ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ…ವಚನದ ಅರ್ಥವನ್ನು ವಚನಶ್ರೀ ಶಿವಕುಮಾರ ಪಾಟೀಲ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ….
ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ.
————–
ಬಸವಣ್ಣ
ಮೊದಲು ನಮ್ಮನ್ನು ನಾವು ಅರಿಯಬೇಕು, ಮನೆಯನ್ನು ಮನೆಗಳಲ್ಲಿ ಇರುವ ಮನಗಳನ್ನು ಗೆಲ್ಲಬೇಕು. ನಮ್ಮ ವೈಯಕ್ತಿಕ ಗುರಿಯನ್ನು ಅರಿಯುವ, ನಮ್ಮ ತನವನ್ನು ಅರಿಯುವ, ನಮ್ಮ ದುರ್ಗಣಗಳ ನಿಯಂತ್ರಿಸುವ, ನಮ್ಮ ಮನದಲ್ಲಿ ಸದ್ಗುಣಗಳ ಬೀಜವ ಬಿತ್ತಿಕೊಳ್ಳುವ ಕೆಲಸ ಮೊದಲು ನಾವು ಮಾಡಬೇಕು.
ಅದ ಬಿಟ್ಟು ಅನ್ಯರ ಹುಳುಕುಗಳಿಗೆ ಬೆಳಕು ಹರಿಸಲು ಹೋದರೆ ನಮ್ಮ ಬದುಕು ಕತ್ತಲೆ ಆಗುತ್ತದೆ. ಅದಕ್ಕೆ ಅವಕಾಶ ಕೊಡದೆ ಮೊದಲು ನಮ್ಮ ಕಾಯಕದಲ್ಲಿ ನಮ್ಮ ಒಲವಿನ ಜವಾಬ್ದಾರಿಯ ಬದುಕಿನ ಬಗ್ಗೆ ಗಮನಹರಿಸಿ ಸದೃಢರಾಗಬೇಕು.
ಬೇರೆಯವರ ವಿಚಾರ, ನಮಗೆ ನಿಲುಕದ ಸಮಾಜದ ವಿಚಾರ ಸರಿಪಡಿಸಲಾಗದ ವಿಷಯಗಳಲ್ಲಿ ವ್ಯರ್ಥ ಚರ್ಚೆ, ವ್ಯರ್ಥ ಅನುಕಂಪ, ಕೃತಕ ಉಪದೇಶಗಳ ಅಗತ್ಯ, ಅವಶ್ಯ ಇಲ್ಲ.
Waste of time , ಸಮಯ ವ್ಯರ್ಥ ಅಷ್ಟೇ. ಕೃತಕ ಭಾವಗಳು ಸೃಷ್ಟಿಕರ್ತನಿಗೆ ಅಪ್ರಿಯವಾದವು.
ಹಿಂದಿನ ಸಂಚಿಕೆಗಳು :
- ವಚನದ ಅರ್ಥ ತಿಳಿಯಿರಣ್ಣ (ಭಾಗ-೧)
- ವಚನದ ಅರ್ಥ ತಿಳಿಯಿರಣ್ಣ (ಭಾಗ- ೨)
- ವಚನಶ್ರೀ ಶಿವಕುಮಾರ ಪಾಟೀಲ
