ಭಾರತದ ಹಿರಿಮೆ ಗರಿಮೆ ಹಬ್ಬಿತು ಜಗದ ದಶದಿಕ್ಕಿಗೆ ಆಧ್ಯಾತ್ಮವೇ ಭಾರತದ ಉಸಿರೆಂಬುದು ಅರುಹಿದೆ ವಿದೇಶಿಯರಿಗೆ …ಹಿರಿಯ ಕನ್ನಡ ಉಪನ್ಯಾಸಕರು ಪ್ರೊ. ಸಿದ್ದು ಸಾವಳಸಂಗ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಸಿಡಿಲಮರಿ ಸ್ವಾಮಿ ವಿವೇಕಾನಂದ
ಭಾರತೀಯ ಸಂಸ್ಕೃತಿಗೆ ಎಂಥ ಪರಮಾನಂದ !
ವೀರಸನ್ಯಾಸಿ ನೀನೇ ನಮ್ಮ ಭಾರತ ದೇಶಕ್ಕೆ ಸ್ಪೂರ್ತಿ
ನಿನ್ನನ್ನು ನೆನೆದರೆ ಮೈ ರೋಮಾಂಚನ ದಿನಂಪೂರ್ತಿ !!
ಸ್ವಾಮಿ ಪರಮಹಂಸರ ಪ್ರೀತಿಯ ಶಿಷ್ಯ
ಕಳಚಿದೆ ಭಾರತೀಯರ ಅಜ್ಞಾನದ ದಾಸ್ಯ !
ಯುವಕರಿಗೆ ಅದ್ಭುತ ಆದರ್ಶದ ಮಾರ್ಗದರ್ಶಕ
ಅನುದಿನವೂ ನಿನ್ನ ನೆನೆಯುವುದೇ ನಮಗೆ ನಾಕ !!
ಚಿಕಾಗೋ ನಗರದಲ್ಲಿ ಅನುರಣಿಸಿತು ನಿನ್ನ ಭಾಷಣ
ಸರ್ವಜನ ಎದ್ದುನಿಂತು ಚಪ್ಪಾಳೆ ತಟ್ಟಿದ ಪುಣ್ಯ ಕ್ಷಣ !
ಭಾರತದ ಹಿರಿಮೆ ಗರಿಮೆ ಹಬ್ಬಿತು ಜಗದ ದಶದಿಕ್ಕಿಗೆ
ಆಧ್ಯಾತ್ಮವೇ ಭಾರತದ ಉಸಿರೆಂಬುದು ಅರುಹಿದೆ ವಿದೇಶಿಯರಿಗೆ !!
ನಿನ್ನ ಮಾತು ಕೇಳಿದ ಬಿಳಿಯರು ಮಂತ್ರಮುಗ್ಧ
ಪಾಶ್ಚಿಮಾತ್ಯದೆಲ್ಲೆಡೆ ಹಬ್ಬಿತು ನಿನ್ನ ಕೀರ್ತಿಯ ಶಬ್ದ !
ಕರೆ ಕರೆದು ಮಾಡಿದರು ನಿನಗೆ ಸನ್ಮಾನ ಸಮಾರಂಭ
ಭಾರತೀಯರಿಗೆ ಅದು ಪುಣ್ಯ ಪರ್ವದ ಆರಂಭ !!
ಮತ್ತೊಮ್ಮೆ ಜನಿಸಿ ಬಾ ಈ ಪವಿತ್ರ ನೆಲದಲ್ಲಿ
ಎಲ್ಲೆಡೆ ನಿನ್ನಿಂದಲೇ ಇನ್ನೊಮ್ಮೆ ಕ್ರಾಂತಿ ಮೊಳಗಲಿ !
ಮಲಗಿದ ಜನರನ್ನು ಎಚ್ಚರಿಸಲು ನೀನೇ ಸೂಕ್ತ ಪರಮಾತ್ಮ
ದಾರಿ ಕಾಯುತ್ತಿದೆ ನಿನಗಾಗಿ ಭಾರತೀಯರ ಕೋಟ್ಯಾನುಕೋಟಿ ಆತ್ಮ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ.
