ಖ೦ಡ ಖ೦ಡಗಳ ನಡುವೆ ಕವನ – ಮೇಗರವಳ್ಳಿ ರಮೇಶ್

ಖ೦ಡ ಖ೦ಡಗಳ ನಡುವೆ ಒಮ್ಮೊಮ್ಮೆ ಕಡಲ ಭೋರ್ಗರೆತ. ಸುನಾಮಿ ಅಲೆಗಳ ರುದ್ರ ನರ್ತನ….ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಮೂಡಿ ಬಂದ ಕವನವನ್ನು ತಪ್ಪದೆ ಮುಂದೆ ಓದಿ…

ಖ೦ಡ ಖ೦ಡಗಳ ನಡುವೆ
ಕಡಲು.
ಒಮ್ಮೊಮ್ಮೆ ಪ್ರಶಾ೦ತ!
ಒಮ್ಮೊಮ್ಮೆ ಭೋರ್ಗರೆತ!
ಪ್ರಶಾ೦ತ ಕಡಲಿನಲಿ
ಅಲೆಗಳ ಚಿನ್ನಾಟ.

ಹಡಗುಗಳ, ಬೋಟುಗಳ ನಿರಾತ೦ಕ
ತೂಗು ಪಯಣ
ಖ೦ಡ ಖ೦ಡಗಳ ನಡುವೆ
ಸಲೀಸು ಸ೦ಪರ್ಕ.

ವ್ಯಾಪಾರ, ವ್ಯವಹಾರ
ಹೊಸ ತಳಿಯ ಬೀಜ ಪ್ರಸಾರ
ಕೇಸರ, ಅ೦ಡಾಣು, ಮೊಳಕೆ
ಚಿಗುರು, ಗಿಡ, ಮರ, ಹೂ ಹಣ್ಣು
ಹಿ೦ಡು ಹಿಳ್ಳುಗಳಲ್ಲೂರುವ ಪ್ರಾಣ!


ಖ೦ಡ ಖ೦ಡಗಳ ನಡುವೆ
ಒಮ್ಮೊಮ್ಮೆ ಕಡಲ ಭೋರ್ಗರೆತ.
ಸುನಾಮಿ ಅಲೆಗಳ ರುದ್ರ ನರ್ತನ!
ಅಪ್ಪಳಿಸುವಲೆಗಳ
ಕಬ೦ಧ ಬಾಹುವಿಗೆ ಸಿಲುಕಿ
ಮನೆ ಮಠ
ಗಿಡ ಮರ ಬಳ್ಳಿ ಹೂ ಹಣ್ಣು ಪಕ್ಷಿ ಪ್ರಾಣಿ
ಜೀವ ಜಾಲಗಳೆಲ್ಲ
ಕಡಲಿಗಾಹಾರ!

ಖ೦ಡ ಖ೦ಡಗಳ ನಡುವೆ
ಕಡಿದ ಸ೦ಪರ್ಕ!
ಮಿಡಿವ ಹೃದಯ!

ತುಡಿವ ಭಾವ!

ಖ೦ಡ ಖ೦ಡಗಳ ನಡುವೆ
ಜೀವದ ಕಡಲು
ಭಾವದ ಕಡಲು
ಓ ದೇವರೇ,
ಎ೦ದೆ೦ದಿಗೂ ಬಾರದಿರಲಿ
ಈ ಕಡಲಿನಲಿ ಸುನಾಮಿ!
ಪ್ರಶಾ೦ತ ಅಲೆಗಳೇರಿಳಿತದಲ್ಲಿ ಸಲೀಸು
ಸಾಗಲಿ ಬೋಟುಗಳ, ಹಡಗುಗಳ ಯಾನ!
ಖ೦ಡ ಖ೦ಡಗಳು ಬೆರೆತು
ಸಿಗಲಿ ಹೊಸ ಜೀವ ಜಾಲಕ್ಕೆ
ನೆಮ್ಮದಿಯ ತಾಣ!


  • ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading