ಛೇ…ಇದೆಂಥ ವಿಪರ್ಯಾಸ – ಪದ್ಮನಾಭ ಡಿ

‘ಸತ್ತಾಗ ಸೇರುವ ಜನ  ಬದುಕಿದ್ದಾಗ ಒಮ್ಮೆಯೂ ಬರಲಿಲ್ಲ’…ಕವಿ ಪದ್ಮನಾಭ. ಡಿ ಅವರ ಲೇಖನಿಯಲ್ಲಿ ಅರಳಿದ ಒಂದು ಭಾವುಕ ಮನಮಿಡಿಯುವ ಕವನ, ತಪ್ಪದೆ ಓದಿ…

ಮೃತದೇಹ ನೋಡೆ ಇಷ್ಟೊಂದು ಜನ
ಬದುಕಿದ್ದಾಗ ಒಮ್ಮೆಯೂ ಬರಲಿಲ್ಲ
ಶವದ ಮುಂದೆ ಬಿಕ್ಕಿ ಅಳುವವರೆಲ್ಲ
ಬದುಕಿದ್ದಾಗ ಅವನ ಕಷ್ಟಕೊದಗಲಿಲ್ಲ//

ಕುಟುಂಬಕ್ಕೆ ಸಾಂತ್ವನ ಹೇಳಿದ ಮಂದಿ
ಬದುಕಿದ್ದಾಗ ನೆರವು ನೀಡಲಿಲ್ಲ
ಶವಕೆ ಹೂವಿಟ್ಟು ಗೌರವಿಸಿದ ಮಂದಿ
ಬದುಕಿದ್ದಾಗ ಅವನ ಆದರಿಸಲಿಲ್ಲ//

ಹಂಬಲಿಸಿದರೂ ಮಾತನಾಡಲಿಲ್ಲ
ಧ್ವನಿಗೆ ಪ್ರತಿಧ್ವನಿ ನೀಡಲಿಲ್ಲ
ಖಿನ್ನತೆಯಲೇ ಕೊರಗಿಹೋದ
ಶೂನ್ಯದಲ್ಲೇ ಅವ ಲೀನವಾದ / /


  • ಪದ್ಮನಾಭ. ಡಿ ( ನಿವೃತ್ತ ಪೋಸ್ಟ್ ಮಾಸ್ಟರ್,  ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018,  ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ – 2022 ಕವಿಗಳು, ಲೇಖಕರು) ಮೈಸೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW