‘ಹಣತೆ’ ಗಝಲ್ – ಸುಜಾತಾ ರವೀಶ್

ಹಚ್ಚಿದ ಹಣತೆಯ ಬೆಳಕು ಹೆಚ್ಚಿದ ಶಾಂತಿಯ ನೆರಳು ಸುತ್ತಲೂ ಪಸರಿಸಿ ನೆಮ್ಮದಿ ಲಭಿಸಲಿ ಇಂದು… ಸುಜಾತಾ ರವೀಶ್ ಅವರ ಸುಂದರ ಗಜಲ್ ನ್ನು ತಪ್ಪದೆ ಮುಂದೆ ಓದಿ…

ಹಚ್ಚಿದ ಹಣತೆಯ ಬೆಳಕು ದ್ವೇಷವ ತೊಲಗಿಸಿ ಐಕ್ಯವ ಮೆರೆಸಲಿ ಇಂದು
ಮುಚ್ಚಿದ ಕತ್ತಲೆಯ ಕೃತಿಮದ ತೆರೆಯ ಸರಿಸಿ ಹೊನಲು ಹರಿಸಲಿ ಇಂದು

ನೆಚ್ಚಿದ ಸಜ್ಜನತೆ ಸ್ನೇಹವು ಬಾಳಲಿ ದೊರೆಯುತ ಸುಖವ ತರುತಲಿರಲಿ
ಹೆಚ್ಚಿದ ಶಾಂತಿಯ ನೆರಳು ಸುತ್ತಲೂ ಪಸರಿಸಿ ನೆಮ್ಮದಿ ಲಭಿಸಲಿ ಇಂದು

ಆವರಿಸಿದ ತಮಜಾಡ್ಯ ಕರಗಿಹೋಗಲಿ ಜ್ಞಾನದ ಜ್ಯೋತಿಯ ಪ್ರಭಾವದಲಿ
ಆಗಮಿಸಿದ ಹೊಸ ಪ್ರಭಾತ ಕಿರಣ ವರ್ಷದ ಚೇತನ ಸುರಿಸಲಿ ಇಂದು

ಮನದ ರಿಪುಗಳನು ಸಾತ್ತ್ವಿಕತೆಯು ಎದುರಿಸಿ ದುರ್ಗುಣ ಹರಣವಾಗಲಿ
ಮನೆಯ ಕತ್ತಲೆಯ ಹೊಂಬೆಳಕು ಓಡಿಸಿ
ಚೈತನ್ಯ ತರಿಸಲಿ ಇಂದು

ಬೆಳಗುವ ಹಣತೆಯ ಸಾಲ ಈಕ್ಷಿಸುತಿಹಳು
ಸುಜಿಯು ಸಂತಸದಲಿ
ಮೊಳಗುವ ದಿವ್ಯಗೀತೆ ಅಂಗಣದಿ ರಿಂಗಣಿಸಿ ಸರ್ವರ ಹರಸಲಿ ಇಂದು


  • ಸುಜಾತಾ ರವೀಶ್ – ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading