ಶಾವಿಗೆ ಪಾಯಸ, ಸಾಬುದಾನಿ ಪಾಯಸ, ಅನ್ನದ ಪಾಯಸ ಹೀಗೆ ನಾನಾ ತರದ ಪಾಯಸ ತಿಂದಿದ್ದೇವೆ, ಯಾರಾದ್ರೂ ಸೋರೆಕಾಯಿ ಪಾಯಸ ತಿಂದಿಲ್ಲವೆಂದರೆ ರವೀಂದ್ರ ಕೆ. ಆರ್ ಅವರ ರೆಸಿಪಿ ನೋಡಿ ಮನೆಯಲ್ಲಿ ಮಾಡಿ ತಿನ್ನಿ …ಮಾಡುವುದು ಹೀಗೆ…

ಫೋಟೋ ಕೃಪೆ : dharwad cooks
ಬೇಕಾಗುವ ಸಾಮಾನುಗಳು :
ಸೋರೆಕಾಯಿ – ಒಂದು
ಜೋನಿಬೆಲ್ಲ – ರುಚಿಗೆ ತಕ್ಕಸ್ಟು
ತುರಿದ ತೆಂಗಿನ ಕಾಯಿ – ಸ್ವಲ್ಪ
ಏಲಕ್ಕಿ ಪುಡಿ – ಸ್ವಲ್ಪ
ದ್ರಾಕ್ಷಿ ಗೋಡಂಬಿ – ಸ್ವಲ್ಪ
ಈ ದಕ್ಷಿಣ ಕನ್ನಡಿಗರ ಪಾಕ ವೈವಿಧ್ಯತೆ ಎಷ್ಟೆಲ್ಲಾ ಚೆಂದ ಉಂಟು ಮಾರಾಯ್ರೆ. ಬಹುಶಃ ಇವರು ಪಾರ್ತೇನಿಯಂ ಎಲೆಯಿಂದಲೂ ಒಂದು ಪಲ್ಯವನ್ನೋ, ತಂಬುಳಿಯನ್ನೋ ಮಾಡಿದರೂ ಮಾಡಿಯಾರು….!

ಮಾಡುವ ವಿಧಾನ :
ಸೋರೆಕಾಯಿಯನ್ನು ಸಣ್ಣಗೆ ಹೆಚ್ಚಿ, ಬೇಯಿಸಿಟ್ಟುಕೊಂಡು, ಜೋನಿಬೆಲ್ಲ, ತುರಿದ ತೆಂಗಿನ ಕಾಯಿಯನ್ನು ರುಬ್ಬಿ ತೆಗೆದ ಪೇಸ್ಟ್ ನೊಂದಿಗೆ ಬೆರೆಸಿ, ಸ್ವಲ್ಪ ಏಲಕ್ಕಿ ಪುಡಿ ಉದುರಿಸಿ, ತಕ್ಕಷ್ಟು ನೀರು ಹಾಕಿ ಹದಕ್ಕೆ ಬರುವಂತೆ ಕುದಿಸಿದರೆ ಸ್ವಾದಿಷ್ಟ ಸೋರೆಕಾಯಿ ಪಾಯಸ ಸಿದ್ಧ. ಬೇಕೆಂದರೆ, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ಸಿಂಗರಿಸಬಹುದು.
ಹಿಂದೆಂದೂ ಸವಿದು ಕಂಡರಿಯದಿದ್ದ ನನಗೆ ಇದು ಬಲು ವಿಶೇಷವೆನಿಸಿತು. ಲಾಯ್ಕ್ ಇತ್ತ….
ನೀವೂ ಟ್ರೈ ಮಾಡಿ ನೋಡಿ.
- ರವೀಂದ್ರ ಕೆ. ಆರ್.
