ನಾವು ಮಾಡುವ ಅಡುಗೆ ಕಲರ್ ಫುಲ್ ಆಗಿ, ನೋಡಿದಾಕ್ಷಣ ತಿನ್ನಬೇಕು ಅನ್ನಿಸಬೇಕು ಅದಕ್ಕಾಗಿ ಕೆಲವು ಅಡುಗೆ ಟಿಪ್ಸ್ .
ಊಟ ಅಂದ ಮೇಲೆ ಹೊಟ್ಟೆ ತುಂಬಿದರೆ ಸಾಲದು. ಕಣ್ಣು -ಮೂಗಿಗೂ ಸಂತೋಷವಾಗಬೇಕು. ಕಣ್ಣು, ಮೂಗು ಮತ್ತು ಹೊಟ್ಟೆಗೆ ಒಂದು ನಂಟಿದೆ. ಅದೇನು ಅಂತ ಕೇಳುತ್ತೀರಾ? ಅಡುಗೆಯ ಸೌಂದರ್ಯ ಕಣ್ಣು ಸೆರೆ ಹಿಡಿದರೆ, ಮೂಗು ಅದರ ಸುಹಾಸನೆಯನ್ನು ಎಳೆದುಕೊಳ್ಳುತ್ತದೆ. ಎರಡು ಮೊದಲು ಓಕೆ ಎಂದು ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ತಿನ್ನಲು ಕೈ ಮುಂದಾಗುತ್ತದೆ. ಆಗಲೇ ಹೊಟ್ಟೆಗೆ ಇಳಿಯುತ್ತದೆ.
- ಮೃದು ಚಪಾತಿ
ಇವತ್ತು ನಾನು ಮೃದು ಚಪಾತಿ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಟಿಪ್ಸ್ ಕೊಡುತ್ತೇನೆ.
೧. ಚಪಾತಿ ಹಿಟ್ಟನ್ನು ಕಲಿಸಿಕೊಳ್ಳುವಾಗ ಸ್ವಲ್ಪ ಹಾಲಿನ ಕೆನೆಯನ್ನು ಸೇರಿಸಿಕೊಳ್ಳಿ ಮತ್ತು ಕೊನೆಯಲ್ಲಿ ಸ್ವಲ್ಪ ಎಣ್ಣೆ ಸವರಿಟ್ಟುಕೊಳ್ಳಿ. ಮತ್ತು ಹಿಟ್ಟನ್ನು ಅರ್ಧಗಂಟೆ ನೆನೆಯಿಟ್ಟರೆ ಉತ್ತಮ. ಇದರಿಂದ ಚಪಾತಿ ಮೃದುವಾಗುತ್ತದೆ .
೨. ಚಪಾತಿ ಹಿಟ್ಟಿನ ಉಂಡೆಗಳನ್ನು ಲಟ್ಟಿಸುವ ಮೊದಲು ಮೂರೂ ಪದರುಗಳ ರೀತಿ ಕೋನಾಕಾರದಲ್ಲಿ ರೆಡಿ ಮಾಡಿಟ್ಟುಕೊಂಡು ಲಟ್ಟಿಸಿಕೊಳ್ಳಿ. ಇದರಿಂದ ಚಪಾತಿ ಪದರು ಪದರಾಗಿ ಏಳುತ್ತದೆ. ತಿನ್ನಲು ಚನ್ನಾಗಿರುತ್ತವೆ.
೩. ಚಪಾತಿಯನ್ನು ಲಟ್ಟಿಸಿಕೊಳ್ಳುವಾಗ ಅತಿ ತೆಳ್ಳಗೂ ಅಥವಾ ಅತಿ ದಪ್ಪಗೂ ಮಾಡಬಾರದು. ಇವುಗಳ ಮಧ್ಯದಲ್ಲಿ ಲಟ್ಟಿಸಿಕೊಳ್ಳಬೇಕು.
೪. ಚಪಾತಿ ಬೇಯಿಸುವಾಗ ಕೆಲವರು ಚಪಾತಿ ಹೊತ್ತಿ ಹೋಗುತ್ತದೆ ಎನ್ನುವ ಕಾರಣಕ್ಕೆ ಸ್ಟೋವ್ ಒಲೆಯನ್ನು ಸಣ್ಣ ಉರಿಯಲ್ಲಿಟ್ಟಿರುತ್ತಾರೆ. ಹೀಗೆ ಮಾಡುವುದರಿಂದ ಚಪಾತಿ ಗಟ್ಟಿಯಾಗುತ್ತದೆ. ಬದಲಾಗಿ ಚಪಾತಿ ತವಾ ಚನ್ನಾಗಿ ಬಿಸಿ ಮಾಡಿದಾಗ ಮಾತ್ರ ಚಪಾತಿ ಉಬ್ಬುತ್ತದೆ.
೫. ಯಾವಾಗಲು ಚಪಾತಿ ಬೇಯಿಸುವಾಗ ಎಣ್ಣೆ ಬಳಸುವ ಬದಲು ತುಪ್ಪ ಬಳಸಿದರೆ ಚಪಾತಿ ಮೆದುವಾಗಿರುತ್ತದೆ. ತುಪ್ಪ ಎಣ್ಣೆಗಿಂತ ಆರೋಗ್ಯಕರ.
- ಅಡುಗೆ ಅರಗಿಣಿ