ಮುಂಗಾರು ಮಳೆಯ ವಿಶೇಷ ಸೊಪ್ಪು. ಇದರ ವಿಶೇಷತೆಯ ಕುರಿತು ಲೇಖಕರು, ವಿಮರ್ಶಕರು ಆದ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಡವಿ ಸೊಪ್ಪುಗಳಲ್ಲಿಯೇ ಸೀಗೆಸೊಪ್ಪು, ರಾಜಸೊಪ್ಪು, ಸೀಗೆಸೊಪ್ಪು ಹಾಗೆಲ್ಲಾ ಸದಾ ಕಾಲ ಸಿಗುವ ಸೊಪ್ಪಲ್ಲ. ಮುಂಗಾರು ಮಳೆಯೊಂದಿಗೆ ಕಾಡಿನಲ್ಲಿ ಮುಳ್ಳುಪೊದೆ ಮೆಳೆಯಾಗಿ ಚಿಗುರುವ ಸೊಪ್ಪು ಇದು. ಶ್ರಾವಣ ಮಾಸದವರೆಗಿನ ಮುಂಗಾರು ಮುಗಿಯಿತೆಂದರೆ ಸೀಗೆಸೊಪ್ಪು ಸಿಗುವುದು ಕಷ್ಟ. ಈ ಸೊಪ್ಪು ಮತ್ತೆ ಸಿಗಲು ಮತ್ತೊಂದು ಮುಂಗಾರು ಬರುವವರೆಗೆ ಕಾಯಬೇಕು.


ತೊಗರಿ ಬೇಳೆ ಹಾಕಿ ಸೊಪ್ಪು ಬೇಯಿಸಿ ಹಾಲಿನಲ್ಲಿ ಸೊಪ್ಪು ಕುಸುವಿ ನೀರು ಬಸಿದು ತಯಾರಿಸಿದ ಸೀಗೆಸೊಪ್ಪಿನ ಬಸ್ಸಾರಿನ ಜೊತೆಗೆ ಬಿಸಿ ರಾಗಿಮುದ್ದೆ -ಸೀಗೆಸೊಪ್ಪಿನ ಪಲ್ಯಕ್ಕೆ ನಾಟಿಕೋಳಿ ಮೊಟ್ಟೆ ಸುರಿದು ಒಗ್ಗರಣೆ ಕೊಟ್ಟು ಅಗ್ಗರಿಸಿದ ಊಟದ ರುಚಿಯೇ ರುಚಿ !
ತೀಟೆಗೆಡ್ಡೆ ಸೊಪ್ಪಿನ ಮಸ್ಸೊಪ್ಪು ಜೊತೆಯಲ್ಲಿ ಕಾಳುಹಪ್ಪಳ ನೆಂಚಿಕೊಂಡು ಬಿಸಿ ರಾಗಿಮುದ್ದೆ – ಅನ್ನ ಉಂಬಲು ಬಲು ರುಚಿ !
- ಡಾ.ವಡ್ಡಗೆರೆ ನಾಗರಾಜಯ್ಯ
