ವಚನದ ಅರ್ಥ ತಿಳಿಯಿರಣ್ಣ (ಭಾಗ- ೨)

ದ್ವೇಷ, ಅಸಹ್ಯ, ವಂಚನೆ, ಮೋಸ, ಅತ್ಯಾಚಾರ, ಬಲಾತ್ಕಾರ, ಇವುಗಳನ್ನು ಬಿಟ್ಟು, ಪ್ರೀತಿ, ವಿಶ್ವಾಸ, ಸ್ನೇಹ, ಸೌಹಾರ್ದತೆಯಿಂದ ಬದುಕಿದರೆ ಮನುಷ್ಯನ ಅಂತರಂಗದ ಆತ್ಮವು ಶುದ್ಧ, ಹೊರಗಿನ ನಡೆಯ ಬಹಿರಂಗವು ಶುದ್ಧ. ತನಗೂ ಒಳ್ಳೆಯದು, ಸಾಮಾಜಕ್ಕೂ ಒಳ್ಳೆಯದು, ರಾಜ್ಯ, ರಾಷ್ಟ್ರ ಜಗತ್ತಿಗೂ ಒಳ್ಳೆಯದು ಎಂದು ತಿಳಿಸಿದ್ದಾರೆ. ವಚನಶ್ರೀ ಶಿವಕುಮಾರ ಪಾಟೀಲ ಅವರು ವಚನದ ಅರ್ಥ ತಿಳಿಸುತ್ತಿದ್ದಾರೆ, ತಪ್ಪದೆ ಮುಂದೆ ಓದಿ….

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. 

  • ಬಸವಣ್ಣ

ಎಲ್ಲಾ ರಾಷ್ಟ್ರಗಳು ತಮ್ಮ ಪ್ರಜೆಗಳ ಕರ್ತವ್ಯಗಳ ನಿಲುವಳಿಗಳನ್ನು ತಮ್ಮ ತಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದಾವೆ. ಪ್ರಪಂಚದ ಮೊದಲ ಸಂವಿಧಾನ ” ದಿ ರಿಪಬ್ಲಿಕ್ ಆಫ್ ಸ್ಯಾನ್ ಮ್ಯಾರಿನೋ” ಒಕ್ಕೂಟದು ಅದರ ಕಾಲ 1600 ನೇ ವರ್ಷ.

ಎಲ್ಲಾ ಸಂವಿಧಾನಗಳಿಗಿಂತ ಮೊದಲೇ ನಮ್ಮ ನೆಲದ ವಿಶ್ವಗುರು ಬಸವಣ್ಣನವರು ಈಡಿ ಮನುಕುಲಕ್ಕೆ ವಚನಗಳ ಮುಖಾಂತರ ಈಡಿ ವಿಶ್ವಕ್ಕೆ ಮಾದರಿ ಆಗುವಾಗೆ ವಚನ ಸಂವಿಧಾನವನ್ನು ಅನೇಕ ಶರಣರನ್ನು ಕೊಡಿಸಿಕ್ಕೊಂಡು ನೀಡಿರುವುದು ನಮ್ಮ ಭಾಗ್ಯ.

ಬಸವಣ್ಣನವರ ಒಂದು ವಚನದಲ್ಲಿ ನಾಗರಿಕನ ಕರ್ತವ್ಯ ಹೇಗಿರಬೇಕು ಎಂದು ನಿರೂಪಿಸಿದ್ದಾರೆ. ಇದರಲ್ಲಿ ಯಾವ ಯಾವ ಕೃತ್ಯಗಳನ್ನು ಮಾಡಬಾರದು (Don’t Do’s) ಸೂತ್ರವನ್ನು ಹೇಳಿದ್ದಾರೆ. ಅವುಗಳೆಂದರೆ ಕಳ್ಳತನ ಮಾಡಬಾರದು, ಕೋಲೆ ಮಾಡಬಾರದು, ಸುಳ್ಳು ಹೇಳಬಾರದು, ಕೋಪ ಮಾಡಿಕೋಬಾರದು, ಅಸಹ್ಯ ಪಡಬಾರದು, ನಾನು ಅಹಂಕಾರ ಇರಬಾರದು, ಅಪಮಾನ ಮಾಡಬಾರದು. ಇವಿಷ್ಟನ್ನೂ ಸ್ವಯಂ ಅರಿವಿನಲ್ಲಿ ಮನಗಂಡು ಅನುಸರಿಸಿಬೇಕು.

ಈ ಅಪಚಾರಗಳನ್ನು ಮಾಡದ ಆಚಾರಣೆಯೇ ಮನುಷ್ಯ ತನ್ನನ್ನು ಶುದ್ಧಗೊಳಿಸಿಕೊಳ್ಳಬಹುದು. ದ್ವೇಷ, ಅಸಹ್ಯ, ವಂಚನೆ, ಮೋಸ, ಅತ್ಯಾಚಾರ, ಬಲಾತ್ಕಾರ, ಇವುಗಳನ್ನು ಬಿಟ್ಟು, ಪ್ರೀತಿ, ವಿಶ್ವಾಸ, ಸ್ನೇಹ, ಸೌಹಾರ್ದತೆಯಿಂದ ಬದುಕಿದರೆ ಮನುಷ್ಯನ ಅಂತರಂಗದ ಆತ್ಮವು ಶುದ್ಧ, ಹೊರಗಿನ ನಡೆಯ ಬಹಿರಂಗವು ಶುದ್ಧ. ತನಗೂ ಒಳ್ಳೆಯದು, ಸಾಮಾಜಕ್ಕು ಒಳ್ಳೆಯದು, ರಾಜ್ಯ, ರಾಷ್ಟ್ರ ಜಗತ್ತಿಗೂ ಒಳ್ಳೆಯದು ಎಂದು ತಿಳಿಸಿದ್ದಾರೆ.

ಇದರ ಹೊರತಾಗಿ ಬೇರೆ ಯಾವುದೇ ಮಾರ್ಗವಿಲ್ಲ ಕೂಡಲಸಂಗಮದೇವ ಎಂಬ ಸೃಷ್ಟಿಯನ್ನು ಬೆರೆಯಲು ಎಂದು ಕರ್ತವ್ಯವನ್ನು ನಿರೂಪಿಸಿದ್ದಾರೆ.

ಶರಣು ಶರಣಾರ್ಥಿಗಳು…

ಹಿಂದಿನ ಸಂಚಿಕೆಗಳು :

  • ವಚನದ ಅರ್ಥ ತಿಳಿಯಿರಣ್ಣ (ಭಾಗ-೧)

  • ವಚನಶ್ರೀ ಶಿವಕುಮಾರ ಪಾಟೀಲ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW