ಒರಟು ಹಲಸು, ಒಳಗಡೆ ಸೊಗಸು ನಿನ್ನ ಮಹಿಮೆ ನೂರೆಂಟು…

ಹಲಸಿನ ಹಣ್ಣನ್ನು ‘ಬಡವರ ಹಣ್ಣು’, ‘ಬಡವರ ಕಲ್ಪವೃಕ್ಷ’ ಎಂತಲೂ ಕರೆಯುವುದಿದೆ. ಇವುಗಳಲ್ಲಿ ಅನೇಕ ವಿಧಗಳಿವೆ. ಬಣ್ಣ, ರುಚಿ, ಆಕಾರ, ಗಾತ್ರದ ಆಧಾರದ ಮೇಲೆ ೧೦೦ ಕ್ಕೂ ಹೆಚ್ಚು ಪ್ರಭೇದಗಳನ್ನು ಕೃಷಿ ಇಲಾಖೆ ಗುರುತಿಸಿದೆ. 

ಹಲಸಿನ ಹಣ್ಣು ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ….?ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ಸಾಕು ಹಸಿವಿಗೆ ಹಲಸು ಎಂಬಂತೆ ಎಷ್ಟೋ ಜನರ ಮನೆಯಲ್ಲಿ ಹಲಸೆ ಮಹಾರಾಜ. ಹಲಸಿನ ದೋಸೆ, ಹಲಸಿನ ಸಾಂಬಾರ್, ಹಲಸಿನ ಚಿಪ್ಸ್, ಹಲಸಿನ ಹಪ್ಪಳ, ಹಲಸಿನ ಬೀಜದ ಸಿಹಿ ಆಯಗ್ರ ಹೀಗೆ ಎಲ್ಲವೂ ಹಲಸುಮಯವಾಗಿರುತ್ತದೆ. ಹಲಸು ಬರೀ ಹಳ್ಳೀಗಳಿಗೆ, ಮಲೆನಾಡಿಗಷ್ಟೆ ಸೀಮಿತ ರಾಜನಲ್ಲ.ಪಟ್ಟಣ ಪ್ರದೇಶಗಳಲ್ಲೂ ಕೂಡ ಹಲಸಿನ ಋತುವಿನಲ್ಲಿ ಮಹಾರಾಜನೆ.ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಅಚ್ಚು-ಮೆಚ್ಚು ಹಲಸಿನ ತಿನಿಸುಗಳು. ಹಣ್ಣುಗಳಲ್ಲೆ ಅತೀ ವಿಶೇಷ ಹಾಗೂ ವಿಶಿಷ್ಟ ಹಣ್ಣು ಈ ನಮ್ಮ ಹಲಸು.ಆಕಾರ,ಗಾತ್ರ,ರೂಪ ಎಲ್ಲವೂ ವಿಶೇಷವಾಗಿದೆ ಎಲ್ಲ ಹಣ್ಣುಗಳಂತಿಲ್ಲ.ಕೆಲವು ಹಣ್ಣುಗಳನ್ನು ನೋಡಿದರೆ ಭೀಮನ ಗಾತ್ರ ನೆನಪಾಗುತ್ತದೆ. ಬಲ್ಲೂಕಗೆ(ಕರಡಿ) ಬಲು ರುಚಿಯಾದ ಹಣ್ಣು ಹಲಸು. ’ಹಲಸು ಹೊರಗಡೆ ಒರಟಾದರೂ ಒಳಗಡೆ ಮಾತ್ರ ಸಿಹಿ ಮನಸು’.ಅಧಕೆ ಹಲಸನ್ನು ಎಷ್ಟೊ ಸಮಯದಲ್ಲಿ ಮನುಷ್ಯರ ಗುಣಗಳಿಗೆ ಹೋಲಿಕೆ ಮಾಡುವುದು ಇದೆ.

ಹಲಸು ಹೆಚ್ಚಾಗಿ ನಮ್ಮ ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಕಾಡುಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ.ವಿಶ್ವದಲ್ಲಿ ಭಾರತ ಹಲಸು ಬೆಳೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, ಭಾರತದಲ್ಲಿ ನಮ್ಮ ಕರ್ನಾಟಕ ಹಲಸು ಬೆಳೆಯಲ್ಲಿ ತೃತೀಯ ಸ್ಥಾನದಲ್ಲಿದೆ.ಇದು ವರ್ಷಪೂರ್ತಿ ಹಸಿರಾಗಿರುವ ಮರಗಳಲ್ಲೊಂದು.ಕಾಯಿಗಳು ವಸಂತ ಋತುವಿನಲ್ಲಿ ಶುರುವಾಗುತ್ತದೆ.ಇದರ ಕಾಯಿಗಳು 5 ರಿಂದ 30 ಕಿ.ಗ್ರಾಂ.ಗಿಂತಲೂ ಜಾಸ್ತಿ ತೂಕವಿರುತ್ತದೆ.ನೋಡೊಕೆ ಹೊರಗಡೆ ಮುಳ್ಳಿನ ಥರವಿದ್ದರೂ ಒಳಗಡೆ ತುಂಬಾ ತೊಳೆ(ಸೊಳೆ)ಗಳು ಇರುತ್ತದೆ ಅವುಗಳು ಸಿಹಿಯಾಗಿರುತ್ತದೆ.ಇನ್ನೊಂದು ಮುಖ್ಯವಾಗಿ ಹಣ್ಣಿನ ಒಳಗಡೆ ಮೇಣವಿರುತ್ತದೆ.ಹಣ್ಣಿನ ಸಿಪ್ಪೆ ಸುಲಿಯುವಾಗ ತುಂಬಾ ಎಚ್ಚರಿಕೆ ಅಗತ್ಯ, ಇಲ್ಲಾವಾದಲ್ಲಿ ಹಲಸು ಮನೆಯಲ್ಲಾ ಹೊಲಸು ಮಾಡುವುದಂಥೂ ನಿಜ.

ಇದನ್ನು ‘ಬಡವರ ಹಣ್ಣು’, ‘ಬಡವರ ಕಲ್ಪವೃಕ್ಷ’ ಎಂತಲೂ ಕರೆಯುವುದಿದೆ.

97071578_1061252307608487_3798392995531718656_o

ಫೋಟೋ ಕೃಪೆ : Healthline

ಇವುಗಳಲ್ಲಿ ಅನೇಕ ವಿಧಗಳಿವೆ. ಬಕ್ಕೆಹಲಸು, ಚಕ್ಕೆಹಲಸು, ಚಂದ್ರಹಲಸು, ಕಾಡುಹಲಸು ಹೀಗೆ ತುಂಬಾ ವಿಧಗಳು. ತುಂಬಾ ತಳಿಗಳನ್ನು ಕಾಣಬಹುದು.ಹಲಸಿನ ಬಣ್ಣ, ರುಚಿ, ಆಕಾರ, ಗಾತ್ರದ ಆಧಾರದ ಮೇಲೆ ೧೦೦ ಕ್ಕೂ ಹೆಚ್ಚು ಪ್ರಭೇದಗಳನ್ನು ಕೃಷಿ ಇಲಾಖೆ ಗುರುತಿಸಿದೆ. ಕೆಲವು ಹಣ್ಣುಗಳು ಆಯಾ ಪ್ರದೇಶದ ಮಣ್ಣಿಗೆ ಹಾಗೂ ಹವಾಗುಣಕ್ಕನುಗುಣವಾಗಿ ಬೆಳೆಯುತ್ತದೆ.ಕೆಲವು ರಾಜ್ಯಗಳಲ್ಲಿ ರೈತರು ಹಲಸಿನಿಂದಲೆ ವಾರ್ಷಿಕ ಆದಾಯವನ್ನು ಗಳಿಸುತ್ತಿದ್ದಾರೆ. ಹಲಸನ್ನೆ ಮುಖ್ಯ ಬೆಳೆಯನ್ನಾಗಿ ಅವಲಂಬಿಸಿದ್ದಾರೆ.ಹಲಸಿನ ಮರದಲ್ಲಿ ಮತ್ತೊಂದು ವಿಶೇಷತೆಯೆಂದರೆ ಬಾಂಧವ್ಯದ ಗುಣವನ್ನು ನೋಡಬಹುದು.ಒಂದೆ ಕುಟುಂಬದಲ್ಲಿ ಹೇಗೆ ಹಲವಾರು ಸಂಬಂಧಗಳು ಇರುತ್ತವೆಯೊ,ಹಾಗೆ ಹಲಸಿನ ಮರ ಒಂದೆ ಮರದಲ್ಲಿ ಹಲವಾರು ಬಾಂಧವ್ಯದ ಗುಂಪುಗಳನ್ನು ನೋಡಬಹುದು. ಕೊಂಬೆಯಲ್ಲಿ ಕೆಲವು ಹಣ್ಣುಗಳು ನಾಲ್ಕು ಇದ್ದರೆ,ಇನ್ನೊಂದು ಕೊಂಬೆಯಲ್ಲಿ ಮೂರು ಹೀಗೆ ವಿವಿಧ ಗುಂಪುಗಳನ್ನು ಕಾಣಬಹುದು. ಒಂದೆ ಹಣ್ಣಿನಲ್ಲಿ ಕಾಳಿನ ತೆನೆಯಂತೆ ಒಟ್ಟಿಗೆ ಇರುವ ಹಲಸಿನ ತೊಳೆಗಳನ್ನು ನೋಡಬಹುದು. ಹಾಗೆಯೇ ಹಲಸಿನ ಬೇರು ಕೂಡ ತುಂಬಾ ಬಲಶಾಲಿ.ಎಂತಹ ಗಟ್ಟಿಮುಟ್ಟಾದ ನೆಲವನ್ನು ಕೂಡ ಭೇದಿಸಿ ಭೂಮಿಯಿಂದ ಹೊರಬರುವ ಶಕ್ತಿಯಿದೆ. ಇಧಕೆ ಆಧಾರ,ಊರಿನಲ್ಲಿ ನಾನೆ ನೋಡಿದ ಹಲಸಿನ ಬೇರು. ಒಮ್ಮೆ ಮನೆಯ ಪಕ್ಕದಲ್ಲಿದ್ದ ಹಲಸಿನ ಮರದ ಬೇರೊಂದು ಗ್ರಾನೈಟ್ ಕಲ್ಲಿನ ನೆಲವನ್ನು ಸೀಳಿ ಹೊರಬಂದಿರುವುದು ನೋಡಿ ತುಂಬಾ ಆಶ್ಚರ್ಯವಾಗಿತ್ತು. ನಮ್ಮ ಅಜ್ಜಿ ಹೇಳಿದ ಮೇಲೆ ಗೊತ್ತಾಗಿದ್ದು ಅದು ಹಲಸಿನ ಬೇರೆಂಬುದು. ಆವಾಗ್ಲೆ ಗೊತ್ತಾಯಿತು. ಹಲಸಿನ ಬೇರು ಎಷ್ಟೊಂದು ಬಲಶಾಲಿ ಎಂದು. ನೀರು ಸಿಕ್ಕಿದರೆ ಬೇರುಗಳಲ್ಲೂ ಕೂಡ ಸಸಿಗಳಾಗುತ್ತವೆ. ಮರವನ್ನು ಕಡಿದರೆ, ಕಾಂಡವಿದ್ದರೂ ಸಾಕು ಹಲಸು ಅಲ್ಲೆ ಮತ್ತೆ ಚಿಗುರಲು ಪ್ರಾರಂಭಿಸುತ್ತದೆ. ಅದಕ್ಕೆ ಹಲಸಿನ ಗಿಡಗಳನ್ನು ಆದಷ್ಟು ಮನೆಯಿಂದ ದೂರದಲ್ಲಿ ನೆಟ್ಟರೆ ಒಳ್ಳೇಯದು. ನೀರಿಗೆ ಹತ್ತಿರವಿರುವ ಜಾಗದಲ್ಲಿ ಇದ್ದರೂ ತುಂಬಾ ಒಳ್ಳೇಯದು. ಸ್ವಲ್ಪ ನೀರು ಸಿಕ್ಕಿದರೂ ಸಾಕು ಅದನ್ನು ಹೀರಿಕೊಂಡು ಬೆಳೆಯುವ ಗುಣ ಹಲಸಿನಲ್ಲಿದೆ.

ನಿಜ ಹೇಳಬೇಕಂದರೆ ಹಲಸಿನ ಮರ ಕಲ್ಪವೃಕ್ಷಕ್ಕೆ ಸರಿಸಮಾನವಾದ ಮರವೆಂದರೂ ತಪ್ಪಾಗಲಾರದು. ಯಾಕೆ೦ದರೆ ಬರಿ ಹಣ್ಣುಗಳನ್ನಷ್ಟೆ ಮಾನವನ ಉಪಯೋಗಕ್ಕೆ ನೀಡಿ ಸಂತೃಪ್ತವಾಗುವ ಮರ ಇದಲ್ಲ. ಹೋಮ, ಹವನಗಳಲ್ಲಿ ಹಲಸಿನ ಕಟ್ಟಿಗೆ ಇದ್ದರೆ ಮಾತ್ರ ಅದು ಶ್ರೇಷ್ಠ. ದೇವಾನು ದೇವತೆಗಳಿಗೂ ಪ್ರಿಯವಾದಂತಹ ಮರ ಹಲಸು.
ಮರದ ಭಾಗಗಳನ್ನು ಕೂಡ ಸಲಕರಣೆ, ಮನೆಯ ಬಾಗಿಲು ಹೀಗೆ ವಿಶಿಷ್ಟ ಕಟ್ಟಿಗೆ ವಸ್ತುಗಳ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತದೆ.ಹಾಗೂ ಹಲಸಿನಲ್ಲಿ ಔಷಧೀಯ ಗುಣಗಳು ಸಹ ತುಂಬಾ ಇದೆ. 

97071578_1061252307608487_3798392995531718656_o

ಫೋಟೋ ಕೃಪೆ : The Hans India

ಮುಖ್ಯವಾಗಿ ಹಲಸಿನ ಉಪಯೋಗಗಳನ್ನು ನೋಡೊಣ:

1.)ಹಣ್ಣಿನಲ್ಲಿ ವಿಟಮಿನ್ ‘ಸಿ’ ಒಳಗೊಂಡಿರುವುದರಿಂದ ವೈರಲ್,ಬ್ಯಾಕ್ಟೀರಿಯಾದಂತಹ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ.

2.)ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಸಹಕಾರಿ.

3.)ಮುಖ್ಯವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

4.)ಇದರಲ್ಲಿ ತಾಮ್ರದ ಅಂಶವಿರುವುದರಿಂದ ಥೈರಾಯಿಡ್ ಸಮಸ್ಯೆಗಳನ್ನು ಹೋಗಿಸುತ್ತದೆ ಎಂಬುದು ವೈದ್ಯರ ಸಲಹೆ.

5.)ಜ್ವರ,ಭೇದಿಯುಂಟಾದಾಗ ಹಲಸಿನ ಬೇರಿನ ಕಷಾಯವನ್ನು ಕುಡಿದರೆ ಉತ್ತಮ ಪರಿಣಾಮಕಾರಿ.

6.)ಇರುಳುಗಣ್ಣು ಸಮಸ್ಯೆಗೂ ಇದು ಉತ್ತಮ ಪರಿಹಾರಕವೆಂದೂ ವೈದ್ಯರು ಹೇಳುತ್ತಾರೆ.

7.)ಹಲಸಿನ ಹಣ್ಣನ್ನು ನಿತ್ಯವೂ ನಿಯಮಿತವಾಗಿ ಸೇವಿಸಿದರೆ ಕ್ಯಾನ್ಸರ್ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ವೈದ್ಯಶಾಸ್ತ್ರದಲ್ಲಿದೆ.

8.)ಎಣ್ಣೆಯಲ್ಲಿ ಕರಿದು ತಿನಿಸುಗಳನ್ನು ಸಹ ಮಾಡುತ್ತಾರೆ.ಉದಾ:ಚಿಪ್ಸ್,ಹಪ್ಪಳ,ಸಂಡಿಗೆ ಇತ್ಯಾದಿ.

9.)ಮರದ ಎಲೆಯನ್ನು ಕಡುಬು ಮಾಡಲು ಉಪಯೋಗಿಸುತ್ತಾರೆ.

10.)ಹಣ್ಣಿನಿಂದ ದೋಸೆ, ಇಡ್ಲಿ, ರೊಟ್ಟಿಯನ್ನು ಮಾಡುತ್ತಾರೆ.

11.)ಹಲಸಿನ ಬೀಜದಿಂದ ಸಾಂಬಾರ್,ಹಾಗೂ ಬೆಲ್ಲದೊಂದಿಗೆ ಸೇರಿಸಿ ಸಿಹಿಯಾದ ಆಯಾಗ್ರವನ್ನು ತಯಾರಿಸುತ್ತಾರೆ.

12.) ಇತ್ತೀಚೆಗೆ ಹಲಸಿನಿಂದ ಐಸ್ ಕ್ರೀಮ್,ಜಾಮ್,ಹಲ್ವಾ ಕೂಡ ಮಾಡಲಾಗುತ್ತದೆ ಎಂಬುದನ್ನು ಓದಿದ್ದೇನೆ.

13.) ಬೀಜವನ್ನು ಹುರಿದು ಜಾಮೂನ್ ಪೌಡರ್ ಆಗಿ ಕೂಡ ಇತ್ತೀಚೆಗೆ ಮಾಡಲಾಗುತ್ತಿದೆಯಂತೆ.

14.) ಮರದಿಂದ ಮನೆಗೆ ಬಾಗಿಲನ್ನು,ಫರ್ನಿಚರ್ ಗಳನ್ನು ತಯಾರಿಸಲಾಗುತ್ತದೆ.

15.) ಮಲೆನಾಡಿನ ಪ್ರದೇಶಗಳಲ್ಲಿ ಉದ್ದವಾದ ಅಡಿಕೆ ಮರಗಳನ್ನು ಹತ್ತಿ ಅಡಿಕೆ ಕೊಯ್ಯುವಾಗ ಮಧ್ಯದಲ್ಲಿ ಕುಳಿತುಕೊಳ್ಳಲು ‘ಅಡಿಮಣೆ’ಯಾಗಿ ಹಲಸಿನ ಕಟ್ಟಿಗೆಯನ್ನೆ ಉಪಯೋಗಿಸುತ್ತಾರೆ.

16.) ಹಲಸಿನ ಹೊರಭಾಗವನ್ನು ಮುಳ್ಳಿನ ಸಿಪ್ಪೆಯನ್ನು ಜಾನುವಾರುಗಳಿಗೆ ಮೇವಾಗಿ ಉಪಯೋಗಿಸುತ್ತಾರೆ.

17.) ಸುಗಂಧದ್ರವ್ಯಗಳ ಉತ್ಪಾದನೆಯಲ್ಲೂ ಸಹ ಉಪಯೋಗಿಸಲಾಗುತ್ತದೆ.

18.) ಹಲಸಿನ ತಿರುಳು ಹಾಗೂ ಬೀಜವನ್ನು ಸೌಂದರ್ಯವರ್ಧಕಗಳಲ್ಲಿ ಕೂಡ ಬಳಸಲಾಗುತ್ತದೆ.

97071578_1061252307608487_3798392995531718656_o
ಫೋಟೋ ಕೃಪೆ : Treehunger

ಹೀಗೆ ಹಲಸಿನ ಉಪಯೋಗ ಹೇಳಲು ಹೊರಟರೆ ಅಧಕೆ ಕೊನೆಯೇ ಇಲ್ಲಾ.ತನ್ನ ಎಲ್ಲಾ ಗುಣಗಳಿಂದಲೂ ಉಪಯೋಗಕಾರಿ ಹಲಸು.ಇನ್ನೊಂದು ಮುಖ್ಯವಾಗಿ ಹಲಸಿನ ಯಾವುದೇ ಉತ್ಪನ್ನವಾಗಲಿ,ಸೌಂದರ್ಯವರ್ಧಕವಾಗಲಿ ಉಪಯೋಗಿಸುವ ಮುನ್ನ ಒಮ್ಮೆ ಆಯುರ್ವೇದ ತಜ್ಞರ ಸಲಹೆ ಪಡೆಯಿರಿ ಇದರ ಮತ್ತಷ್ಟು ಉಪಯೋಗಕಾರಿ ಗುಣಗಳ ಮಾಹಿತಿ ಅವರಲ್ಲಿ ಸಿಗುತ್ತದೆ.ನಮ್ಮ ಹಲಸು ನೋಡಲು ಒರಟಾದರೂ,ಜನರಿಗೆ ಸಿಹಿಯ ಜೊತೆಗೆ ಆರೋಗ್ಯವನ್ನು ಕೊಡುವ ಸುಂದರವಾದ ಗುಣವನ್ನು ಹೊಂದಿದೆ.ಮನುಷ್ಯನು ಕೂಡ ಹಲಸಿನಂತಹ ಗುಣವೊಂದಿದ್ದರೆ ಸಾಕು ಎಂಬುದನ್ನು ಅರ್ಥ ಮಾಡಿಕೊಂಡರೆ ಪ್ರಪಂಚವೆಲ್ಲಾ ಸುಂದರವಾಗಿಯೆ ಕಾಣಿಸುತ್ತಿತ್ತು.


  • ನಾಗರಾಜ್ ಲೇಖನ್( ಹರಡಸೆ ಹೊನ್ನಾವರ)

amma

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW