ಬೇಸಿಗೆ ಆರಂಭವಾಗುವ ಸಮಯದಲ್ಲಿ ಮಕ್ಕಳ ಪರೀಕ್ಷೆಗಳ ಒತ್ತಡವೂ ಜೊತೆಯಾಗಿರುವುದರಿಂದ ದೇಹದ ಶಕ್ತಿ, ಮನಸ್ಸಿನ ಸ್ಥೈರ್ಯ ಮತ್ತು ರೋಗನಿರೋಧಕ ಶಕ್ತಿ ಮೂರನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಮಾರ್ಗಗಳು :
ನೀರಿನ ಅಸಮತೋಲನ (Dehydration ಆಗದಂತೆ) :
ಬೆಳಿಗ್ಗೆ ಎದ್ದು ತಾಜಾ ನೀರು ಒಂದು ಗ್ಲಾಸ್
ಮಧ್ಯಂತರವಾಗಿ:
- ಧಾನ್ಯದಿಂದ ತಯಾರಿಸಿದ ಜಲ ( ಅಕ್ಕಿ, ಗೋಧಿ,ರಾಗಿ, ಜೋಳ, ಹೆಸರು)
- ಕೊಬ್ಬರಿ ನೀರು (ವಾರಕ್ಕೆ 2–3 ಬಾರಿ)
- ನೀರಿನಲ್ಲಿ ಸ್ವಲ್ಪ ಬೆಲ್ಲ ಅಥವಾ ಕಲ್ಲುಸಕ್ಕರೆ ಹಾಕಬಹುದು.
- ತಂಪು ಪಾನೀಯಗಳು, ಕೋಲ್ಡ್ ಡ್ರಿಂಕ್ಸ್ ತಪ್ಪಿಸಿ. ನೀರಿನ ಕೊರತೆಯಿಂದ ತಲೆನೋವು, ದಣಿವು, ಏಕಾಗ್ರತೆ ಕಡಿಮೆಯಾಗುವುದು ಸಾಮಾನ್ಯ.
- ಆಹಾರ ಪದ್ಧತಿ: ಹಗುರ ಆದರೆ ಪೋಷಕ
ಬೇಸಿಗೆಯಲ್ಲಿ ಅಗ್ನಿ ಮೃದುವಾಗಿರುತ್ತದೆ. - ಸೂಕ್ತ ಆಹಾರ:
ಅಕ್ಕಿ, ರಾಗಿ, ಜೋಳದ ಸಾದಾ ಆಹಾರ, ಮಜ್ಜಿಗೆ, ತೆಳುವಾದ ಮೊಸರು, ತರಕಾರಿ ಸಾರು, ಹುರಿದ ತರಕಾರಿ - ಹಣ್ಣುಗಳು:
ಪಪ್ಪಾಯಿ, ಸೇಬು, ಕಲ್ಲಂಗಡಿ (ಮಿತವಾಗಿ)ತಪ್ಪಿಸಬೇಕಾದವು:
ಬಹಳ ಖಾರ, ಮಸಾಲೆ, ಎಣ್ಣೆ ಆಹಾರ, ಫಾಸ್ಟ್ ಫುಡ್, ಬಿಸ್ಕತ್ತು, ಪ್ಯಾಕೆಟ್ ಸ್ನ್ಯಾಕ್ಸ್, ಪರೀಕ್ಷಾ ಸಮಯದ ಮೆದುಳಿನ ಶಕ್ತಿ, ಮಕ್ಕಳಿಗೆ ಸ್ಮರಣಶಕ್ತಿ ಮತ್ತು ಏಕಾಗ್ರತೆ ಮುಖ್ಯ. - ಬೆಳಿಗ್ಗೆ ಖಾಲಿ ಹೊಟ್ಟೆಗೆ:
1–2 ಹನಿ ಹಸುವಿನ ತುಪ್ಪ (ಹಾಲಿನೊಂದಿಗೆ ಅಥವಾ ಬೆಚ್ಚಗಿನ ನೀರಿನಲ್ಲಿ) - ರಾತ್ರಿ ಮಲಗುವ ಮುನ್ನ:
ಬಿಸಿ ಹಾಲು + ಸ್ವಲ್ಪ ಬೆಲ್ಲ
* ಇದು ನರಮಂಡಲವನ್ನು ಶಾಂತಗೊಳಿಸಿ, ನಿದ್ರೆಗೆ ಸಹಾಯಕ.
* ನನ್ನಲ್ಲಿ ತಯಾರಾಗುವ ಸ್ಮೃತಿ, ಸ್ವರ್ಣ ಸಮೃದ್ಧಿ,ಚವನ ಪ್ರಾಶ ಗಳು ಇವೆ. - ನಿದ್ರೆ ಮತ್ತು ದಿನಚರಿ :
ತಡರಾತ್ರಿ ಓದನ್ನು ತಪ್ಪಿಸಿ. ರಾತ್ರಿ ಕನಿಷ್ಠ 7–8 ಗಂಟೆ ನಿದ್ರೆ. ಬೆಳಿಗ್ಗೆ ಸ್ವಲ್ಪ ಸೂರ್ಯನ ಬೆಳಕು (10–15 ನಿಮಿಷ). ನೆನಪಿರಲಿ ನಿದ್ರೆ ಕಡಿಮೆಯಾದರೆ ಓದಿನ ಫಲಿತಾಂಶ ಕುಸಿಯುತ್ತದೆ.
- ಬೇಸಿಗೆಯಲ್ಲಿ ಬರುವ ಸಾಮಾನ್ಯ ಸಮಸ್ಯೆಗಳಿಂದ ರಕ್ಷಣೆ
ಬಿಸಿಲಿನಲ್ಲಿ ಆಟದ ನಂತರ ಕಾಲು–ಕೈ ತಣ್ಣೀರು ತೊಳೆಯಿರಿ. - ತುರಿಕೆ / ಬಿಸಿಲು ಗುಳ್ಳೆಗಳು ಬಂದರೆ:
ತೆಂಗಿನ ಎಣ್ಣೆಗೆ ಸ್ವಲ್ಪ ಕರ್ಪೂರ ಮಿಶ್ರಣಿಸಿ ಹಚ್ಚಬಹುದು. ವಾರಕ್ಕೆ ಒಂದು ಬಾರಿ ತಲೆ ಸ್ನಾನ (ತಣ್ಣೀರು ನೇರವಾಗಿ ತಲೆಗೆ ಹಾಕಬೇಡಿ). ಮನಸ್ಸಿನ ಒತ್ತಡ ಕಡಿಮೆ ಮಾಡುವದು. “ಪರೀಕ್ಷೆ ಎಲ್ಲವೂ ಅಲ್ಲ” ಎಂಬ ಭರವಸೆ ಮಕ್ಕಳಿಗೆ ನೀಡಿ ದಿನಕ್ಕೆ 10 ನಿಮಿಷ ಪ್ರಾಣಾಯಾಮ / ಆಳ ಉಸಿರಾಟ ಓದಿನ ಮಧ್ಯೆ ಸಣ್ಣ ವಿರಾಮ ಅಗತ್ಯ. ಪಾರಂಪರಿಕವಾಗಿ ಹೇಳುವುದಾದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟರೆ, ಮನಸ್ಸು ಸ್ಥಿರವಾಗುತ್ತದೆ. ಮನಸ್ಸು ಸ್ಥಿರವಾದರೆ, ವಿದ್ಯೆ ಸ್ವಯಂ ಅರಳುತ್ತದೆ.ಮಕ್ಕಳಲ್ಲಿ ನಿರಂತರ ದಣಿವು, ತಲೆಸುತ್ತು, ಊಟದ ಅಸಹ್ಯ ಅಥವಾ ನಿದ್ರೆ ಸಮಸ್ಯೆ ಕಂಡುಬಂದರೆ ಆಹಾರ–ವಿಹಾರಕ್ಕೆ ಅನುಗುಣವಾಗಿ ವೈಯಕ್ತಿಕ ಸಲಹೆ ಅಗತ್ಯವಾಗಬಹುದು.
*ಮಕ್ಕಳ ರಜೆ ಸಮಯದಲ್ಲಿ ದಿವ್ಯಚಕ್ಷು ಮತ್ತು ಹಂಡ್ರೆಡ್ ಪರ್ಸೆಂಟ್ ಮೆಮೋರಿ ಗಳಂತಹ ವಿದ್ಯೆಯನ್ನು ಕಲಿಯಲು ಅವಕಾಶ ನನ್ನಲ್ಲಿ ಇದೆ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು.
