ಹಣ್ಣು,ತರಕಾರಿಗಳು ಮನುಷ್ಯನ ದೇಹಕ್ಕೆ ಸಾಕಷ್ಟು ಪೋಷಕಾಂಶವನ್ನು ನೀಡುತ್ತದೆ. ಅವುಗಳ ಬೀಜಗಳು ಎರಡುಪಟ್ಟು ಶಕ್ತಿಯನ್ನು ನೀಡುವುದರ ಜೊತೆಗೆ ಕೆಲವು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಚಿಪ್ಸ್, ಬರ್ಗರ್ ಕಾಲದಲ್ಲಿ ಆರೋಗ್ಯಕರ ಬದುಕನ್ನು ಕಂಡುಕೊಳ್ಳುವುದು ಕಷ್ಟ.
ಆದಷ್ಟು ಪೋಷಕಾಂಶಯುಕ್ತ ಬೀಜಗಳನ್ನು ನಮ್ಮ ದಿನಚರಿ ಆಹಾರದಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಸೂರ್ಯಕಾಂತಿ ಬೀಜ :
- ಕ್ಯಾನ್ಸರ್ ನಂತಹ ಮಹಾ ಖಾಯಿಲೆಯನ್ನು ತಡೆಯುವ ಶಕ್ತಿ ಇದೆ.
- ಇದರಲ್ಲಿ ವಿಟಮಿನ್ ‘ಇ’ ಇರುವುದರಿಂದ ಚರ್ಮದ ಕಾಂತಿಯನ್ನು ಕಾಪಾಡುತ್ತದೆ
- ಈ ಬೀಜವನ್ನು ತಿನ್ನುವುದರಿಂದ ಸಂಧಿ ನೋವನ್ನು ತಡೆಯಬಹುದು
- ಹೃದಯ ಖಾಯಿಲೆಯನ್ನು ತಡೆಯಿಡಿಯಬಹುದು
ಕಪ್ಪು ಜೀರಿಗೆ
- ಬಾಯಲ್ಲಿನ ಹುಣ್ಣನ್ನು ಕಮ್ಮಿ ಮಾಡುತ್ತದೆ.
- ಚರ್ಮ ರೋಗಗಳಾದ ಬಿಳಪು, ಒಣ ಚರ್ಮ ಮತ್ತು ಸೂರ್ಯಾಸಿಸ್ ಖಾಯಿಲೆಯನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುವುದು.
- ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
- ವಸಡಿನಲ್ಲಿ ರಕ್ತಸ್ರಾವ ಮತ್ತು ಬಾಯಲ್ಲಿನ ದುರ್ನಾತವನ್ನು ತಡೆಯುತ್ತದೆ.
ಅಗಸೆ ಬೀಜ
- ಇದರಲ್ಲಿ ವಿಟಮಿನ್ ‘ಸಿ’ ಮತ್ತು ‘ಕೆ’ ಇರುವುದರಿಂದ ರೋಗ ನಿರೋಧಕ ಶಕ್ತಿ ಇದೆ
- ಕೊಬ್ಬನ್ನು ಕರಗಿಸುತ್ತದೆ.
- ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೇಸಂ ಬೀಜ
- ಇದು ಕ್ಯಾನ್ಸರ್ ಮತ್ತು ಗೆಡ್ಡೆಗಳನ್ನು ತಡೆಹಿಡಿಯುತ್ತದೆ.
- ಅಸ್ತಮಾ ಅಥವಾ ಉಸಿರಾಟದ ಸಮಸ್ಯೆಗಳಿಗೆ ಉತ್ತಮ ಪರಿಹಾರ.
- ತಲೆನೋವು, ಮಾನಸಿಕ ಒತ್ತಡಗಳಿಂದ ಆಗುವ ಸಮಸ್ಯೆಯನ್ನು ತಡೆಯುತ್ತದೆ.
- ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಗೆ ಇದು ಉತ್ತಮವಾಗಿದೆ.
- ಸಕ್ಕರೆ ಕಾಯಿಲೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಪನೀರ್ ದೋಡಿ ಬೀಜ
- ಈ ಬೀಜವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸಬಹುದು.
- ರಕ್ತದಲ್ಲಿನ ಕೊಬ್ಬಿನಂಶವನ್ನು ಕಮ್ಮಿ ಮಾಡುತ್ತದೆ.
- ಸಂಧಿವಾತಗಳನ್ನು ಕಮ್ಮಿಗೊಳಿಸುತ್ತದೆ.
ನುಗ್ಗೆ ಬೀಜ
- ರಕ್ತಹೀನತೆ ಮತ್ತು ರಕ್ತದೊತ್ತಡವನ್ನು ಕಮ್ಮಿ ಮಾಡುತ್ತದೆ.
- ಗ್ಯಾಸ್ಟ್ರಿಕ್ ಸಮಸ್ಯೆನ್ನು ಕಮ್ಮಿ ಮಾಡುತ್ತದೆ.
- ಕಿಡ್ನಿ ಸಮಸ್ಯೆಗಳಿಗೆ ರಾಮ ಬಾಣ.
ಮೂಲಂಗಿ ಬೀಜ
- ನಾರಿನಂಶ ಇದರಲ್ಲಿ ಆಗಾಧವಾಗಿರುವುದರಿಂದ ಕಿಡ್ನಿಯಲ್ಲಿ ಕಲ್ಲಾಗದಂತೆ ನೋಡಿಕೊಳ್ಳಬಹುದು.
- ಕ್ಯಾನ್ಸರ್ ಖಾಯಿಲೆಯಂತಹ ಮರಣಾತಿಕ ಖಾಯಿಲೆಯನ್ನು ಬರದಂತೆ ನೋಡಿಕೊಳ್ಳುತ್ತದೆ.
- ಕಾಮಾಲೆ ಕಾಯಿಲೆ ತಡೆಯಬಹುದು.
ಮಾಹಿತಿ ಸಂಗ್ರಹ : google.com