ಕುಟುಂಬದ ಪ್ರಮುಖ ಜವಾಬ್ದಾರಿಯನ್ನು ಮುಗಿಸಿದ ನಂತರ ಲೇಖಕಿ ಪೂರ್ಣಿಮಾ ಸುರೇಶ್ ಅವರ ಮೊದಲ ಆದ್ಯತೆ ವಿಶ್ವ ಪರ್ಯಟನೆ ಅದರ ಮೇಲೆ ಹೊರ ತಂದ ಕೃತಿಯೇ ವಿಶ್ವಯಾನ.. ಈ ಕೃತಿಯ ಕುರಿತು ಲೇಖಕಿ ವೀಣಾ ಶಂಕರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ವಿಶ್ವಯಾನ
ಲೇಖಕಿ : ಪೂರ್ಣಿಮಾ ಸುರೇಶ್
ಲೇಖಕಿ ಕಂಡ ಕನಸನ್ನು ನನಸಾಗಿಸಿದ್ದು ಇವರ ಬಾಳಸಂಗಾತಿ ಸುರೇಶ್ ಶೆಣೈ ಅವರು.
ಇದೊಂದು ಪ್ರವಾಸ ಕಥನ ಇಲ್ಲಿ ಅವರಿಗಾದ ಅನುಭವ, ಅನುಭೂತಿ, ಸಮಸ್ಯೆಗಳು, ಅಲ್ಲಿನ ಆಚಾರ ವಿಚಾರಗಳು ಪ್ರಕೃತಿಯ ಸೊಬಗು ಹಾಗೂ ತಮಗೆ ದಕ್ಕಿದಷ್ಟೂ ಅನುಭವ ಹಾಗೂ ವಿಷಯಗಳನ್ನು ಇಲ್ಲಿ ವಿವರವಾಗಿ ಆಪ್ತತೆಯಿಂದ ಕಟ್ಟಿ ಕೊಟ್ಟಿದ್ದಾರೆ.

ದೇಶೀಯ ಹಾಗೂ ಅಂತರ ದೇಶೀಯ ಪ್ರವಾಸಗಳನ್ನು ಕೈಗೊಂಡಾಗ ಅಲ್ಲಿನ ವಾಸ್ತವಿಕ ಪರಿಸ್ಥಿತಿಗಳನ್ನು ನಿಭಾಯಿಸುವ ಜ್ಞಾನ, ಅರಿವು, ಧೈರ್ಯ, ಸಮಯಪ್ರಜ್ಞೆ ಇದ್ದರೆ ಪ್ರಯಾಣ ಪ್ರಯಾಸವಾಗುವುದಿಲ್ಲ..ಪಾಯಸದಂತೆ ಸಿಹಿಯಾಗಿರುತ್ತದೆ ಎಂದಿದ್ದಾರೆ.
“ಪಯಣದೊಂದಿಗಿನ ಪ್ರಣಯ ” ಇವರ ಬದುಕಿನ ಬಹುದೊಡ್ಡ ಕನಸು ನನಸಾಗಿಸಿದ ಹಾದಿಯ ವಿವರಗಳನ್ನು ತಿಳಿಸುತ್ತಾ ಹೋಗಿದ್ದಾರೆ.
ವಯಸ್ಸಿಗನುಗುಣವಾಗಿ, ಆಸಕ್ತಿ ಗನುಗುಣವಾಗಿ ನಮ್ಮ ಮಾನಸಿಕ ಸ್ಥಿತಿ,ಮನೆಯ ಸ್ಥಿತಿಗತಿ ಹಾಗೂ ಅತೀ ಮುಖ್ಯವಾಗಿ Money ಸ್ಥಿತಿಯನ್ನು ಸರಿದೂಗಿಸಿಕೊಂಡು ಪ್ರವಾಸ ಕೈ ಕೊಳ್ಳುವುದು ಉತ್ತಮ ಎಂದು ಹೇಳ್ತಾರೆ. ಇಲ್ಲಿ ಒಂದು ಕಿವಿ ಮಾತನ್ನು ಕೂಡ ಹೇಳ್ತಾರೆ.. ಶಾಪಿಂಗ್ ಎಂಬ ಗೀಳಿಗೆ ಬೀಳಬೇಡಿ.. ವೃಥಾ ಖರ್ಚು… ಬದಲಿಗೆ ಇನ್ನೊಂದಿಷ್ಟು ಜಾಗಗಳನ್ನು ನೋಡಬಹುದು ಎಂದಿದ್ದಾರೆ.

ನವ ಚೈತನ್ಯ..ನವ ಶಕ್ತಿಗಾಗಿ ಆಗಾಗ ಪ್ರವಾಸ ಮಾಡುತ್ತಾ ಚೇತನಾ ಶೀಲರಾಗಿ ಉತ್ಸಾಹದಿಂದಿರಿ ಎಂದಿದ್ದಾರೆ. ಒಂದೊಂದು ದೇಶದ ಬಗ್ಗೆ ವಿವರಿಸುವ ರೀತಿಯೇ ಸೊಗಸು..ಕಣ್ಣ ಮುಂದೆ ಹಾಗೆಯೇ ಆ ಸ್ಥಳಗಳು ಸುಳಿದು ಹೋಗುತ್ತವೆ.. ವಿದೇಶ ಪ್ರವಾಸದ ಬಗ್ಗೆ ಒಂದು ಮೂವಿ ನೋಡಿದ ಅನುಭವವಾಗುತ್ತದೆ..
ದೇಶ ಸುತ್ತು ಕೋಶ ಓದು ಇವರು ಕೋಶವನ್ನು ಓದಿದ್ದಾರೆ.. ಜೀವನವನ್ನು ಪ್ರೀತಿಯಿಂದ ಜೀವಿಸಿ ಅನುಭವಿಸಲು, ಇನ್ನಷ್ಟು ಅರಿಯಲು ಬಹಳಷ್ಟು ದೇಶಗಳನ್ನು ಸುತ್ತಿ ಬಂದಿದ್ದಾರೆ..ಇವರ ಜೀವನೋತ್ಸಾಹ,ಬದುಕಿನ ಬಗ್ಗೆ ಇರುವ ಪ್ರೀತಿ ಅನುಕರಣೀಯ..

ಬದುಕಿನ ಪಯಣದೊಂದಿಗೆ ವಿಶ್ವ ಪರ್ಯಟನೆ ಸಾರ್ಥಕ ಹಾಗೂ ಖುಷಿ ಕೊಟ್ಟಿದೆ ಎಂದು ಲೇಖಕಿ ಪೂರ್ಣಿಮಾ ಸುರೇಶ್ ಮೇಡಂ ಖುಷಿಯಿಂದಲೇ ಹೇಳ್ತಾರೆ. ದಂಪತಿಗಳು ಇನ್ನಷ್ಟು ಪ್ರವಾಸ ಮಾಡಲಿ..ಆ ದೇವರು ಆರೋಗ್ಯ ಶಕ್ತಿ ಕೊಡಲಿ. ಬಿಡುವಾದಾಗ ಪುಸ್ತಕ ಓದಿ … ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.. ಮನಸು ಪ್ರಫುಲ್ಲವಾಗುವುದಂತೂ ನಿಜ…
- ವೀಣಾ ಶಂಕರ್
