ಒಳ್ಳೆಯದು ಒಳ್ಳೆಯವರನ್ನು ಸೆಳೆಯುತ್ತೆ

ನಾವು ತೊಡುವ ಬಟ್ಟೆ ನೋಡಿ ಜನ ನಮ್ಮನ್ನು ಬಡವರೆಂದು ಅಥವಾ ಶ್ರೀಮಂತರೆಂದು ಉಡುಗೆ ತೊಡುಗೆ ಮೇಲೆ ಅಳೆದು ಬಿಡುತ್ತಾರೆ. ಈ ಜಗತ್ತು ಈ ಜನರು ವಿಚಿತ್ರ ಅಲ್ವಾ..! ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಅಂಕಣವನ್ನು ತಪ್ಪದೆ ಮುಂದೆ ಓದಿ…

ವಿಚಾರಗಳಿಂದ, ತೋಡುವ ವಸ್ತ್ರಗಳಿಂದ, ಸಾಧನೆಗಳಿಂದ ಸರಳತೆಯನ್ನೇ ಹೊಂದಿರುವ ಸುಧಾ ಮೂರ್ತಿಯವರು ಒಮ್ಮೆ ಮಾರುಕಟ್ಟೆಗೆ ಸಿಂಪಲ್ಲಾಗ್ ಒಂದು ಸೀರೆ ಹಾಕಿಕೊಂಡು ಸಾಮಾನ್ಯ ಮಹಿಳೆಯಂತೆ ಮಾರುಕಟ್ಟೆಗೆ ಹೋಗಿ ಮಾವಿನ ಹಣ್ಣನ್ನು ಖರೀದಿಸಲು ಕೆಜಿ ಗೆ ಎಷ್ಟು ಎಂದು ಮಾರುವವನನ್ನು ಕೇಳುತ್ತಾರೆ. 100 ರೂಪಾಯಿ ಎನ್ನುತ್ತಾನೆ. ಅಷ್ಟರೊಳಗೆ ಸುಧಾ ಮೂರ್ತಿರವರ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಒಬ್ಬರು ಅಲ್ಲಿಗೆ ಬಂದು ಅದೇ ಮಾವಿನ ಹಣ್ಣಿನ ಬೆಲೆ ಎಷ್ಟು ಎಂದು ಕೇಳುತ್ತಾರೆ. ಆಗ ಅಂಗಡಿಯವ 200 ರೂಪಾಯಿ ಎನ್ನುತ್ತಾನೆ. ಹಣ್ಣು ಖರೀದಿಯ ನಂತರ ಆ ಉದ್ಯೋಗಿ ಸುಧಾ ಮೂರ್ತಿರವರನ್ನು ನೋಡಿ ನಮಸ್ತೆ ಮೇಡಂ ಎಂದು ಮಾತನಾಡಿ ಮುಂದೆ ಹೋಗುತ್ತಾರೆ.

ಆ ಉದ್ಯೋಗಿ ಅಲ್ಲಿಂದ ಮುಂದೆ ಹೋದ ಮೇಲೆ ಸುಧಾ ಮೂರ್ತಿಯವರು ಆ ಅಂಗಡಿ ಮಾಲೀಕನಿಗೆ ಹೀಗೆ ಕೇಳುತ್ತಾರೆ ಹಣ್ಣುಗಳ ಬೆಲೆ ನನಗೆ ನೂರು ರೂಪಾಯಿ ಎಂದು ಹೇಳಿದೆ ಆದರೆ ಆ ವ್ಯಕ್ತಿಗೆ ಇನ್ನೂರು ರೂಪಾಯಿ ಎಂದು ಹೇಳಿದೆ. ಯಾಕೆ ಹೀಗೆ ಎಂದು ಕೇಳಿದರು. ಆಗ ಅಂಗಡಿ ಮಾಲೀಕ ಹೇಳಿದ ಮೇಡಂ ಅವರು ಐಟಿ ಜನರು. ನೀವು ಸಾಮಾನ್ಯ ಟೀಚರ್. ನಿಮಗೆ ಇದೆಲ್ಲ ಅರ್ಥ ಆಗಲ್ಲ ಬಿಡಿ ಎನ್ನುತ್ತಾನೆ.

ಫೋಟೋ ಕೃಪೆ :google

ಅಂದರೆ ಅಲ್ಲಿ ಹಣ್ಣುಗಳನ್ನು ಖರೀದಿ ಮಾಡಲು ಬಂದ ಆ ಉದ್ಯೋಗಿ ಸುಧಾ ಮೂರ್ತಿಯವರಿಗೆ ‘ಮೇಡಂ’ ಎಂದು ಸಂಬೋಧಿಸಿ ಮಾತನಾಡುವಾಗ ಸುಧಾಮೂರ್ತಿಯವರನ್ನು ಆ ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುವ ಆ ಐಟಿ ಉದ್ಯೋಗಿಯ ಟೀಚರ್ ಇರಬೇಕೆಂದು ಆ ಮಾಲೀಕ ಭಾವಿಸಿದ್ದ. ಹೀಗಾಗಿ ಬಡ ಟೀಚರಿಗೆ ಕಡಿಮೆ ಬೆಲೆ ಹೇಳಿ ಐಟಿ ಉದ್ಯೋಗಿಗೆ ಹೆಚ್ಚಿನ ಬೆಲೆ ಕೇಳಿದ್ದ.

ಎಲ್ಲಿ ತಿಳಿದುಕೊಳ್ಳಬೇಕಾದದ್ದು ಇಷ್ಟೇ ನಾವು ತೊಡುವ ಬಟ್ಟೆ ನೋಡಿ ಜನ ನಮ್ಮನ್ನು ಬಡವರೆಂದು ಅಥವಾ ಶ್ರೀಮಂತರೆಂದು ಉಡುಗೆ ತೊಡುಗೆ ಮೇಲೆ ಅಳೆದು ಬಿಡುತ್ತಾರೆ. ಈ ಜಗತ್ತು ಈ ಜನರು ವಿಚಿತ್ರ ಅಲ್ವಾ..!

ಈ ವಿಷಯವನ್ನು ಕುರಿತು ಸುಧಾ ಮೂರ್ತಿಯವರು ಒಂದು ಮ್ಯಾಗ್ಜಿನ್ ಅಥವಾ ಪತ್ರಿಕೆಯಲ್ಲಿ ಬರೆದಿರುತ್ತಾರೆ. ಇದನ್ನು ಆ ಪತ್ರಿಕೆಯಲ್ಲಿ ಓದಿದ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ರವರು ಸುಧಾ ಮೂರ್ತಿ ಅವರಿಗೆ ನೇರವಾಗಿ ಪೋನಾಯಿಸುತ್ತಾರೆ. ಅಬ್ದುಲ್ ಕಲಾಂ ರವರು ನಿಮ್ಮ ಜೊತೆ ಮಾತನಾಡಬೇಕಂತೆ ಹೀಗಾಗಿ ಕಾಲ್ ಮಾಡಿದ್ದಾರೆ ಎಂದು ಸುಧಾ ಮೂರ್ತಿ ಅವರಿಗೆ ತಿಳಿಸಿದಾಗ ಸುಧಾ ಮೂರ್ತಿ ಅವರು ಅಚ್ಚರಿಗೊಳ್ಳುತ್ತಾರೆ. ಅಬ್ದುಲ್ ಕಲಾಂ ರವರು ನನ್ನ ಹತ್ತಿರ ಮಾತನಾಡುವುದು ಏನಿದೆ ಎಂದು. ಆ ದೂರವಾಣಿಯ ಕಾಲನ್ನು ಸ್ವೀಕರಿಸಿ ಮಾತನಾಡಿದಾಗ ಅಬ್ದುಲ್ ಕಲಾಂ ರವರು ಸುಧಾ ಮೂರ್ತಿಯವರು ಈ ಮೇಲಿನ ಘಟನೆಯನ್ನು ಉಲ್ಲೇಖಿಸಿ ಬರೆದ ಕಾಲಂ ಅನ್ನು ಓದಿ ತುಂಬಾ ತಮಾಷೆ ಎನಿಸಿ ಸುಧಾ ಮೂರ್ತಿ ಅವರಿಗೆ ಮಾತನಾಡಬೇಕೆನಿಸಿ ಕಾಲ್ ಮಾಡುತ್ತಾರೆ.

ಸ್ನೇಹಿತರೆ ಇಲ್ಲಿ ನಾನು ಅರಿತಿರುವುದು ಇಷ್ಟೇ ಒಳ್ಳೆಯತನ, ಸರಳತೆ, ಒಳ್ಳೆಯ ಆಲೋಚನೆಗಳು, ಒಳ್ಳೆಯ ಮಾತುಗಳು ಒಳ್ಳೆಯವರ ಗಮನ ಸೆಳೆಯುತ್ತವೆ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading