ಕವಿ ಮೇಗರವಳ್ಳಿ ರಮೇಶ್ ಅವರು ಸುಂದರ ಕವನವನ್ನು ತಪ್ಪದೆ ಓದಿ…
ನಿನ್ನೆ ರಾತ್ರಿ ಊಟ ಮಾಡಿ ಮಲಗಿದ ಮೇಲೆ ನನ್ನವಳು
ಬಲ ಮಗ್ಗುಲಿಗೆ ತಿರುಗಿ ಗಾಢ ನಿದ್ರೆಗೆ ಜಾರಿದಳು
ನಾನೂ ಎಡ ಮಗ್ಗುಲಿಗೆ ತಿರುಗಿ
ಗಾಢ ನಿದ್ರೆಗೆ ಜಾರಿದೆ.
ಬೆಳಗಿನ ಜಾವ ನನ್ನವಳು
ನನ್ನನ್ನಾವರಿಸಿದಾಗ ಕವಿತೆಗಳ ಮಳೆ
ಸುರಿಯುತ್ತಿತ್ತು
ತಂಗಾಳಿಯಲ್ಲಿ ಸಂಗೀತದ ಪಲಕು
ತೇಲಿ ಬರುತ್ತಿತ್ತು.
ಸೂರ್ಯ ಓಕುಳಿ ಚೆಲ್ಲಿದಾಗ ಕನಸು ಕಡಿದು
ಧಿಗ್ಗನೆಚ್ಚರಗೊಂಡೆ.
ಪಕ್ಕದಲ್ಲಿ ನನ್ನವಳಿರಲಿಲ್ಲ.
ದೇವರ ಮನೆಯಿಂದ ಭಕ್ತಿ ಭಾವದಲ್ಲವಳು
ಸುಶ್ರಾವ್ಯವಾಗಿ ಹೇಳುತ್ತಿದ್ದ
ವೆಂಕಟೇಶ ಸುಪ್ರಭಾತ ಕೇಳುತ್ತಿತ್ತು!
- ಮೇಗರವಳ್ಳಿ ರಮೇಶ್
