‘ವಚನ ಮಾರ್ಗ’ ಓದಿರಣ್ಣ

ವಚನ ಸಾಹಿತ್ಯ ಜಗತ್ತಿನಲ್ಲೇ ಅತ್ಯಂತ ಅನನ್ಯ ಸಾಹಿತ್ಯ. ಸಂಖ್ಯೆಯೂ ಅಪಾರ. ಬಸವಾದಿ ಶರಣರು ಸೃಷ್ಟಿಸಿದ ಅನುಭವ ಮಂಟಪದ ಶೂನ್ಯ ಪೀಠದ ಮೊದಲ ಅಧ್ಯಕ್ಷರಾದ ಅಲ್ಲಮಪ್ರಭು ಅವರು ‘ಎರಡು ಕೋಟಿ ವಚನವ ಹಾಡಿ ಹಂಬಲಿಸಿತೆನ್ನ ಮನ’ ಎಂದಿದ್ದಾರೆ. ಅಷ್ಟು ಸಂಖ್ಯೆಯ ವಚನಗಳಲ್ಲಿ ಇಂದು ಸುಮಾರು ೨೫ ಸಾವಿರ ವಚನಗಳು ಲಭ್ಯವಾಗಿರಬಹುದು.

–  ಡಾ. ಶಿವಮೂರ್ತಿ ಮುರುಘಾ ಶರಣರು


ಅಂತರಂಗ ಶುದಿ 

ಕೊಳಲ ದನಿಗೆ ಸರ್ಪ ತಲೆದೂಗಿದಡೇನು
ಒಳಗಣ ವಿಷದ ಬಯಕೆ ಬಿಡದನ್ನಕ್ಕ?
ಹಾಡಿದಡೇನು ಕೇಳಿದಡೇನು ತನ್ನಲುಳ್ಳ ಅವಗುಣ ಬಿಡದನ್ನಕ್ಕ?
ಒಳಗನರಿದು ಹೊರಗೆ ಮರೆದವರ
ನೀ ಎನಗೆ ತೋರಯ್ಯಾ ಚೆನ್ನಮಲ್ಲಿಕಾರ್ಜುನ

ಹೊರಗಿನ ಪ್ರೇರಣೆಯಿಂದ ಒಳಗಣವು ಶುದ್ಧವಾಗುವುದೇ?. ತನ್ನ ಒಡಲು ಮತ್ತು ಮನದ ಕೇಡ ಕಳೆಯದೆ ಯಾವ ಹಾಡ ಕೇಳಿದರೇನು? .ಕೊಳಲ ಸವಿ ದನಿಗೆ ಸರ್ಪ ತಲೆದೂಗಿದೊಡನೆ ಅದರ ವಿಷವು ಇಲ್ಲವಾಗುವುದೇ? ಇದು ಇಂತಹ ವಿಪರ್ಯಾಸವೆನ್ನುವ ಅಕ್ಕ ತಮ್ಮ ಒಳ ಮತ್ತು ಹೊರಗನ್ನು ಅರಿತು ಏಕವಾಗಿಸದವರು ಕೊಳಲು ಮತ್ತು ಸರ್ಪದ ಸಂಬಂಧಗಳ ಅಸಂಬದ್ಧ ರೂಪಕಗಳಿಗೆ ಹೋಲಿಸಿ ಹೊರಗಿನ ಮಾತು ಮತ್ತು ಆಚರಣೆಗಳಿಂದ ಒಳಭಾಗ ಶುದ್ಧಿ ಸಾಧ್ಯವಿಲ್ಲವೆನ್ನುತ್ತಾಳೆ. ಅಂತರಂಗವೇ ತಾನಾಗಿ ಹೊರಗೆಂಬುದಿಲ್ಲದವರೇ ಶಿವೈಕ್ಯರು ಎಂದು ಅಕ್ಕ ಈ ವಚನದಲ್ಲಿ ಪ್ರತಿಪಾದಿಸುತ್ತಿದ್ದಾರೆ.

ಅಂತರಂಗದ ಸಾಧನೆ

ಒಳಗ ತೊಳೆಯಲರಿಯದೆ ಹೊರಗ ತೊಳೆದು
ಕುಡಿವುತ್ತಿರ್ದರಯ್ಯಾ
ಪಾದೋದಕ ಪ್ರಸಾದವನರಿಯದೆ ಬಂದೆ ಬಟ್ಟೆಯಲ್ಲಿ
ಮುಳುಗುತ್ತೈದಾರೆ ಗುಹೇಶ್ವರಾ

ಅಲ್ಲಮನ ವಚನ, ಸರಳವಾಗಿ ಶರಣತ್ವ ಎಂದರೆ ತಮ್ಮ ಒಳಗನ್ನು ತೊಳೆದುಕೊಳ್ಳುವುದು ಎಂದೇ ಅರ್ಥ. ಆದರೆ ಹೊರಗೆ ಮಾತ್ರ ತೊಳೆದುಕೊಂಬ ಮಂದಿ ಮನದ ಕಶ್ಮಲಗಳ ತೊಳೆಯದ, ಅಂತರಂಗವನ್ನರಿಯದೆ ಕೇವಲ ಆಡಂಬರದ ಪದ್ಧತಿಗಳಲ್ಲಿ ಹೊರಗನ್ನು ತೊಳೆದು ಅದನ್ನೇ ಕುಡಿವ ಅಸಹ್ಯಿಗಳು. ಇಂಥವರು ನಿಜವಾದ ಪಾದೋದಕ ಹಾಗೂ ಪ್ರಸಾದವನ್ನರಿಯದೆ ನೀರಲ್ಲಿ ಮಡಿ ಮಡಿ ಎಂದು ದೇಹವನ್ನು ಮುಳುಗಿಸುತಿರು. ತಮ್ಮ ಒಳಗನ್ನು ಜ್ಞಾನತೀರ್ಥದಿಂದ ತೊಳೆಯದ ಈ ಮಂದಿ ಅಂತರಂಗದಲ್ಲಿ ಶಿವತತ್ವವ ನೆಲೆಗೊಳಿಸದ ಹೊರಗನ್ನು ಮಾತ್ರ ತೊಳೆದುಕೊಂಡಿಹ ಡಾಂಭಿಕಕರೇ ಆಗಿದ್ದಾರೆಂಬುದು ಅಲ್ಲಮನ ವಿಮರ್ಶೆ.

(ಸಂಗ್ರಹ : ವಚನ ಮಾರ್ಗ ಪುಸ್ತಕ)

  • ಡಾ. ಪ್ರಕಾಶ ಮಂಟೇದ
0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW