಥವಾಯಿತು. ಅದರಲ್ಲಿಯೂ ಇಂದಿನ ಮಕ್ಕಳು ಸಾಮಾನ್ಯರಲ್ಲ. ಸರಿ-ತಪ್ಪುಗಳನ್ನು ತುಲನೆ ಮಾಡುವ ಶಕ್ತಿ ಅವರಲ್ಲಿದೆ. ಏಕೆ ಈ ಮಾತು ಹೇಳುತ್ತಿದ್ದೇವೆ ಎಂದರೆ ನಾವು ಚಿಕ್ಕವರಿದ್ದಾಗ ಕಾರ್ಗಿಲ್ ಯುದ್ಧವೇ ನಡೆದಿತ್ತು. ಆದರೆ ಆಗಿನ ಮಕ್ಕಳಲ್ಲಿ ನನ್ನ ಮಗನಂತೆ ಯುದ್ಧದ ಬಗ್ಗೆ ಆಗಲಿ, ಪ್ರಧಾನಿಯ ಬಗ್ಗೆ ಆಗಲಿ, ಅವರ ನಿರ್ಣಯದ ಬಗ್ಗೆ ಆಗಲಿ, ದೇಶದ ಬಗ್ಗೆಯಾಗಲಿ ಪ್ರಬುದ್ಧತೆಯು ಇರಲಿಲ್ಲ. ದೇಶ ಪ್ರೇಮ ಏನಿದ್ದರೂ ಸ್ವತಂತ್ರ ಸಿಗುವವರೆಗೂ ಅಷ್ಟೇ ಆಗಿತ್ತು. ಸ್ವತಂತ್ರ ಸಿಕ್ಕ ಮೇಲಂತೂ ಅಗಸ್ಟ ೧೫ನೆಯ ತಾರೀಖು ಎನ್ನುವುದು ಕೇವಲ ರಜೆ ಮಜಾವಾಗಿ ಹೋಯಿತು. ಆದರೆ ಇಂದಿನ ಮಕ್ಕಳು ದಡ್ಡರಲ್ಲ. ಪ್ರಶ್ನಿಸುತ್ತಾರೆ, ಸರಿ ಉತ್ತರ ಸಿಗುವ ತನಕ ಕೆದುಕುತ್ತಿರುತ್ತಾರೆ. ಅವರ ಕೆದುಕುವಿಕೆಯಲ್ಲಿ ಉತ್ತರವಾಗಿ ಕಂಡುಕೊಂಡಿದ್ದು ಮೋದಿ ಅವರ ಒಳ್ಳೆಯ ಕೆಲಸಗಳು. ನಮ್ಮ ದೇಶದ ಪ್ರಧಾನಿಯಾಗಿ ಮತ್ತೆ ಮೋದಿಯವರು ಆಯ್ಕೆಯಾಗಬೇಕು ಎನ್ನುವ ನಿರೀಕ್ಷೆಗಳು, ಹಂಬಲಗಳು.

ಮೋದಿಜಿ ಅವರ ಉತ್ತಮ ಕೆಲಸಗಳು ಪ್ರತಿಯೊಬ್ಬನಲ್ಲೂ ದೇಶ ಪ್ರೇಮವನ್ನು ಹುಟ್ಟು ಹಾಕಿದೆ. ಮೋದಿಜಿ ಅವರ ಭಾಷಣದಲ್ಲಿ ‘ಸೌಗಂಧ ಇಸ್ ಮಿಟ್ಟಿಕ್ಕಿ…ದೇಶ ಕೋ ನಹಿ ಮಿಟನೆ ದುಂಗಾ, ಸೌಗಂಧ ಇಸ್ ಮಿಟ್ಟಿಕ್ಕಿ…ಇಸ್ ದೇಶ ಕೋ ನಹಿ ರುಖನೆ ದುಂಗಾ, ಸೌಗಂಧ ಇಸ್ ಮಿಟ್ಟಿಕ್ಕಿ…ಇಸ್ ದೇಶ ಕೋ ನಹಿ ಜುಖನೇ ದುಂಗಾ…’ ಎಂದಾಗ ಅದು ನನಗೆ ಕೇವಲ ಭಾಷಣವೆನ್ನಿಸಲಿಲ್ಲ. ಅವರ ಮಾತಿನಂತೆ ನಿಜಕ್ಕೂ ಅವರು ದೇಶವನ್ನು ತಲೆಯೆತ್ತುವಂತೆ ಮಾಡಿದ್ದಾರೆ. ಅವರು ಗೆಲ್ಲಬೇಕು ಎನ್ನುವ ಹಾಹಾಕಾರ ದೇಶದೆಲ್ಲೆಡೆ ಈಗ ಶುರುವಾಗಿದೆ.

ಮೋದಿಜಿ ಅವರು ಗೆಲ್ಲಬೇಕು ಮತ್ತು ದೇಶ ಇನ್ನಷ್ಟು ಮುನ್ನಡೆಸಬೇಕು. ಎಲ್ಲರಲ್ಲಿಯೂ ದೇಶದ ಏಳಿಗೆಯ ಬಗ್ಗೆ ಸಾಕಷ್ಟು ಕನಸ್ಸುಗಳಿವೆ.ಅದು ನೆರವೇರಬೇಕಾದರೆ ಮೋದಿಯವರ ಗೆಲುವು ಅನಿವಾರ್ಯ. ಅಷ್ಟೇ ಅಲ್ಲ ಮೋದಿಜಿ ಮತ್ತು ಗಡಿನಾಡು ಸೈನಿಕರ ಆಯಸ್ಸು ವೃದ್ಧಿಗಾಗಿ ದೇಶದೆಲ್ಲೆಡೆ ಹೋಮಗಳು, ಪೂಜೆಗಳು ಜೋರಾಗಿಯೇ ನಡೆದಿವೆ. ಇಂಥದ್ದೇ ಹೋಮ ಕಳೆದು ವಾರ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ನಡೆಯಿತು. ಈ ಹೋಮಕ್ಕೆ ನಾನಷ್ಟೇ ಅಲ್ಲ, ಸಾವಿರಾರು ಜನರು ಜಾತಿ ಭೇದ-ಭಾವವಿಲ್ಲದೆ ದೇಶಕ್ಕಾಗಿ ಪ್ರಾಥ೯ನೆ ಸಲ್ಲಿಸಿದರು. ಅದು ಸಾಮಾನ್ಯದ ಹೋಮವಲ್ಲ ಶತ ಚಂಡಿಕಾ ಹೋಮ. ಪೂಜೆ ಮಾಡಿದವರು ಅನಕ್ಷರಸ್ಥರಲ್ಲ. ದೊಡ್ಡ ವಿದ್ವಾನಗಳು. ಪೂಜೆಗೆ ಕೂತವರು ಸಾಮಾನ್ಯ ವ್ಯಕ್ತಿಗಳಲ್ಲ. ಕಂಚಿ ಸೀರೆಯ ಮೇಲೆ ಲಲಿತ ಸಹಸ್ರ ನಾಮವನ್ನು ಕಸೂತಿಯಲ್ಲಿ ಹೆಣೆದ ಪ್ರಪ್ರಥಮ ಮಹಿಳೆ ಪದ್ಮಾ ಮತ್ತು ಅವರ ಪತಿ ಮಂಜುನಾಥ ಅವರು ಪೂಜೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ದೇಶದೆಲ್ಲೆಡೆ ಒಂದು ಕಡೆ ಹೋಮ-ಹವನಗಳು ನಡೆಯುತ್ತಿದ್ದರೆ ಇನ್ನೊಂದೆಡೆ ಚುನಾವಣೆ ಪ್ರಚಾರ ಜೋರಾಗಿ ನಡೆಯುತ್ತಿವೆ. ಎಲ್ಲೆಡೆ ಮೋದಿ ಸರಕಾರಕ್ಕಾಗಿ ಕೂಗು ಜೋರಾಗಿ ಕೇಳಿ ಬರುತ್ತಿದೆ. ನನ್ನ ಮಗನ ಆಸೆಯಂತೆ ಮತ್ತು ಎಲ್ಲರ ಆಸೆಯಂತೆ ಮತ್ತೆ ಮೋದಿ ಸರ್ಕಾರ ಗೆದ್ದು ಬರಲಿ.ಮತ್ತುಅವರಿಂದ ಇನ್ನಷ್ಟು ದೇಶದ ಏಳ್ಗೆ ಕೆಲಸಗಳು ಆಗಲಿ ಎನ್ನುವ ನಿರೀಕ್ಷೆ ಎಲ್ಲರದು. ದೇವರ ಆಶೀರ್ವಾದ ಮತ್ತು ಗುರು ಹಿರಿಯರ ಆಶೀರ್ವಾದ ಮೋದಿಜಿ ಅವರ ಮೇಲಿರಲಿ ಎಂದು ಶುಭ ಆರೈಸುತ್ತೇನೆ.

 

bf2fb3_c5eaf523bb1e481493169ef2aac381a9~mv2.jpg

ಲೇಖನ – ಶಾಲಿನಿ ಹೂಲಿ ಪ್ರದೀಪ್

aakritikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW