ಶಿರಸಿಯ ಚಾರ್ಲಿ ಇನ್ನು ನೆನಪು ಮಾತ್ರ – ರಾಜು ಕಾನಸೂರು

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಯಾರೋ ಅಪರಿಚಿತರು ಸಾಕಿದ ಲ್ಯಾಬ್ರಡಾರ್ ಶ್ವಾನದ ಸ್ಥಿತಿ ನೋಡಿದರೆ ಮನಸ್ಸು ಕರಗದೇ ಇರದು, ತನ್ನ ಮಾಲೀಕನ ಬರುವಿಕೆಗಾಗಿ ನಿತ್ಯ ಕಣ್ಣೀರು ಹಾಕುತ್ತಾ ಕೊನೆ ಉಸಿರು ಎಳೆದ ಶಿರಸಿಯ ಚಾರ್ಲಿ, ಮುಂದೆ ಓದಿ…

ಇತ್ತೀಚಿಗೆ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಚಲನಚಿತ್ರವೆಂದರೆ ಚಾರ್ಲಿ 777. ಈ ಚಿತ್ರದಲ್ಲಿ ನಾಯಕ ನಟನಿದ್ದರೂ ಈ ಚಿತ್ರದಲ್ಲಿರುವ ಲ್ಯಾಬ್ರಡಾರ್ ತಳಿಯ ಶ್ವಾನವೊಂದು ನಾಯಕ ನಟನಿಗಿಂತಲೂ ಅದ್ಬುತವಾಗಿ ಅಭಿನಯಿಸುವುದರ ಮೂಲಕ ರಾಜ್ಯದ ಜನರ ಪ್ರಿತಿಗೆ ಪಾತ್ರವಾಗಿತ್ತು. ಈ ಶ್ವಾನ ಎಷ್ಟೊಂದು ಭಾವಪೂರ್ಣವಾಗಿ ಅಭಿನಯಿಸಿತ್ತು ಅಂದ್ರೆ ಈ ಚಿತ್ರ ನೋಡಿದವರು ಒಮ್ಮೆ ಕಣ್ಣಲ್ಲಿ ನೀರು ಹಾಕದಿರಲು ಸಾದ್ಯವೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಸುಂದರವಾಗಿ ಅಭಿನಯಿಸಿದೆ. ಈ ಚಿತ್ರದಲ್ಲಿ ನಾಯಕ ನಟನ ಹಾಗು ಶ್ವಾನದ ಪ್ರೀತಿ ವಿಶ್ವಾಸದ ಮೇಲೆ ಇಡೀ ಚಿತ್ರಕಥೆ ನಿಂತಿದೆ. ಇದೇ ರೀತಿಯ ನಿಜ ಘಟನೆಯೊಂದು ಇದೀಗ ಜನರ ಮನಕಲಕುತ್ತಿದೆ.

ತನ್ನ ಮಾಲೀಕನಿಗಾಗಿ ಕಣ್ಣೀರು ಹಾಕುತ್ತಿರುವ ಚಾರ್ಲಿ ಕೊನೆಯ ಚಿತ್ರ ಫೋಟೋ ಕೃಪೆ : amazing planet

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಯಾರೋ ಅಪರಿಚಿತರು ಸಾಕಿದ ಲ್ಯಾಬ್ರಡಾರ್ ಶ್ವಾನದ ಸ್ಥಿತಿ ನೋಡಿದರೆ ಒಮ್ಮೆ ಮನಸ್ಸು ಚುರ್ ಗುಟ್ಟುತ್ತದೆ. ಸಂಪೂರ್ಣವಾಗಿ ಅನಾರೋಗ್ಯಕ್ಕೆ ಒಳಗಾದ ಈ ಶ್ವಾನವನ್ನು ವಾರಸುದಾರ ಕರುಣೆ ತೋರದೆ ಗೋಣಿ ಚೀಲದಲ್ಲಿ ಹಾಕಿ ಚಿಪಗಿ ರಸ್ತೆಯಲ್ಲಿ ಅನಾಥವಾಗಿ ಬಿಟ್ಟು ಹೋಗಿದ್ದಾನೆ. ಮೊದಲೇ ಹೇಳಿದಂತೆ ಚಾರ್ಲಿ ಚಿತ್ರದಲ್ಲಿ ನಾಯಕ ನಟ ತನಗೆ ಯಾರೂ ಇಲ್ಲದ ಸಂಧರ್ಭದಲ್ಲಿ ಪ್ರೀತಿ ವಿಶ್ವಾಸ ಕೊಟ್ಟ ಶ್ವಾನಕ್ಕೆ ಜೀವ ಉಳಿಸಲು ಶತ ಪ್ರಯತ್ನಮಾಡುತ್ತಾನೆ‌. ಆದರೆ ಇಲ್ಲೊಬ್ಬ ವಾರಸುದಾರ ತನಗೆ ಪ್ರೀತಿ ವಿಶ್ವಾಸ ಕೊಟ್ಟ ಶ್ವಾನಕ್ಕೆ ಆನಾರೋಗ್ಯ ಕಾಡಿದ ಮೇಲೆ ಇನ್ನು ಶ್ವಾನ ಬದುಕುವುದಿಲ್ಲವೆಂದು ರಸ್ತೆ ಮೇಲೆ ಒಂಟಿಯಾಗಿ ಬಿಟ್ಟು ಹೋಗುತ್ತಾನೆ. ಹೀಗೆ ತನಗೆ ಒಂಟಿಯಾಗಿ ಬಿಟ್ಟು ಹೋಗಿದ್ದ ಶ್ವಾನವು ತನ್ನ ವಾರಸುದಾರ ಮತ್ತೆ ತನ್ನನ್ನು ನೋಡಲು ಬಂದೇ ಬರುತ್ತಾನೆಂದು ಸಾವು ಬದುಕಿನ ನಡುವೆ ನರಕಯಾತನೆ ಅನುಭವಿಸಿ ಇದೀಗ ಮರಣ ಹೊಂದಿದೆ.

ಫೋಟೋ ಕೃಪೆ : amazing planet

ಈ ಶ್ವಾನವು ಚಿಪಗಿ ರಸ್ತೆಯಿಂದ ಸಾಗುತ್ತಿದ್ದ ಮರಾಠಿಕೊಪ್ಪದ ಗ್ಯಾರೆಜ್ ಮೇಸ್ತ್ರಿ ನಾಗರಾಜ ನಾಯ್ಕ ಎಂಬುವನ ಕಣ್ಣಿಗೆ ಬಿದ್ದಿತ್ತು. ತಟ್ಟನೇ ಚಾರ್ಲಿ ಚಿತ್ರದ ನೆನಪು ಮಾಡಿಕೊಂಡ ನಾಗರಾಜ ನಾಯ್ಕ ಈ ಶ್ವಾನದ ಹೀನಾಯ ಪರಿಸ್ಥಿತಿ ಕಂಡು ಮಮ್ಮಲ ಮರುಗಿ ಈ ಶ್ವಾನವನ್ನು ಹೇಗಾದರೂ ಮಾಡಿ ಬದುಕಿಸಲು ಕೂಡಲೇ ಪ್ರಾಣಿ ಪಕ್ಷಿ ತಜ್ಞ ರಾಜೆಂದ್ರ ಸಿರ್ಸಿಕರ್ ನಡೆಸುತ್ತಿರುವ ಅನಾಥ ಪ್ರಾಣಿ ಪಕ್ಷಿಗಳ ರಕ್ಷಣಾ ಮತ್ತು ಪುನರ್ ವಸತಿ ಕೆಂದ್ರಕ್ಕೆ ತಂದು ಬಿಟ್ಟಿದ್ರು. ಈ ಶ್ವಾನವನ್ನು ಪರೀಕ್ಷಿಸಿರುವ ಪ್ರಾಣಿ ಪಕ್ಷಿ ರಾಜೆಂದ್ರ ಸಿರ್ಸಿಕರ್ ಕೂಡಾ ತೀವೃತರವಾಗಿ ಅನಾರೋಗ್ಯಕ್ಕೊಳಗಾಗಿ ಈಗೋ ಆಗೋ ಸಾಯುವ ಸ್ಥಿತಿಯಲ್ಲಿದ್ದ ಶ್ವಾನಕ್ಕೆ ಕೂಡಲೇ ಚಿಕಿತ್ಸೆ ನೀಡಿದ್ರು..

ರಾಜೇಂದ್ರ ಸಿರ್ಸಿಕರ್, ಅಮೇಜಿಂಗ್ ಪೆಟ್ ಪ್ಲಾನೆಟ್ ಮುಖ್ಯಸ್ಥರ ಜೊತೆ ಸಿರಸಿ ಚಾರ್ಲಿ ಫೋಟೋ ಕೃಪೆ : amazing planet

 

ಆದ್ರೆ ಮಾಲೀಕನನ್ನು ಕೊನೆಯ ಸಲ ನೋಡಲೇಬೇಕು ಅನ್ನೋ ಮನಸ್ಥಿತಿ ಹೊಂದಿದ್ದ ಈ ಶ್ವಾನ ಕಡೆಗೂ ಆ ದುರಾದೃಷ್ಟ ಮಾಲೀಕನ ಕೊರಗಲ್ಲೇ ಪ್ರಾಣ ಬಿಟ್ಟಿದೆ. ಅದರ ಅಂತ್ಯಸಂಸ್ಕಾರ ಕಾರ್ಯವನ್ನೂ ಕೂಡ ಸೂರಜ್ ಸಿರ್ಸಿಕರ್ ನೆರವೇರಿಸಿದ್ದಾರೆ.

ರಾಜೇಂದ್ರ ಸಿರ್ಸಿಕರ್, ಅಮೇಜಿಂಗ್ ಪೆಟ್ ಪ್ಲಾನೆಟ್ ಮುಖ್ಯಸ್ಥರ ಜೊತೆ ಶಿರಸಿ ಚಾರ್ಲಿ (ಫೋಟೋ ಕೃಪೆ : amazing planet )

ಲ್ಯಾಬ್ರಡಾರ್ ಶ್ವಾನದ ವಿಶೇಷವೆಂದರೆ ಅದು ಜನರ ಪ್ರೀತಿ ವಿಶ್ವಾಸಗಳಿಸುವ ಶ್ವಾನ. ತನ್ನನ್ನು ಸಾಕುವ ವಾರಸುದಾರನ ಪ್ರೀತಿ ಗಳಿಸಿದ ಮೇಲಂತೂ ಮನೆಯಲ್ಲಿ ಮಗುವಿನಂತೆ ವರ್ತನೆಮಾಡುತ್ತದೆ. ಈ ಕಾರಣದಿಂದಲೇ ಜನರು ಲ್ಯಾಬ್ರೊಡರ್ ತಳಿಯನ್ನ ಬಹಳ ಇಷ್ಟಪಡುತ್ತಾರೆ‌. ಈ ಶ್ವಾನವು ತನ್ನ ಪ್ರೀತಿ ನಿಯತ್ತನ್ನ ಚಲನಚಿತ್ರದಲ್ಲಿಯೇ ಸಾಬೀತು ಮಾಡಿ ತೋರಿಸಿದೆ. ಈ ಶ್ವಾನವನ್ನೂ ಕೂಡಾ ಪ್ರೀತಿಯಿಂದೇ ಸಾಕಿದ್ದು. ಆದರೆ ಅದಕ್ಕೆ ಅನಾರೋಗ್ಯ ಬಂದು ಸಾಯುವ ಸ್ಥಿತಿಗೆ ಬಂದಿರುವುದರಿಂದ ಹೀಗೆ ರಸ್ತೆ ಮೇಲೆ ಬಿಟ್ಟು ಹೋಗಿದ್ದಾರೆ. ಆದ್ರೆ ಇಂತಹ ಕನಿಕರವಿಲ್ಲದ ಮನಸ್ಥಿತಿಯನ್ನ ಇನ್ನು ಮುಂದೆ ಯಾರೂ ತೋರಿಸಬೇಡಿ ಅಂತಾರೆ ರಾಜೇಂದ್ರ ಸಿರ್ಸಿಕರ್..

ಮಾಹಿತಿ ಸಂಗ್ರಹ ಕೃಪೆ : ಕರಾವಳಿ ಮುಂಜಾವು ಡಿಜಿಟಲ್


  • ರಾಜು ಕಾನಸೂರು (ಕರಾವಳಿ ಮುಂಜಾವು ಡಿಜಿಟಲ್ ಉಪಸಂಪಾದಕರು, ಲೇಖಕರು ) ಶಿರಸಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW