ಇದು ಕರ್ತವ್ಯ ನಿರ್ವಹಿಸಬೇಕಾದ ಸಮಯ – ಪ್ರೊ.ರೂಪೇಶ್



ಒಂದಾನೊಂದು ಕಾಲದಲ್ಲಿ ವಿದೇಶದಲ್ಲಿ ಓದಿ, ಅಧಿಕಾರ ಗಿಟ್ಟಿಸ್ಕೊಂಡ ಮಾತ್ರಕ್ಕೆ ಮಾನವೀಯತೆಯನ್ನು ಮರೆಯಬಾರದು. ವಿದೇಶದಲ್ಲಿ ಓದುವ ವಿದ್ಯಾರ್ಥಿಗಳು ಅಥವಾ ನೆಲೆಸಿರುವ ಭಾರತೀಯ ಯಾರೋದು ಅಣ್ಣನೋ, ತಂಗಿಯೋ. ಅವರಿಗೆ ಕಷ್ಟ ಎದುರಾದಾಗ ಅವರನ್ನು ರಕ್ಷಿಸುವುದನ್ನು ಬಿಟ್ಟು ವಿದೇಶಕ್ಕೆ ಯಾಕೆ ಓದಲು ಹೋದರು? ನಮ್ಮ ದೇಶದಲ್ಲೇ ವ್ಯವಸ್ಥೆ ಚನ್ನಾಗಿತ್ತು ಎಂದು ಮೂದಲಿಸುವ ಸಂದರ್ಭ ಈಗಲ್ಲ, ಅರ್ಥಪೂರ್ಣ ಲೇಖನವನ್ನು ಓದುಗರ ಮುಂದಿಟ್ಟಿದ್ದಾರೆ ಪ್ರೊ.ರೂಪೇಶ್ ಪುತ್ತೂರು ಅವರು, ಮುಂದೆ ಓದಿ…

ಸ್ವಂದೇಶ ಹೋಟೆಲ್ ಬೆಂಗಳೂರಿನ ಜಯನಗರದಲ್ಲಿ ಇತ್ತು . ಇಂದಿಲ್ಲ. ಅಂದು ಎಲ್ಲಾ ಕಡೆ ಚಹಾಕ್ಕೆ 5ರೂಪಾಯಿ ಇದ್ದಾಗ , ದಿನಾ ಐದಾರು ಬಾರಿ ಚಹಾಕ್ಕೆ ಹೋಗುವ ನಮಗೆ ಶಿಕ್ಷಕರು ಎಂಬ ಗೌರವದಲ್ಲಿ ಚಹಾ ಕಮ್ಮಿ ದರದಲ್ಲಿ ಕೊಡುವ ಆತ್ಮಿಯ ಹೋಟೆಲಾಗಿತ್ತು ಅದು.

2006ರಲ್ಲಿ ಆ ಹೋಟೇಲಿನವರ ಮಗಳು ನಮ್ಮ ಕಾಲೇಜಿನ ವಿದ್ಯಾರ್ಥಿನಿ. ಅಂದರೆ, ಈ ವಿದ್ಯಾರ್ಥಿನಿಯ ತಂದೆ -ತಾಯಿ ಸೇರಿ ಆ ಹೋಟೆಲ್ ನಡೆಸುತ್ತಿದ್ದರು. ಅವಳು ಎಲ್ಲೂ ತರಭೇತಿ (coaching)ಗೆ ಹೋಗದೆ , ಕಾಲೇಜು ಲೈಬ್ರರಿ ಪುಸ್ತಕಗಳಿಂದ ನಮ್ಮಂತವರಲ್ಲಿ ಕೇಳಿ ಕಲಿತು, ಅವಳ ಸ್ವಂತ ಪ್ರಯತ್ನದಿಂದ 93.+% ಅಂಕ ಪಡೆದಳು. MBBS seat ಸಿಕ್ಕರೂ, ಅಷ್ಟು ದುಡ್ಡು ಪದವಿ ಸಂಪೂರ್ಣದವರೆಗೆ ಹೊಂದಾಣಿಕೆಗೆ ಅವರಲ್ಲಿರಲಿಲ್ಲ. ಆ ಸಮಯ ಅವಳ ಅಣ್ಣನೂ PGಗೆ ಕಲಿಯುತ್ತಿದ್ದ. ಕೊನೆಗೆ ಚೆನ್ನಾಗಿ ವ್ಯಾಪಾರ ಇರುವ ಹೋಟೆಲ್ ಮಾರಿದರೆ ಅವಳನ್ನು ವಿದೇಶದಲ್ಲಿಯಾದರೂ MBBS ಕಲಿಸಬಹುದು ಎಂದು ಮಾರಿದರು.

ಅವಳು ವಿದೇಶದಲ್ಲಿ MBBS ಮಾಡಿ ಬಂದು, ಭಾರತದ MCI (Medical Council of India) ನಡೆಸುವ FMGE(Foreign Medical Graduates Examination) ಬರೆದು ಪಾಸ್ ಆಗಿ ಇಲ್ಲೇ Practice ಮಾಡ ತೊಡಗಿದಳು. ಮದುವೆಯೂ ಆಯಿತು.

ಫೋಟೋ ಕೃಪೆ : exeter.ac.uk

ಅಂದು ಹೋಟೆಲ್ ಮಾರಿದ ಮೇಲೆ ಅವರ ತಂದೆ ಬೇರೆ ಹೋಟೆಲಿನಲ್ಲಿ ಪಾಕಗಾರನಾಗಿ ಕೆಲಸ ಮಾಡಿದ್ದರು. ಅವಳ‌ ತಾಯಿಯೂ ನಿಪ್ಪಟ್ಟು, ಚಕ್ಕುಲಿ, ಕಾರಕಡ್ಡಿ ಮುಂತಾದುವನ್ನು ಮನೆಯಲ್ಲಿ ಮಾಡಿ ಬೇಕರಿಗೆ ಹಂಚುತ್ತಿದ್ದರು.

ಎಲ್ಲಾ ವಿದ್ಯಾರ್ಥಿಗಳು ಅನರ್ಹರಾಗಿ ಈ ದೇಶ ಬಿಟ್ಟು ವೈದ್ಯಕೀಯ ಶಿಕ್ಷಣ ಮಾಡಲು ಹೋಗಿದ್ದು ಎನ್ನುವವರು, ನಮ್ಮ ದೇಶದ ಸಾಮಾನ್ಯರಲ್ಲಿ ಸಾಮಾನ್ಯರಾದ ತಂದೆ ತಾಯಿ ಎಂಬ ಮನುಷ್ಯ ಮನಸ್ಸುಗಳ ಚಿಕ್ಕ ಪುಟ್ಟ ಆಸೆ, ನೋವು ಅರ್ಥ ಮಾಡಬೇಕು. ವಿದೇಶದಲ್ಲಿರುವ ಚಿಗುರಬೇಕಾದ ಹೂವಿನಂತಹಾ ವಿದ್ಯಾರ್ಥಿಗಳನ್ನು ಅರ್ಥಮಾಡಬೇಕು. ನನ್ನ ಮಗ/ಮಗಳು ಅಲ್ಲಿದ್ದರೆ ಎಂದು ತನ್ನನ್ನು ತಾನು ನಿಲ್ಲಿಸಿ ಯೋಚಿಸಬೇಕು. ಅದೂ ಅಲ್ಲದೆ ಅಧಿಕಾರದಲ್ಲಿರುವ ರಾಜಕೀಯ ವ್ಯಕ್ತಿಗಳ ಮತ್ತು ಹಲವು ಆಡಳಿತಾಧಿಕಾರಿಗಳ ಮಕ್ಕಳು ವಿದೇಶದಲ್ಲಿ ಕಲಿಯುವುದು /ಕಲಿತಿದ್ದು ನೆನಪಿಸಿಕೊಳ್ಳಬಹುದು.

ಅಕ್ಕ ಪಕ್ಕದ ಮನೆಗೆ/ಜಿಲ್ಲೆಗೆ/ರಾಜ್ಯಕ್ಕೆ ಹೋದಂತೆ ಅಲ್ಲ.

ಈ ದೇಶದಿಂದ ವಿದೇಶಕ್ಕೆ ಹೋಗುವ ರೀತಿ. ಅದಕ್ಕೆ ಅದರದೇ ಆದ procedure(ವಿಧಾನ) rules and regulation (ನಿಯಮಗಳು ಮತ್ತು ನಿಬಂಧನೆಗಳು) ಇದೆ. Passport ಬೇಕು., ವಲಸೆ ತಪಾಸಣೆ(emigration check).. ಮುಂತಾದ ಹಲವು ಮಜಲುಗಳು ಇವೆ. ಇದು ಸಾಮಾನ್ಯರಲ್ಲಿ ಸಾಮಾನ್ಯ ಪೌರನಿಗೂ , ರಾಜಕೀಯ+ ಆಡಳೀತಾಧಿಕಾರಿ ಮಕ್ಕಳಿಗೂ ಅನ್ವಯಿಸುತ್ತದೆ. (ಪಡೆಯುವ /ಮಜಲು ದಾಟುವ ವೇಗ ಹೇಗಿರಬಹುದು ಎಂದು ನಿಮ್ಮ ಊಹೆಗೆ ಬಿಟ್ಟಿದ್ದು).

ಶಾಲಾ ಕಾಲೇಜಿನ ಹಾಸ್ಟೆಲಿನಲ್ಲಿ ಮಕ್ಕಳನ್ನು ಪೋಷಕರು ವಾರ್ಡನ್ ಕೈಗೆ ಒಪ್ಪಿಸಿದಂತೆ. ವಿದೇಶದಲ್ಲಿ ನಮ್ಮ ದೇಶದ ವಿದ್ಯಾರ್ಥಿಗಳು/ ಕಾರ್ಮಿಕರಿಗೆ ಒಬ್ಬ embassy/ರಾಯಭಾರಿ ಎಂಬ ಒಬ್ಬರನ್ನು ಜನತೆಯ ತೆರಿಗೆಯಿಂದ ಸರ್ಕಾರ ನಿಯೋಜಿಸು(ಸಾಕು)ತ್ತಾರೆ. ಉಳಿದ ಅಥವಾ ಬೇರೆ ಸಮಯ ಆ ರಾಯಭಾರಿಯ ಕೆಲಸ ಏನು ಎಂಬುದು ಈ ಕ್ಷಣ ನಮಗೆ ಬೇಡ. ಆ ರಾಯಭಾರಿಗೆ ಸಂಕಟದ ಸಮಯದಲ್ಲಿ ವಿದೇಶದಲ್ಲಿರುವ ದೇಶದ ಜನರ ಸೌಕರ್ಯದ ಜವಾಬ್ದಾರಿ ಇರುತ್ತದೆ. ಎಷ್ಟು ಜನರು ತನ್ನ ದೇಶದಿಂದ ವಿದೇಶದಲ್ಲಿರುವ ಪ್ರತೀಯೊಂದು ರಾಷ್ಟ್ರದಲ್ಲಿ ಇದ್ದಾರೆ ಎನ್ನುವ ದತ್ತಾಂಶ/ಅಂಕಿ ಅಂಶ/ data ವಿದೇಶಾಂಗ ಸಚಿವಾಲಯದಲ್ಲಿ ಇರಬೇಕು ಹಾಗೂ ಆಯಾ ರಾಷ್ಟ್ರದಲ್ಲಿ ನೆಲೆಸಿರುವ ರಾಯಾಭಾರಿಯಲ್ಲೂ (ಲೆಕ್ಕ)ಇರಬೇಕು.

ಕೆಲವರ ಮಕ್ಕಳು ಒಂದಾನೊಂದು ಕಾಲದಲ್ಲಿ ವಿದೇಶದಲ್ಲಿ ಕಲಿತು ಅಲ್ಲಿಯೇ ನೆಲೆಸಿದವರು ಅಥವಾ ಸ್ವದೇಶಕ್ಕೆ ಬಂದವರು – ಇಂದು ವಿದೇಶದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ಮೂದಲಿಸುವುದು ಕಂಡಾಗ….



ನನ್ನ ಜೊತೆ ಕಮ್ಮಿ ಮಾರ್ಕ್ ಪಡೆದವರು , ಜಾಸ್ತಿ ಮಾರ್ಕ್ ಪಡೆದವರು ಎಲ್ಲಿದ್ದಾರೆ? ಎಂದು ನೋಡಿದಾಗ ವಿದ್ಯಾಭ್ಯಾಸದಿಂದ ದೊರೆಯುವ ಕೆಲಸ ಸಿಗದ ನನ್ನಂತವರು ನರಿ – ದ್ರಾಕ್ಷಿಯ ಪಂಚತಂತ್ರ ಕಥೆಯ ಪಾತ್ರಧಾರಿಗಳು ಎನ್ನಬಹುದು.

ಮರಳಿ ಬರಲು ಕೆಲ ತಿಂಗಳ ಹಿಂದೆ ಭಾರತ ಸರ್ಕಾರವು ಹೇಳಿದ್ದರು, ಆದರೆ ಆ ಸಮಯದಲ್ಲಿ ಕೊರೋನಾ ಹೆಸರಿನಲ್ಲಿ ವಿಮಾನಯಾನ ಭಾರತದಿಂದ ಪುನಃ ತೊಡಗಿರಲಿಲ್ಲ ಎಂಬುವುದು ನಮಗೆಲ್ಲಾ ಗೊತ್ತಿರುವ ವಿಷಯ. ಈ ಸಮಸ್ಯೆ ಎಂದೆಂದೂ ಬರುವ, ನಿರೀಕ್ಷಿಸಬಹುದಾದ, ಕಾಲ ಕಾಲಕ್ಕೆ, ಋತು ಬದಲಾದಾಗ ಅಥವಾ ವಿದೇಶಕ್ಕೆ‌ ಹೋದ ನಮ್ಮ ಜನತೆಯಿಂದ ಉದ್ಭವಿಸಿದ ಸಮಸ್ಯೆಯಲ್ಲ. ಆದರೆ ಇದರಿಂದ ರಕ್ಷಿಸುವ ಭಾದ್ಯತೆ / #ಜವಾಬ್ದಾರಿ ಇರುವವರು ತಮ್ಮ ಕರ್ತವ್ಯ ನಿರ್ವಹಿಸಬೇಕಾದ ಸಮಯ.

ನಮನಗಳೊಂದಿಗೆ

ನಿಮ್ಮವ ನಲ್ಲ

*ರೂಪು*


  • ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading