ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ, ಅದೇ ಸೂಳೆಕೆರೆ ಅಥವಾ ಶಾಂತಿ ಸಾಗರ.
(ಸ್ತ್ರೀ ಶ್ರೇಷ್ಠಳನ್ನ ಕಳಂಕವೆಂದು ಹಣೆಪಟ್ಟಿ ಕಟ್ಟಿದ ಜಾತಿಮನಸುಗಳು)
ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ. ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು. ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ ಶಾಂತಿ ಸಾಗರ. ಅಂತರ್ ಜಾತಿ ವಿವಾಹದ ದುರOತ ಕಥೆ.
https://arunprasadhombuja.blogspot.com/2022/10/blog-number-1037.html
ಅಕ್ಟೋಬರ್ 2019 ರಲ್ಲಿ ಸೂಳೆ ಕೆರೆ ತುಂಬಿ ತುಳುಕಿತ್ತು. ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ, ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ ಬಂದಿದ್ದ ಬಾರಿ ಮಳೆಗೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿವೆ. ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ ಪೋಸ್ಟ್ ನೋಡಿದ ನಾನು ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾರ್ಗವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.

11ನೇ ಶತಮಾನದಲ್ಲಿ (1128ರಲ್ಲಿ) ಕೇವಲ 3 ವರ್ಷದಲ್ಲಿ ಈ ಕೆರೆ ನಿರ್ಮಾಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ. ಅವಳು ಸ್ವರ್ಣವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು. ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಂಧರ್ವ ವಿವಾಹ ಆಗುತ್ತಾಳೆ.

ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರಂತೆ. ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆಯನ್ನು ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ, ಕೆರೆಗೆ ಹಾರವಾದಳೆಂಬ ಇತಿಹಾಸ ಇದೆ. ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ. ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.
ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ. ಈ ಹೆಸರು ಬದಲಿಸಿ ಶಾಂತವ್ವಳ ಸ್ಮಾರಕವಾಗಿ ಶಾಂತಿ ಸಾಗರ ಎಂದೂ ಕರೆಯುತ್ತಾರೆ. ಏಷ್ಯಾದಲ್ಲಿನ ಎರಡನೇ ಅತಿ ದೊಡ್ಡಕೆರೆ ಇದು (ಅಸ್ಸಾಂನ ಸಿಬಾ ಸಾಗರ ಅತಿ ದೊಡ್ಡ ಕೆರೆ). ಅಂದಾಜು 30 ಕಿ.ಮಿ. ಸುತ್ತಳತೆಯಲ್ಲಿ 6, 550 ಎಕರೆ ಪ್ರದೇಶದಲ್ಲಿ ಶೇಖರವಾಗುವ ನೀರು, 9 ರಿಂದ ಗರಿಷ್ಟ 27 ಅಡಿ ಆಳವಿದೆ, 70 ಕಿ.ಮಿ ದೂರದ ಚಿತ್ರದುಗ೯ ಪಟ್ಟಣ ಮತ್ತು 110 ಕಿ.ಮಿ ದೂರದ ಜಗಳೂರು ಪಟ್ಟಣ ಸೇರಿದಂತೆ ಸುಮಾರು 50 ಹಳ್ಳಿಗೆ ಇದು ಕುಡಿಯುವ ನೀರಿನ ಮೂಲವಾಗಿದೆ ಹಾಗೂ ಸುಮಾರು 400 ಎಕರೆ ಕೃಷಿಗೆ ಉಪಯೋಗ ಆಗುತ್ತಿದೆ.

800 ವಷ೯ದ ಹಿಂದೆ ನಿರ್ಮಿಸಿರುವ ಇದರ ನೀರಿನ ಸುಂದರ ತೂಬು ಈಗಲೂ ಸ್ವಲ್ಪವೂ ಹಾಳಾಗದೇ ಇರುವುದು ಅವತ್ತಿನ ಗುಣಮಟ್ಟದ ನಿರ್ಮಾಣ ಮತ್ತು ಇಂಜಿನಿಯರಿಂಗ್ ಕೌಶಲ್ಯವಾಗಿದೆ.
ಪ್ರೇಮ ವಿವಾಹ, ಅಂತರ್ ಜಾತಿ ವಿವಾಹ ಆ ಕಾಲದಲ್ಲಿ ಎಷ್ಟು ಜನ ವಿರೋಧಿ ಆಗಿತ್ತು ಎಂಬುದಕ್ಕೆ ಇದೊಂದು ಉದಾಹರಣೆ. ನಮ್ಮ ಜಿಲ್ಲೆಯ ಕೆಳದಿ ಅರಸರಲ್ಲಿ ದೀರ್ಘ ಕಾಲ ಮತ್ತು ಅತ್ಯುತ್ತಮ ಆಡಳಿತ ಮಾಡಿದ ರಾಜಾ ವೆಂಕಟಪ್ಪ ನಾಯಕ ಚಂಪಕ ಎಂಬ ಸುಂದರಿಯನ್ನ ಅವಳು ಬಿಡಿಸುತ್ತಿದ್ದ ನಿತ್ಯ ರಂಗೋಲಿಯಿಂದ ಆಕರ್ಷಿತನಾಗಿ ಪ್ರೇಮಿಸಿ ಮದುವೆ ಆದ್ದರಿಂದ ಚಂಪಕಳನ್ನು ಸೂಳೆ ಎಂದು ಕರೆಯುತ್ತಾರೆ ಮತ್ತು ಈ ಅಂತರ್ ಜಾತಿ ವಿವಾಹದ ಕಾರಣದಿಂದ ಕೆಳದಿ ಅರಸರ ಚರಿತ್ರೆಯಲ್ಲಿ ರಾಜಾ ವೆಂಕಟಪ್ಪ ನಾಯಕರನ್ನ ವಿಜೃಂಭಿಸದOತೆ ಮಾಡಿದ್ದಾರೆ. ಇದೆಲ್ಲ ಸೂಳೆಕೆರೆ ಎದುರು ನಿಂತಾಗ ನೆನಪಾಯಿತು.
ಶಿವಮೊಗ್ಗಕ್ಕೆ ಸಮೀಪ ಇರುವ ಇದು ವಾರಂತ್ಯಕ್ಕೆ ಹೇಳಿ ಮಾಡಿಸಿದ ಪಿಕ್ನಿಕ್ ಸ್ಪಾಟ್ ಕೂಡ ಒಮ್ಮೆ ಬೇಟಿ ಮಾಡಿ.
- ಅರುಣ್ ಪ್ರಸಾದ್ – ಹೊಂಬುಜ ರೆಸಿಡೆನ್ಸಿ ಮಾಲೀಕರು, ಆನಂದಪುರಂ
