ಮುಗ್ಧತೆಯ ಸೋಗಲಾಡಿತನ ಬೆಚ್ಚಿಬೀಳಿಸುತ್ತಿದೆ ಕ್ರೂರತೆ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಓದಿ…
ಅಲ್ಲಿಲ್ಲಿ ಎಲ್ಲಿಬೇಕಾದಲ್ಲಿ
ಸುತ್ತಾಡಬಹುದು ಹಗಲು
ಕತ್ತಲಾಗುತ್ತಿದ್ದಂತೆ ಹೆದರಿಸುವುದು
ನಮ್ಮದೇ ಕರಿ ನೆರಳು
ಯಾರನ್ನೂ ನಂಬುವಂತಿಲ್ಲ
ಇಂದಿನ ಈ ಜಗದೊಳಗೆ
ಏನಿದೆಯೋ ಏನಿಲ್ಲವೋ
ಅರಿಯಲಾಗದು ಬಿಲದೊಳಗೆ
ಇಷ್ಟ ಕಷ್ಟಗಳಿಗೆ ಜೊತೆಗಿದ್ದು
ಸದಾ ನಮ್ಮ ಹೆಗಲಾಗಿದ್ದವರೇ
ನಗುನಗುತ್ತಲೆ ಮಾತನಾಡುತ್ತಾ
ಗೊತ್ತಾಗದಂತೆ ಕುತ್ತಿಗೆ ಕೊಯ್ಯುವರು
ಜೊತೆಗೆ ಉಂಡು ತಿಂದವರೇ
ತಲೆಯ ಮೇಲೆ ಚಪ್ಪಡಿ ಎಳೆಯುವರು
ಕಷ್ಟದಿ ಬದುಕನ್ನು ಕಟ್ಟಿಕೊಟ್ಟವರೇ
ಉಸಿರನ್ನು ನಿಲ್ಲಿಸಿಬಿಡುವರು
ಮುಗ್ಧತೆಯ ಸೋಗಲಾಡಿತನ
ಬೆಚ್ಚಿಬೀಳಿಸುತ್ತಿದೆ ಕ್ರೂರತೆಯನ್ನು
ನಂಬಬಾರದಿಂದು ಯಾರೂ ಯಾರನ್ನು
ಉರುಳಾಗಬಹುದು ನಂಬಿದರೆ ನೆರಳನ್ನು
- ನಾಗರಾಜ ಜಿ. ಎನ್. ಬಾಡ, ಕುಮಟ
