ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಹನಿಗವನಗಳು…
ಮಳೆಯೇಂಬೊ ರಾವಣ
ತಟ ತಟ ಕುಣಿದು
ಧರೆಯ ಮೇಲೆ ಹೊತ್ತು ತಂದ
ಶ್ರಾವಣ!
ಎಲ್ಲೆಡೆ ಹಚ್ಚ ಹಸಿರ ತೋರಣ
ನೆಲದ ಯೋಗಿಯ ಮೊಗದಿ
ನಗೆನವಿಲು ಜನನ
ಧಾರಿಣಿಯ ಒಡಲ ಮೇಲೆಲ್ಲಾ
ಹಸಿರು ಕಾವ್ಯ
ಕವನಗಳ ನರ್ತನ!!
***
ಆಷಾಡಕ್ಕೊಂದು ಕವಿತೆ
ಶ್ರಾವಣಕ್ಕೊಂದು ಕವಿತೆ
ಬರೆಯುವ ಕವಿಯಲ್ಲ ನಾನು
ನೀನು ನಕ್ಕಾಗಲೆಲ್ಲ
ಶ್ರಾವಣ
ಮುನಿಸಿಕೊಂಡಾಗ ಆಷಾಡ
ಬಲ್ಲೆಯ ನೀನು!
***
ಎದೆಯಲ್ಲಿ ನಿಲ್ಲದ
ನಿನ್ನ ನೆನಪಿನ ಶ್ರಾವಣದ
ಹನಿಗಳು
ಒಂದೊಂದಾಗಿ ಬರೆಸುತಿದೆ
ಕವನ
ಕವಿತೆಗಳು!
***
ಬಂದಿದೆ ಶ್ರಾವಣ
ಎಲ್ಲೆಲ್ಲೂ ಹರಿದ್ವರ್ಣವನ
ಉನ್ಮಾದದಲಿ ಕವಿಯ ಮನಸು
ಕುಣಿದಾoಗೆ ರಾವಣ
ಅಗಣಿತ ಭಾವಗಳ ತೊಂ ತನನ
ಎದೆಯ ತುಂಬ
ಕವನ ಕಾವ್ಯಗಳ ನರ್ತನ!
- ಹೆಚ್. ಪಿ. ಕೃಷ್ಣಮೂರ್ತಿ – ಬೆಂಗಳೂರು
