‘ವರ್ಣ ತಂತು’ ಕೃತಿ ಪರಿಚಯ : ರಮ್ಯ ರಾಜ್

ಜೆನೆಟಿಕ್ ಸ್ಕ್ರೀನಿಂಗ್ (ಅನುವಂಶಿಕ ತಪಾಸಣೆ) ಬಗ್ಗೆ ದಿನಪತ್ರಿಕೆಯಲ್ಲಿ ಓದಿದ್ದೆ. ಆದರೆ ಲೇಖಕಿಯವರು ಇಷ್ಟು ವಿವರವಾಗಿ, ಮಾಹಿತಿ ಕಲೆ ಹಾಕಿ ತಿಳಿಸಿಕೊಟ್ಟಿದ್ದಾರೆ ಅದಕ್ಕೆ ಅವರಿಗೆ ಮೊದಲನೆಯದಾಗಿ ಅಭಿನಂದನೆಗಳು ಎನ್ನುತ್ತಾರೆ ಲೇಖಕಿ ರಮ್ಯ ರಾಜ್ ಅವರು. ರಮ್ಯ.ಎಸ್ ಅವರ ವರ್ಣ ತಂತು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ ರಮ್ಯಾ ರಮ್ಯಾರಿಗಾಗಿ ಬರೆದ ಪುಸ್ತಕ ಪರಿಚಯ…

ಪುಸ್ತಕ  – ವರ್ಣ ತಂತು
ಲೇಖಕರು – ರಮ್ಯ . ಎಸ್
ಪ್ರಕಾಶಕರು – ಸಮನ್ವಿತ ಬೆಂಗಳೂರು 98 44 192 952
ಪ್ರಥಮ ಮುದ್ರಣ -2024
ಪುಟಗಳ ಸಂಖ್ಯೆ -168
ಬೆಲೆ – 190

  •  ಜೆನೆಟಿಕ್ ಸ್ಕ್ರೀನಿಂಗ್ (ಅನುವಂಶಿಕ ತಪಾಸಣೆ) ಬಗ್ಗೆ ದಿನಪತ್ರಿಕೆಯಲ್ಲಿ ಓದಿದ್ದೆ .ಆದರೆ ಲೇಖಕಿಯವರು ಇಷ್ಟು ವಿವರವಾಗಿ, ಮಾಹಿತಿ ಕಲೆ ಹಾಕಿ ತಿಳಿಸಿಕೊಟ್ಟಿದ್ದಾರೆ ಅದಕ್ಕೆ ಅವರಿಗೆ ಮೊದಲನೆಯದಾಗಿ ಅಭಿನಂದನೆಗಳು.
  •  ಹೆಚ್ಚಿನ ಮನೆಗಳಲ್ಲಿ ಇತರೆ ಕಿರಿಯ ಸದಸ್ಯರು ಮನೆಯ ಮುಖ್ಯ ಸದಸ್ಯರ ಮಾತನ್ನೇ ಕೇಳಿಕೊಂಡು ಬಂದಿರುತ್ತಾರೆ. ಅದು ಒಳ್ಳೆಯ ಸಂಸ್ಕಾರವು ಹೌದು. ಆದರೆ ಕೆಲವೊಮ್ಮೆ ಆ ವ್ಯಕ್ತಿ ನನ್ನದೇ ಮಾತು ನಡೆಯಬೇಕೆಂಬ ಉದ್ಧಟನತನದಲ್ಲಿ ಮಿತಿಮೀರಿ ವರ್ತಿಸುತ್ತಾ, ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಸಂದರ್ಭದಲ್ಲಿ ಆ ಮನೆಯ ಇತರೆ ಸದಸ್ಯರು ಅವರ ಮಾತನ್ನು ಪುಷ್ಠೀಕರಿಸದೆ, ಅಸಡ್ಡೆ ತೋರಿದಾದಲ್ಲಿ ಒಂದು ಸಂಸಾರವು ನುಚ್ಚು ನೂರಾಗುವುದನ್ನು ಹೇಗೆ ತಪ್ಪಿಸಬಹುದು… ಎಂಬ ಅಂಶಗಳು ಈ ಪುಸ್ತಕದಲ್ಲಿ ಅದ್ಭುತವಾಗಿ ಮೂಡಿಬಂದಿದೆ.
  • ಸಾಮಾನ್ಯವಾಗಿ ಗರ್ಭಿಣಿ ಹೆಂಗಸರು ಸ್ಕ್ಯಾನಿಂಗ್ ಮಾಡಿಸಿಕೊಂಡು ಮಗು ಆರೋಗ್ಯವಾಗಿದೆಯೇ? ಇಲ್ಲವೇ ಎಂಬೆಲ್ಲಾ ಮಾಹಿತಿಯನ್ನು ಪಡೆಯುತ್ತಾರೆ. ಅದಕ್ಕೂ ಮುಂದುವರೆದು ಗಂಡ, ಹೆಂಡತಿ ಇಬ್ಬರೂ ನಾವು ಆರೋಗ್ಯಯುತವಾದ ಮಗುವನ್ನು ಪಡೆಯಲು ಯೋಗ್ಯವಾಗಿದ್ದೇವೆಯೇ ಎಂಬ ಯೋಚನೆ ಮಾಡಿ ತಪಾಸಣೆಗೆ ಯಾರು ಹೋಗುವುದಿಲ್ಲ. ಆದರೆ ಈ ಪುಸ್ತಕವನ್ನು ಓದಿದ ಮೇಲೆ ರಕ್ತ ಸಂಬಂಧದಲ್ಲಿಯೇ ಮದುವೆ ಆಗಿರಲಿ, ಇಲ್ಲ ಹೊಸ ಸಂಬಂಧವೇ ಆಗಿರಲಿ ಪ್ರತಿಯೊಬ್ಬರು ಅನುವಂಶಿಕ ತಪಾಸಣೆ ಮಾಡಿಸಿಕೊಳ್ಳುವುದು ಎಷ್ಟು ಪ್ರಯೋಜನಕಾರಿ ಎಂಬ ಅತ್ಯಮೂಲ್ಯ ಮಾಹಿತಿ ಈ ಪುಸ್ತಕದಲ್ಲಿ ಅಡಗಿದೆ ಎನ್ನಬಹುದು.

  • ಈ ಕಾದಂಬರಿಯಲ್ಲಿ ಪ್ರತಿಯೊಂದು ಪಾತ್ರವು ಅದ್ಭುತವಾಗಿ ಮೂಡಿಬಂದಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯವರು ಸಿಕ್ಕಿಬಿಟ್ಟರೆ ಅರ್ಧ ಸಮಸ್ಯೆಗಳು ಪರಿಹಾರವಾದಂತೆಯೇ ಎಂಬುದಕ್ಕೆ ಸಾಕ್ಷಿ ಎನ್ನುವಂತಿದೆ ಈ ಪುಸ್ತಕ.
  • ಇದರಲ್ಲಿ ಭುವನ (ನಾಯಕಿಯ ತಾಯಿ) ಅವರು ಅಷ್ಟು ನೊಂದುಕೊಳ್ಳಬಾರದಿತ್ತು. ಇದರಲ್ಲಿ ಅವರದೇನು ತಪ್ಪಿರಲಿಲ್ಲ. ಸುಮಿತ್ರ ಅಜ್ಜಿಗೆ ಕಾಯಿಲೆ ಗಾರ್ಗಿ ಇಂದ ಮಗುವಿಗೆ ವರ್ಗಾವಣೆಯಾಗುತ್ತಿದೆ ಎಂಬ ವಿಷಯವನ್ನು ತಿಳಿಸ ಬಾರದಿತ್ತು ಎನ್ನಿಸಿತು. ಸುಮಿತ್ರ ಅಜ್ಜಿಯ ಮನಪರಿವರ್ತನೆ ಮಾಡಿದ ಮೈತ್ರೆಯಿ ಪಾತ್ರ ಅದ್ಭುತ .
  • ಒಳ್ಳೆಯ ವೈಜ್ಞಾನಿಕ ಬರಹವನ್ನು, ಸರಳವಾಗಿ, ಚೆನ್ನಾಗಿ ವಿವರಿಸಿದ್ದಾರೆ. ಅನಾರೋಗ್ಯ ಮಗು ಹುಟ್ಟಿದ ಮೇಲೆ ಕೊರಗುವುದಕ್ಕಿಂತ, ಭ್ರೂಣದಲ್ಲಿ ಗೊತ್ತು ಮಾಡಿಕೊಳ್ಳುವ ಈ ಯೋಜನೆ ಎಲ್ಲರಿಗೂ ತಲುಪುವಂತಾಗಬೇಕು. ಪ್ರಣಾಳಿಕೆ ಶಿಶುವಿನ ಬಗ್ಗೆ ಚೆನ್ನಾಗಿ ಮಾಯಿತಿ ನೀಡಿದ್ದಾರೆ. ಎಲ್ಲರೂ ಓದಲೇ ಬೇಕಾದ ಪುಸ್ತಕ.

  • ರಮ್ಯ ರಾಜ್

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading