‘’ಕಾಳೀ ಕಣಿವೆಯ ಕತೆಗಳು’’ ಲೇಖನ ಮಾಲೆಯ ಓದಿಗೆ ಒಂದಷ್ಟು ಪೂರಕ ಮಾಹಿತಿಗಳು. ಯೋಜನೆಯಲ್ಲಿ ಕೆಲಸ ಮಾಡಿದವರನ್ನು ನನ್ನ ನೆನಪಿನ ಭಂಡಾರದಲ್ಲಿ ತಗೆದು, ಯಥಾವತ್ ಚಿತ್ರಿಸಿದ್ದೇನೆ. ಘಟನೆಗಳು ಯಾವುವೂ ಉತ್ಪ್ರೇಕ್ಷೆಯಲ್ಲ. ಇದೊಂದು ಕಾದಂಬರಿ ರೀತಿ ಓದುಗರ ಮನಸ್ಸು ಹಿಡಿಯಬೇಕೆಂದು ಶೈಲಿಯನ್ನು ಬದಲಿಸಿಕೊಂಡಿದ್ದೇನೆ.
ಕರುನಾಡು ಕಟ್ಟಿದ ಬೆಳಕಿನ ಚೈತನ್ಯಗಳಿಗೆ ನಮನ ಕಾಳೀ ನದಿ ಯೋಜನೆ ನಿರ್ಮಾಣ ಪೂರ್ವದಲ್ಲಿಅನೇಕ ಕೆಲಸಗಾರರು, ತಂತ್ರಜ್ಞರು, ಹಿರಿಯ ಅಧಿಕಾರಿಗಳು ಕನಿಷ್ಠ ಸೌಲಭ್ಯ –ಸವಲತ್ತುಗಳೂ ಇಲ್ಲದೆ ತ್ಯಾಗ ಮನೋಭಾವದಿಂದ ಯೋಜನಾ ಪ್ರದೇಶದಲ್ಲಿ ದುಡಿದಿದ್ದಾರೆ. ಅಂದಿನವರ ಶ್ರಮ ಊಹೆಗೂ ನಿಲುಕದ್ದು. ನಮ್ಮ ಹೆಮ್ಮೆಯ ವಿದ್ಯುತ್ ಯೋಜನೆಗಳಲ್ಲಿ ದುಡಿದು ಚದುರಿ ಹೋದ ಅಂಥ ಅನಾಮಿಕರ ಶ್ರಮವನ್ನು ಕಣ್ಣಾರೆ ಕಂಡ ನನಗೆ ಅಂದಿನ ದಿನಗಳನ್ನು ನೆನಪಿಸಿಕೊಳ್ಳಲು ಪದಗಳಿಲ್ಲ. ಕಾಳೀ ಕಣಿವೆಯ ಕತೆಗಳು ಅಂಥ ಚದುರಿಹೋದ ದಿನಗೂಲಿಗಳು, ಸಿಬ್ಬಂದಿಗಳು, ತಂತ್ರಜ್ಞರ ನೆನಪಿಗೆ ನಾನು ಬರೆಯುತ್ತಿರುವ ಗೌರವದ ಲೇಖನಿಯಾಗಿದೆ.

ಆ ದಿನಗಳಲ್ಲಿ ನಿಗಮ ಹುಟ್ಟುವ ಮೊದಲು ನಡೆದ ಕಾಳೀ ಕಣಿವೆಯ ರೋಚಕ ಕತೆಗಳನ್ನು ಇಲ್ಲಿ ಬರೆಯುತ್ತಿದ್ದೇನೆ. ೧೯೭೦ ರಿಂದ ನಾನು ಸೂಪಾ, ಜಗಲಬೇಟ್, ದಾಂಡೇಲಿ, ಕುಳಗಿ, ಅಮಗಾ-ಜಮಗಾ, ಶೈಕ್ಸಪಾಯಿಂಟ್, ಬೊಮ್ಮನಳ್ಳಿ, ತಟ್ಟೀಹಳ್ಳ, ಮಾಗೋಡು, ಕುಂಬಾರವಾಡಾ, ಉಳುವಿ, ಅಣಶಿ ಮುಂತಾದ ಕಡೆ ಇದ್ದು ಕೆಲಸ ಮಾಡಿದ್ದೇನೆ. ಇಲ್ಲಿ ಯೋಜನೆಯಲ್ಲಿ ಕೆಲಸ ಮಾಡಿದವರನ್ನು ನನ್ನ ನೆನಪಿನ ಭಂಡಾರದಲ್ಲಿ ತಗೆದು, ಯಥಾವತ್ ಚಿತ್ರಿಸಿದ್ದೇನೆ. ಘಟನೆಗಳು ಯಾವುವೂ ಉತ್ಪ್ರೇಕ್ಷೆಯಲ್ಲ. ಇದೊಂದು ಕಾದಂಬರಿ ರೀತಿ ಓದುಗರ ಮನಸ್ಸು ಹಿಡಿಯಬೇಕೆಂದು ಶೈಲಿಯನ್ನು ಬದಲಿಸಿಕೊಂಡಿದ್ದೇನೆ. ಹಿನ್ನೋಟದಲ್ಲಿ ನಾನು ಉಲ್ಲೇಖಿಸಿರುವ ಪಾತ್ರಗಳು ನನ್ನ ನೆನಪಿನಂತೆ ಸರಿಯಾಗಿವೆ.
ನನ್ನ ಅನುಭವವನ್ನು ಶ್ರೀಮಂತಗೊಳಿಸಿದ ಅಂದಿನ ಎಲ್ಲ ಮಹಾನುಭಾವರಿಗೂ ಕೋಟಿ ನಮನಗಳು. ನನ್ನ ನೆನಪನ್ನು ಮೀರಿದ ಸಂಗತಿಗಳೇನಾದರೂ ಬಿಟ್ಟು ಹೋಗಿದ್ದರೆ ಓದುಗರು ನನಗೆ ತಿಳಿಸಿದಲ್ಲಿ ಮುಂದಿನ ಕಂತುಗಳಲ್ಲಿ ತಿದ್ದಿಕೊಳ್ಳುವೆ. ನನ್ನ ಮಟ್ಟಿಗೆ ಇದೊಂದು ಬೆಳಕಿನ ಚೈತನ್ಯದ ಕರುನಾಡು ಕಟ್ಟಿದವರನ್ನು ನೆನಪಿಸಿಕೊಳ್ಳುವ ಲೇಖನ ಮಾಲೆ. ಓದಿರಿ. ನಿಮ್ಮ ಅಭಿಪ್ರಾಯ ತಿಳಿಸಿ.
ಸೂಪಾ ಆಣೆಕಟ್ಟಿನ ಹಿನ್ನೋಟದಲ್ಲಿ ಬರುವ ಪಾತ್ರಗಳು – 1970
Supa Dam F.R.L ಸರ್ವೇ ತಂಡ –
ಇಂಜನಿಯರು – ಶಿರೋಡ್ಕರ, ಶ್ರೀನಿವಾಸ ಸೆಟ್ಟಿ, ಲಿಂಗರಾಜ
ಮ್ಯಾನೇಜರ್ ಕಂ ಮೇಸ್ತ್ರಿ – ಶೇಖರ್
ಅಡುಗೆಯವ – ಅಪ್ಪೂ ಕುಟ್ಟನ್ ,
ಸಹಾಯಕರು – ಸುಬ್ರಮಣಿ, ಹನಮಂತ್ಯಾ, ಪರಸ್ಯಾ
ಜೀಪಿನ ಚಾಲಕ –ಮೆಹಬೂಬ
ಎಚ್.ಇ.ಸಿ.ಪಿ. ಸಿಬ್ಬಂದಿ –
- ಶ್ರೀ ಎನ್.ಜಿ.ಜೋಶಿ, [ಧಾರವಾಡ-ಬೆಂಗಳೂರು] ಚೀಫ್ ಇಂಜನೀಯರ್, ಸಿವಿಲ್, ಧಾರವಾಡದಲ್ಲಿ ಕಚೇರಿ, [ಕೆ.ಪಿ.ಸಿ.ಯಲ್ಲಿ ಇಂಜನೀಯರ್-ಇನ್-ಚೀಫ್ ಹುದ್ದೆಗೇರಿದ ಏಕೈಕ ತಾಂತ್ರಿಕ ಗಣ್ಯರು ಮತ್ತು ಈಗ ದಿವಂಗತರಾಗಿದ್ದಾರೆ]
- ಶ್ರೀ ಪಾಂಡುರಂಗಿ, ಆಫೀಸ ಸೂಪರಿಂಟೆಂಡ್, ಸಿ.ಇ. ಕಚೇರಿ, ಧಾರವಾಡ,
ಎಕ್ಯೂಕ್ಯುಟಿವ್ ಇಂಜನಿಯರ್ ಸಿವಿಲ್ ಇನ್ವೆಸ್ಚಿಗೇಶನ್ ಡಿವಿಜನ್ –
- ಶ್ರೀ ಹೆಚ್.ಆರ್.ಎನ್.ಮೂರ್ತಿ, [ಬೆಂಗಳೂರು] ಎಕ್ಸಿಕ್ಯೂಟಿವ್ ಇಂಜನಿಯರ್ ಧಾರವಾಡ ಆಫೀಸು. ಈಗ ದಿವಂಗತರಾಗಿದ್ದಾರೆ. ಎಚ್.ಇ.ಸಿ.ಪಿ. ಇನ್‌ವೆಸ್ಟಿಗೇಶನ್, ಸಬ್ ಡಿವಿಜನ್ ನಂ.೧, ಧಾರವಾಡ ಆಫೀಸು –
- ಶ್ರೀ ಸಿ.ಎಸ್.ಹೆಬ್ಲಿ, [ಧಾರವಾಡ-ಬೆಂಗಳೂರು] ಸಹಾಯಕ ಎಕ್ಸಿಕ್ಯೂಟಿವ್ ಇಂಜನಿಯರ್, ಸಿವಿಲ್, [ಮುಂದೆ ಕೆ.ಪಿ.ಸಿ.ಯಲ್ಲಿ ಚೀಫ್ ಇಂಜನೀಯರಾಗಿ, ನಿಗಮದ ತಾಂತ್ರಿಕ ನಿರ್ದೇಶಕರಾಗಿ ನಿವೃತ್ತರಾದರು]
ಧಾರವಾಡ ಆಫೀಸಿನ ಜೀಪ ಚಾಲಕರು – ಶ್ರೀ ಮೆಹಬೂಬ, ಮತ್ತು ಶ್ರೀ ಶಿವಪ್ಪ, ಧಾರವಾಡ [ಇಬ್ಬರೂ ಈಗ ದಿವಂಗತರು]
ಸೂಪಾ ಡ್ಯಾಮ ಸೈಟ್ ಸಿಬ್ಬಂದಿ [ಸಿವಿಲ್] –
- ಶ್ರೀ ವಿ.ವಾಯ್.ನಾಯಕ, [ಕಾರವಾರ] ಜೆ.ಇ. ಸಿವಿಲ್, ಸೆಕ್ಶನ್ ಆಫೀಸರ್, ಇನ್ ಚಾರ್ಜ ಎಫ್.ಆರ್.ಎಲ್. ಸರ್ವೇ, ಸರ್ವೇ ಆಫ್ ಇಂಡಿಯಾದ ಸೂಪಾ ಡ್ಯಾಮ ಸೈಟ್‌ನಲ್ಲಿಯ ಕೆಲಸ, ರೇನ್‌ಗೇಜ್ ಮತ್ತು ನದೀ ಒಳಹರಿವನ್ನು ಅಳಯುವ, ಭೂಕಂಪ ಮಾಪಕಗಳು, ಸೂಪಾ ಡ್ಯಾಮ ಅಡಿಪಾಯದ ಮೇಲ್ಮೈ ಸರ್ವೇ ಕೆಲಸ, ಇತ್ಯಾದಿ. ಸೂಪಾದಲ್ಲಿ ಬಾಡಿಗೆ ಮನೆಯಲ್ಲಿ ವಾಸ.
- ದಿ. ಚಾಂದಗೋಡಿ, [ಧಾರವಾಡ] ರೇನ್ ಗೇಜ್ ರೀಡರ್, ಸೂಪಾ ಊರು ಮತ್ತು ಸೂಪಾ ಡ್ಯಾಮ್ ಸೈಟ್ , ಸೂಪಾದಲ್ಲಿ ಬಾಡಿಗೆ ಮನೆಯಲ್ಲಿ ವಾಸ. ಈಗ ದಿವಂಗತರು.
- ಶ್ರೀ ಶ್ರೀಧರ್ ಕಾಣಕೋಣಕರ, [ಸೂಪಾ] ಆಟೋಮ್ಯಾಟಿಕ್ ರಿವರ್ ಫ್ಲೋ ಡಿಸ್ಚಾರ್ಜ ಮೀಟರ್ ರೀಡರ್, ಸೂಪಾ ಡ್ಯಾಮ್ ಸೈಟ್ [ಸೂಪಾ ಊರಲ್ಲಿ ಸ್ವಂತ ಮನೆ ಮತ್ತು ಮೀನು ಅಂಗಡಿ] ಮುಂದೆ ಕೆಲಸ ಬಿಟ್ಟು ಸ್ವಂತ ವ್ಯವಹಾರ. ಉಸುಕು ವ್ಯವಹಾರದಲ್ಲಿ ದೊಡ್ಡ ಕುಳ. ಖಾನಾಪುರ, ಬೆಳಗಾವಿಯಲ್ಲಿ ವಾಸ.
- ಶ್ರೀ ಹೂಲಿ ಶೇಖರ್, [ಸವದತ್ತಿ] ಕೆಲಸಗಳ ಮೇಲ್ವಿಚಾರಕ, ಜಂಗಲ್ ಕಟಿಂಗ್, ಡ್ಯಾಮಸೈಟಿನಲ್ಲಿ ಸುರಂಗ[ಆಡಿಟ್] ಕೆಲಸಗಳು, ಗುಡ್ಡಗಳಲ್ಲಿ ರಸ್ತೆ ನಿರ್ಮಾಣ ಕೆಲಸ, ಕಾಲೋನಿ ಕಟ್ಟವವುದಕ್ಕಾಗಿ [ಗಣೇಶ ಗುಡಿ ಕಾಲೋನಿ] ಕಾಡಿನಲ್ಲಿ ಸ್ಥಳ ಶೋಧನೆ ಕೆಲಸದಲ್ಲಿ ಭಾಗಿ, ಕೂಲಿ ಕೆಲಸದವರನ್ನು ನಿಭಾಯಿಸುವ ಕೆಲಸ, ಸೂಪಾ ಡ್ಯಾಮ ಸೈಟ್ ನಲ್ಲಿಯೇ ವಾಸ.
ಮುಂದೆ : ಕೆ.ಪಿ.ಸಿ.ಯಲ್ಲಿ ವರ್ಕ್ ಆಪರೇಟಿವ್, ಅಸಿಸ್ಟಂಟ, ಸೀನಿಯರ್ ಅಸಿಸ್ಟಂಟ, ಕೆ.ಪಿ.ಟಿ.ಸಿ.ಎಲ್‌ನಲ್ಲಿ ಸಂವಹನಾಧಿಕಾರಿಯಾಗಿ ನಂತರ ಸ್ವಂಯಂ ನಿವೃತ್ತಿ. ಕನ್ನಡ ಲೇಖಕನಾಗಿ ರಾಜ್ಯೋತ್ಸವ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸ್ವೀಕಾರ. ಬೆಂಗಳೂರಲ್ಲಿ ವಾಸ.
- ಶ್ರೀ ಅಪ್ಪೂ ಕುಟ್ಟಿ, [ಕೇರಳ] ಮೊದಲು ಸರ್ವೇ ಕ್ಯಾಂಪಿನಲ್ಲಿ ಅಡಿಗೆಯವರು. ನಂತರ ಮುಖ್ಯ ಮೇಸ್ತ್ರಿ, ಸೂಪಾ ಡ್ಯಾಮ ಸೈಟಿನಲ್ಲಿಯೇ ವಾಸ. ಇವರ ಬಗ್ಗೆ ಮುಂದಿನ ಮಾಹಿತಿ ಸಿಕ್ಕಿಲ್ಲ.
- ಶ್ರೀ ಎಸ್.ಎಮ್.ಪಾಟೀಲ, [ಬಾಗಲ ಕೋಟೆ ಜಿಲ್ಲೆ] ರೇನ್ ಗೇಜ ರೀಡರ್, ಜಗಲಬೇಟ್, ಸೆಸ್ಮಿಕ್ ಸ್ಟೇಶನ್ ಖಾನಾಪುರ [ವಸ್ತಿ] ಇವರ ಬಗ್ಗೆ ಮಾಹಿತಿಯಿಲ್ಲ.
ಸಿವಿಲ್ ಟೀಮಿನಲ್ಲಿ ದಿನಗೂಲಿ ಕೆಲಸಗಾರರಾಗಿ ದುಡಿದವರು –
ಲಕ್ಷ್ಮಣಪ್ಪ ಭಜಂತ್ರಿ, ಹನುಮಪ್ಪ ಭಜಂತ್ರಿ, ಮೀಸೆ ಬಸಪ್ಪ, ರಾಮಪ್ಪ, ಕೊಡ್ಲಿ ದುರುಗಪ್ಪ, ಲವ ಮರಾಠೆ, ಗಣಪತಿ ಮರಾಠೆ, ಶ್ರೀಮತಿಯರಾದ ರುಕ್ಮಿಣಿ ಮರಾಠೆ, ದ್ಯಾಮವ್ವ, ಲಕ್ಷ್ಮವ್ವ, ಗಿರೆವ್ವ, ಕಮಲವ್ವ, ಲಚಮಣ್ ಲಂಬಾಣೀ ಮತ್ತು ಅವರ ಕುಟುಂಬ.
[ಎಲ್ಲರೂ ಸೂಪಾ ಡ್ಯಾಮ ಕಟ್ಟುವ ಸ್ಥಳದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಇವರೆಲ್ಲ ಬಾದಾಮಿ ಮತ್ತು ಮಹಾರಾಷ್ಟ್ರದ ಕಡೆಯಿಂದ ದುಡಿಯಲು ಬಂದವರು ನಮ್ಮಲ್ಲಿ ದಿನಗೂಲಿ ಸೇರಿಕೊಂಡಿದ್ದರು. ಕೆಲವರು ಮಂದೆ ಕೆ.ಪಿ.ಸಿಯಲ್ಲಿ ಉದ್ಯೋಗಿಗಳಾದರು. ಬಹುತೇಕರು]
ಎಚ್.ಇ.ಸಿ.ಪಿ. ಇನ್‌ವೆಸ್ಟಿಗೇಶನ್, ಸಬ್ ಡಿವಿಜನ್ ನಂ.೨ ಕಚೇರಿ, ಸೂಪಾ, ಉತ್ತರಕನ್ನಡ ಜಿಲ್ಲೆ –
ಶ್ರೀ ನರಸಿಂಹಯ್ಯ, [ಬೆಂಗಳೂರು] ಸಹಾಯಕ ಎಕ್ಸಿಕ್ಯೂಟಿವ್ ಇಂಜನಿಯರ್, ಮೆಕ್ಯಾನಿಕಲ್, ಬೋರ್ ಮಶೀನು, ಲಾರಿ, ಗೂಡ್ಸ ವಾಹನಗಳು, ಜೀಪುಗಳ ಇನ್‌ಚಾರ್ಜು, ಸೂಪಾ ಡ್ಯಾಮ್ ಸೈಟು, ಬೊಮ್ಮನಳ್ಳಿ, ತಟ್ಟೀಹಳ್ಳ ಆಣೆಕಟ್ಟಿನ ಸ್ಥಳ, ಅಮಗಾ-ಗುತ್ತಿ ಟನಲ್ ಸ್ಥಳ, ಕುಂಬಾರವಾಡಾ, ಉಳುವಿ, ಅಣಶಿ, ಕೊಡಸಳ್ಳಿಗಳಲ್ಲಿ ಪರೀಕ್ಷಾರ್ಥ ಭೂಗರ್ಭದಿಂದ ಬೋರು ಮೂಲಕ ಕೋರು ಕಲ್ಲು ತಗೆಸುವುದು, ಮತ್ತು ಭೂಗರ್ಭದಿಂದ ಹೊರತಗೆದ ಕಲ್ಲುಗಳನ್ನು ಭೂಗರ್ಭ ತಜ್ಞರ ಅನ್ವೇಷಣೆಗಾಗಿ ತಗೆದಿರಿಸುವುದು. ಸೂಪಾದಲ್ಲಿ ಸಬ್ ಡಿವಿಜನ್ ಆಫೀಸಿನಲ್ಲಿಯೇ ವಾಸ. ಆಫೀಸ್ ಕಂ ಮನೆ ಒಂದೇ ಕಟ್ಟಡ. ಮುಂದೆ ಕೆ.ಪಿ.ಸಿ.ಯಲ್ಲಿ ಎಕ್ಸಿಕ್ಯೂಟಿವ್ ಇಂಜನಿಯರ್ ಆಗಿ ನಿವತ್ತಿಯಾದರು. ಈಗ ದಿವಂಗತರು.
- ಶ್ರೀ ರಾಮಚಂದ್ರರಾವ್, [ಮೈಸೂರು] ಅಸಿಸ್ಟಂಟ ಇಂಜನಿಯರ್, ಮೆಕ್ಯಾನಿಕಲ್, ಬೋರು ಮಶೀನುಗಳ ಇನ್‌ಚಾರ್ಜ -ಸೂಪಾ ಡ್ಯಾಮ ಏರಿಯಾ, ಕಂಬಾರವಾಡಾ, ಜೊಯಡಾ, ಅಣಶಿ, ಕೊಡಸಳ್ಳಿ, ಗುಂದ, ಉಳುವಿ, ಕದ್ರಾ, ತಟ್ಟೀಹಳ್ಳ, ಬೊಮ್ಮನಳ್ಳಿ, ನಾಗಝರಿ, ಸೈಕ್ಸ ಪಾಯಿಂಟ, ಒಂಭತ್ತು ಕೀ.ಮೀ. ಟನಲ್ ಏರಿಯಾದಲ್ಲಿ ಬೋರ್ ಕೆಲಸ. ಸೂಪಾದಲ್ಲಿ ಬಾಡಿಗೆ ಮನೆ. ಮುಂದೆ ಇವರು ಕೆ.ಪಿ.ಸಿ.ಯಲ್ಲಿ ಸೂಪರೀಡೆಂಟ ಇಂಜನಿಯರ ಆಗಿ ನಂತರ ಹುದ್ದೆಗೆ ರಾಜೀನಾಮೆ ನೀಡಿದರು.ಮುಂದಿನ ಮಾಹಿತಿ ಸಿಕ್ಕಿಲ್ಲ.
- ಶ್ರೀ ಚಾಮರಾಜ, [ಮೈಸೂರು] ಅಸಿಸ್ಟಂಟ ಇಂಜನಿಯರ್, ಮೆಕ್ಯಾನಿಕಲ್, ಇನ್‌ಚಾರ್ಜ- ರಾಜಸ್ತಾನ ಬೋರು ಕಂಪನಿ ಕೆಲಸಗಳು ಸೂಪಾ ಡ್ಯಾಮ ಸೈಟಿನಲ್ಲಿ ಬರುವ ಮೆಕ್ಯಾನಿಕಲ್ ತಾಂತ್ರಿಕ ಕೆಲಸಗಳು. ಸೂಪಾದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಮುಂದಿನ ಮಾಹಿತಿ ಇಲ್ಲ.
- ಶ್ರೀ ಭೈರಾಚಾರಿ, [ಹಾಸನ] ಹೆಡ್ ಕ್ಲರ್ಕ್ ಕಂ ಆಫೀಸ ಸೂಪರಿಡೆಂಟು ಕಂ ಕ್ಯಾಶೀಯರು,ಎ.ಇ.ಇ. ಕಚೇರಿ, ಸೂಪಾದಲ್ಲಿ ಬಾಡಿಗೆ ಮನೆ ವಾಸ. ಮುಂದಿನ ಮಾಹಿತಿ ಸಿಕ್ಕಿಲ್ಲ.
- ಶ್ರೀ ದಯಾನಂದ ಪೈ, [ಶಿರಸಿ] ಡಿಪಾರ್ಟಮೆಂಟ್ ಲಾರೀ ಚಾಲಕರು. ಸೂಪಾದಲ್ಲಿ ಬಾಡಿಗೆ ಮನೆ ವಾಸ. ಮುಂದಿನ ಮಾಹಿತಿ ಸಿಕ್ಕಿಲ್ಲ.
- ಶ್ರಿ ಮೊಮ್ಮದ್ ಕುಟ್ಟಿ [ಕೇರಳ] ಬೋರಿಂಗ್ ಮಶೀನ್ ಹೆಡ್ ಆಪರೇಟರ್ . ಸೂಪಾ ಡ್ಯಾಮ ಸೈಟಿನಲ್ಲಿ ಶೀಟ್ ಮನೆಯಲ್ಲಿ ವಾಸ. ಮುಂದೆ ಕೆ.ಪಿ.ಸಿ.ಯಲ್ಲಿ ಮೆಕ್ಯಾನಿಕ್ ಆಗಿ ನಿವೃತ್ತರಾದರು.
- ಶ್ರೀ ಝಕೀರ ಸಾಬ್, [ಕೇರಳ] ಹಿರಿಯ ಬೋರಿಂಗ್ ಆಪರೇಟರ್] ಸೂಪಾದಲ್ಲಿ ಬಾಡಿಗೆ ಮನೆಯಲ್ಲಿ ವಾಸ. ಮುಂದೆ ಕೆ.ಪಿ.ಸಿ.ಯಲ್ಲಿ ಮೆಕ್ಯಾನಿಕ್ ಆಗಿ ನಿವೃತ್ತಿಯಾದರು. ಈಗ ದಿವಂಗತರು.
- ಶ್ರೀ ಚಿಕ್ಕಸ್ವಾಮಿ, [ಹಾಸನ] ಬೋರಿಂಗ ಆಪರೇಟರ್, ಸೂಪಾ ಡ್ಯಾಮಸೈಟು, ಕೊಡಸಳ್ಳಿಯಲ್ಲಿ ಶೀಟು ಮನೆಯಲ್ಲಿದ್ದರು. ಮುಂದೆ ಕೆ.ಪಿ.ಸಿ.ಯಲ್ಲಿ ಉದ್ಯೋಗಿ. ಈಗ ದಿವಂಗತರು.
- ಶ್ರೀರಾಜು, [ಹಾಸನ] ಬೋರಿಂಗ ಆಪರೇಟರ್. ಸೂಪಾ ಡ್ಯಾಮ ಸೈಟಿನಲ್ಲಿ ಶೀಟು ಮನೆಯಲ್ಲಿ ವಾಸ. ಮುಂದೆ ಕೆ.ಪಿ.ಸಿ.ಯಲ್ಲಿ ಉದ್ಯೋಗಿ. ಈಗ ದಿವಂಗತರಾಗಿದ್ದಾರೆ.
- ಶ್ರೀ ಕಮಲಾಕರ ಮೂರ್ತಿ, [ಸೂಪಾ] ಸೂಪಾ ಊರಲ್ಲಿ ಸ್ವಂತ ಮನೆಯಿತ್ತು. ಅಲ್ಲಿಯೇ ವಾಸ. ಮುಂದೆ ಕೆ.ಪಿ.ಸಿಯಲ್ಲಿ ಗ್ಯಾರೇಜು ಸಹಾಯಕರಾಗಿ ನಿವೃತ್ತರಾದರು.
ಕ್ಯಾಸಲ್ ರಾಕನಲ್ಲಿ – ಫೆಡ್ರಿಕ್ ಮತ್ತು ಮಂಗೇಶ ಚಂದಾವರ್ಕರ, ಜಾನ್, ಲೂಸಿ [ಫೆಡ್ರಿಕ್ ನ ಹೆಂಡತಿ], ಮಾರಿಯಾ [ಜಾನ್ ನ ಹೆಂಡತಿ ಮತ್ತು ಫೆಡ್ರಿಕ್ ನ ಸೋದರಿ], ಮೀನು ಅಂಗಡಿಯ ರಾಧಾ [ಮಂಗೇಶ ಚಂದಾವರ್ಕನ ಹೆಂಡತಿ], ಟೀ ಶಾಪಿನ ಉಸ್ತಾದ, ಬಂಗ್ಲೆ ಗಾರ್ಡ ಮಾಂಜ್ರೇಕರ,
ಚಾಂದೇವಾಡಿ – ನವಲೂ ಗೌಳಿ
- ಹೂಲಿ ಶೇಖರ್ ( ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ )