ಪರಿಸರ ಜಾಗೃತಿ ಯುವ ಶಿಬಿರ – ರೇಶ್ಮಾ ಗುಳೇದಗುಡ್ಡಾಕರ್

ಮಲೆನಾಡ ಪುಟ್ಟ ಹಳ್ಳಿಯಲ್ಲಿ ಡಾ.ಎಚ್. ಎಸ್ ಅನುಪಮಾ ಅವರ ಮನೆಯಲ್ಲಿ ನಡೆದ ಯುವ ಶಿಬಿರದಲ್ಲಿ ಪಾಲ್ಗೊಂಡಿದ್ದ ಲೇಖಕಿ ರೇಶ್ಮಾ ಗುಳೇದಗುಡ್ಡಾಕರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…

“ಸಂಗದಿಂದಲ್ಲದೆ ಅಗ್ನಿ ಹುಟ್ಟದು ,
ಸಂಗದಿದಲ್ಲದೆ ಬೀಜ ಮೊಳೆದೋರದು
ಸಂಗದಿದಲ್ಲದೆ ದೇಹವಾಗದು ,
ಸಂಗದಿದಲ್ಲದೆ ಸರ್ವ ಸುಖದೋರದು ,
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ
ಅನುಭಾವ ಸಂಗದಿಂದಾನು ಪರಮಸುಖಿಯಾದೆ”

ಅಕ್ಕನ ಈ ವಚನ ಸಾಲುಗಳು ಸಂಗ (ಸ್ನೇಹ)ದ ಮಹತ್ವವನ್ನು ಎತ್ತಿ ಹೀಡಿಯುತ್ತವೆ. ಮಾನವ ಸಂಘಜೀವಿ ಅವನ‌ ಬದುಕಿನಲ್ಲಿ ಸಂಗಕ್ಕೆ ಹೆಚ್ಚಿನ ಬೆಲೆ ಇದೆ ನಮ್ಮ ಬೆಳವಣಿಗೆಗೆ ವಸ್ತು ಅಥವಾ ಮನುಷ್ಯನ ಅಗತ್ಯವಿದೆ. ಇವುಗಳ ಸಹವಾಸದಿಂದ ನಮ್ಮ ಬುದ್ದಿ, ಮನ, ಹಾಗೂ ವರ್ತನೆಗಳಲ್ಲಾಗುವ ಬದಲಾವಣೆಗಳು ಹೊಸ ಪರಿವರ್ತನೆ ಯನ್ನೂ ನವ ಚೈತನ್ಯ ವನ್ನು ನೀಡುತ್ತವೆ.

ಇಂತಹ ಸಂಗ ಕವಲಕ್ಕಿ ಎನ್ನುವ ಮಲೆನಾಡ ಪುಟ್ಟ ಹಳ್ಳಿಯಲ್ಲಿ ಡಾ.ಎಚ್. ಎಸ್ ಅನುಪಮಾ ಮೇಡಂ ಅವರ ಮನೆಯಲ್ಲಿ ನಡೆಯಿತು ಎರಡು ದಿನಗಳವರೆಗೆ ವಿವಿಧ ಜಾತಿ, ಧರ್ಮ, ನೆಲ, ಭಾಷೆಗಳಿಂದ ವಿಭಿನ್ನವಾದರೂ ನಾವೇಲ್ಲಾ ಒಂದೇ ಕರ್ನಾಟಕದ ಕನ್ನಡದವರು ಎಂಬ ಹೆಮ್ಮೆ ಅಲ್ಲಿ ನಗುವಾಗಿ ನಲಿದಿತ್ತು. ಶಿಬಿರದ ಎರಡು ದಿನ ಅವರು ಡಾಕ್ಟರ್ ಅಗಿ, ಶಿಕ್ಷಕಿ ಯಾಗಿ, ಗೆಳತಿಯಾಗಿ, ಮಾತೃ ಹೃದಯಿ ಅಮ್ಮಾನಾಗಿ ನಮ್ಮೊಗಳ ಜೊತೆ ಬೆರೆತರು.

ಮಲೆನಾಡಿನ ಸೊಬಗನು ಮನದಲ್ಲಿ ತುಂಬಿಕೊಳ್ಳುತ್ತಲೆ ವೈಚಾರಿಕವಾಗಿ ,ವೈಜ್ಞಾನಿಕ ವಾಗಿ, ಸಾಂಸ್ಕೃತಿಕವಾಗಿ ಚರ್ಚೆಯಲ್ಲಿ ಪಾಲ್ಗೊಂಡೆವು. ಅವರ ಮನೆಯಲ್ಲಿ ತುಂಬಿದ ಪುಸ್ತಕ ಕಪಾಟುಗಳು ಒಂದು ಕ್ಷಣ ನಮ್ಮಗಳಿಗೆ ಅಚ್ಚರಿ ಉಂಟು ಮಾಡಿತ್ತು.  ಅವರೇ ಬರೆದ ಕೃತಿಗಳು ಸಹ ಓದಲು ನಮಗೆ ಅಲ್ಲಿ ಅವರ ಜೊತೆ ಸಂವಾದದೊಂದಿಗೆ ಲಭ್ಯವಾಗಿದ್ದು ನಮ್ಮ ಗಳ ಸುಕೃತವೇ ಸರಿ ಎಷ್ಷು ಕೃತಿಗಳು ಎಲ್ಲ ಗೆಳತಿಯರ ಕೈಯಲ್ಲಿ ಯೂ ಮನದಲ್ಲಿ ಯೊ ತುಂಬಿದವು ..!

ಮೊದಲ ದಿನ ಕವಲಕ್ಕಿ ಯ ಕರಿಕಾನಮ್ಮನ ಬೆಟ್ಟ,ಶರಾವತಿ ತೋಗುಸೇತುವೆ ,ಹೈಗುಂದ ದ ಮನಮೋಹಕ ನೋಟ , ಪ್ರಕೃತಿಯ ಮಡಿಲಲ್ಲಿ ಇರುವ ಆನಂದ ರಾಜ್ಯದ ವಿವಿಧ ಭಾಗಗಳಿಂದ ಗೆಳತಿಯರಿಗೆ ಅಮಿತಾನಂದ ನೀಡಿತು ಅವರ ಜಂಗಮವಾಣಿಯು ತುಂಬಿತು ..! ಪ್ರಕೃತಿಗಿಂತ ದೊಡ್ಡ ಗುರು ಇಲ್ಲ ,ಸುತ್ತಲೂ ಹಸಿರ ಸೊಬಗು

“ಸುತ್ತಲು ಹಸಿರು ಕಾನನ
ಮಂಜು ಮುಸುಕಿದ ಹಾದಿಯಲ್ಲಿ
ಪಯಣ
ಜುಳು ಜುಳು ಹರಿಯುವ
ಪನ್ನಿರು
ಪುಟ್ಟ ಪುಟ್ಟ ಜಲಪಾತಗಳ
ರಮ್ಯ ನೋಟ
ಇದು ಕವಲಕ್ಕಿ ಹಾದಿಯ
ಪರಿಸರದ ಊಟ “ ಎಂಬ ಸಾಲುಗಳು ಅಲ್ಲಿನ ಚೆಲುವಿಗೆ ಸಾಕ್ಷಿಯಾದವು.

ಮಧ್ಯಾಹ್ನ ಮೀನೂಟ  ಸವಿದು ರಾತ್ರಿ ಮಂಗಳೂರು ಬಜ್ಜಿ ಜೊತೆ ಪಲವ್ ಎಲ್ಲರ ಆಯಾಸವನ್ನು ದೂರ ಮಾಡಿದವು. ಇತಿಹಾಸದ ಮತ್ತು ಅಲ್ಲಿನ ಸ್ಥಳೀಯ ಮಾಹಿತಿ ಮತ್ತು ದಕ್ಷಿಣ ಕನ್ನಡ ಇತಿಹಾಸ ಪಾಠದೊಂದಿಗೆ ಇತಿಹಾಸವನ್ನು ಕಾಲ, ವಿವರಣೆಗಳೊಂದಿಗೆ ಅರ್ಥೈಸಿಕೊಳ್ಳಬೇಕು ಎಂಬುದು ಎಲ್ಲರಿಗೂ ಮನವರಿಕೆಯಾಯಿತು.

‌ಮೇಡಂ ಅವರ ಸರಳತೆ, ಜ್ಞಾನದ ಮುಂದೆ ನಾವೆಲ್ಲರೂ ಮತ್ತಷ್ಟು ಪುಟ್ಟ ಪುಟ್ಟ ಮಕ್ಕಳಂತೆ ಅವರ ಪಾಠವನ್ನು ಕೇಳುತ್ತಿದ್ದೆವು. ಭಾನುವಾರ ನಸುಕಿಗೆ ಜೇನು ಸವಿದು ಸುಬ್ರಾಯ, ಸುಜಾತ, ಆಶಾ ಅವರೂಂದಿಗೆ ಎಲ್ಲ ಗೆಳತಿಯರು ಕವಲಕ್ಕಿ ರಸ್ತೆಯನ್ನು ಸ್ವಚ್ಚಗೂಳಿಸಿದೆವು. ನಾವು ತುಂಬಿಸಿ ಇಟ್ಟ ಕಸದ ಚೀಲಗಳು ಮತ್ತು ಮೊದಲೇ ಅಲ್ಲಿ ಕಟ್ಟಿ ಇಟ್ಟ ಕಸದ ಚೀಲಗಳು ಮಳೆಗೆ ಕೊಳೆತು ಹೋಗಿದ್ದವು ..!

ಇದನ್ನು ಮೇಡಂ ಅವರ ಗಮನಕ್ಕೆ ತಂದಾಗ ಈ ಊರಿನಲ್ಲಿ ನಿಮ್ಮ ಊರುಗಳಂತೆ ಕಸವಿಲೇವಾರಿ ಮಾಡಲು ಗಾಡಿಯಾಗಲಿ, ಪೌರ ಕಾರ್ಮಿಕರಾಗಲಿ ಇಲ್ಲ, ನಮ್ಮ ಹೊನ್ನಾವರ ತಾಲೂಕಿಗೆ ಇಬ್ಬರು ಜನಪ್ರತಿನಿಧಿಗಳು ಬರುತ್ತಾರೆ ಕಸದ ಗಾಡಿ ಇಷ್ಟು ವರ್ಷಗಳ ನಂತರ ಬಂದರೂ ಅದನ್ನು ಉದ್ಘಾಟನೆ ಮಾಡಲು ಕಾಯುತ್ತಾ ಕೂತ್ತಿದ್ದೆ ಎಂದಾಗ ನಾವೇಲ್ಲಾ ನಿಜಕ್ಕೂ ಸುಸ್ತಾದೆವು !!???.

ಅಲ್ಲಿನ ಕಸದ ಬಗ್ಗೆ ಅದರಲ್ಲೂ ಪ್ಲಾಸ್ಟಿಕ್ ಕುರಿತ ಜಾಗೃತಿ ಮೂಡಿಸಲು ಮೇಡಂ ಅವರ ಪ್ರಯತ್ನಕ್ಕೆ ಸೂಕ್ತ ಸ್ಪಂದನೆ ಇಲ್ಲ. ಆದರೂ ಅವರು ಶಾಲೆ -ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಗಳನ್ನು ನಡೆಸುತ್ತಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ತಮ್ಮದೇ ಖರ್ಚಿನಲ್ಲಿ ತೆರಳಿ ಮಾಹಿತಿ ನೀಡುತ್ತಾರೆ ಜಾಗೃತಿ ಅಭಿಯಾನ ನಡೆಸುತ್ತಾರೆ. ಅವರ ಬಿಡುವಿಲ್ಲದ ವೈದ್ಯಕೀಯ ಕೆಲಸದಲ್ಲಿಯೂ ‌ಪರಿಸರ ಕುರಿತ ಜಾಗೃತಿ, ಸಂವಾದ, ಚರ್ಚೆಗಳಲ್ಲಿ ಭಾಗವಹಿಸುವ ಅವರ ಉತ್ಸಾಹಕ್ಕೆ ಸಾಟಿಯೇ ಇಲ್ಲ.

ನಾವೆಲ್ಲರೂ ಶರವಾತಿಯ ಸೌಂದರ್ಯ ಕಣ್ತುಂಬಿಕೊಂಡೆವು. ಆದರೆ ಅವಳ ಅಂತರಾಳದ ನೋವು ಮೌನವಾಗಿ ಮಾರ್ದನಿಸಿದಂತೆ ಭಾಸವಾಯಿತು. ಮರಳಿನಾಸೆಗೆ ಅವಳ ಒಡಲನ್ನು ಬರಿದು ಮಾಡಿ ಸಮುದ್ರದ ಸಿಹಿ ನೀರನ್ನು ಸೇರುವಂತೆ ಮಾಡಿದ ಮಾನವ. ಬಸರಿ ಮೀನನ್ನು ಬಿಡದೆ ಹೊಡೆದು ತಿನ್ನುವ ಮಹದಾಸೆ ಮತ್ಯಕ್ಷಾಮದ ಭವಿಷ್ಯಕ್ಕೆ ನಾಂದಿಯಾಗುತ್ತಿರುವ ಕಡಲು, ಶರವಾತಿ ತೋಗುಸೇತುವೆ ರಮ್ಯ ರೋಮಾಂಚಕ ಅನುಭವ ನೀಡುತ್ತದೆ. ಅಲ್ಲಿಯು ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ಸಾಗಿದೆ. ಶರಾವತಿಯ ಮಡಿಲು ಸೇರುತ್ತಿವೆ …!!?

ಪರಿಸರ ಕುರಿತ ಜಾಥ ,ಕಾಲ್ನಡಿಗೆ ಎಲ್ಲವೂ ಮೇಡಂ ಅವರ ಬದುಕಿನ ಭಾಗವೇ ಅಗಿವೆ ಆದರೆ ಅದಕ್ಕೆ ತಕ್ಕ ಸ್ಪಂದನೆ ಮಾತ್ರ ಮರಿಚಿಕೆಯಾಗಿಯೇ ಉಳಿದಿದೆ. ಇನ್ನು ಸಮಾಜದಲ್ಲಿ ಗಂಡು – ಹೆಣ್ಣು ಗಳ ನಡುವೆ ಇರುವ ನೀನು ಹೇಗೆ ಇರಬೇಕು ,ಅವನು ಹೀಗೆ ಕಾಣ ಬೇಕು ಎಂಬ ಅಘೋಷ ನಿಯಮಗಳು ಇಂದಿನ ಬಹುಪಾಲು ಯುವ ಜನತೆಗೆ ಮುಳ್ಳಾಗಿವೆ. ಇವುಗಳ ಸುತ್ತ ಇರುವ ಬದಲು ನಮ್ಮ ಕನಸು ,ಪ್ರತಿಭೆಗಳ ಬಗ್ಗೆ ಯೋಚಿಸಿ ಎಂದು ಅವರು ಕಿವಿಮಾತು ಹೇಳಿದರು. ಈ ಸಂವಾದ ಎಂ.ಕೆ .ಇಂದಿರಾ ಬರೆದ ” ಸಂದರ್ಶನ” ಕೃತಿಯನ್ನು ನೆನಪು ಮಾಡಿತು.

ಈ ಶಿಬಿರಕ್ಕೆ ಎಲ್ಲರಿಗೂ ಮುಕ್ತ ಆಹ್ವಾನ ವಿದೆ. ಇಲ್ಲಿ ಜಾತಿ, ವಯೋಮಾನ, ವೃತ್ತಿ , ಭಾಷೆ, ಆಧಾರಿತ ಭೇದ ಇಲ್ಲ. ಸಮಾನತೆ, ಸ್ನೇಹ ,ವೈವಿದ್ಯತೆ ನಮ್ಮ ಏಕತೆ ಎನ್ನುವದು ಈ ಶಿಬಿರದ ಉದ್ದೇಶ. ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಕವಲಕ್ಕಿ ಮನೆ ಶಿಬಿರಾರ್ಥಿಗಳಿಗಾಗಿ ಕಾಯುತ್ತದೆ. ಒಂದು ತಿಂಗಳು ಯುವಕರ ತಂಡ ಮತ್ತೊಂದು ತಿಂಗಳು ಯುವತಿಯರ ತಂಡ ಕೇಳುವ, ತಿಳಿಯುವ, ನಲಿಯುವ ಎಲ್ಲಿರಿಗೂ ಇಲ್ಲಿ ಸ್ವಾಗತವಿದೆ.

ಮೇಡಂ, ಅವರ ನಗು ಎಲ್ಲರೂ ಬಂದ್ರೇನೆ ?. ‘ಎಲ್ಲಿದ್ದೀರಾ ?….ಊಟ ಮಾಡಿದ್ರಾ ?… ಮೀನು ಇನ್ನು ಇದೆ’ ಎಂದು ಅಮ್ಮನ ಹಾಗೆ ನಮ್ಮಗಳನ್ನು ಪ್ರೀತಿಸಿದರು. ಗೆಳತಿಯಂತೆ ಕಾಡಿಸಿ ತಮಾಶೆ ಮಾಡಿದರು.

” really we miss you my dear madam”…

ಪ್ರಕೃತಿ ತಾಯಿ ಸೌಂದರ್ಯಕ್ಕೆ ಸಮವಿಲ್ಲ. ಅವಳ ಪಾಲನೆಯು ನಮ್ಮ ಹಕ್ಕು ಇದನ್ನು ನಾವು ಏಕೆ ಮರೆಯುತ್ತೇವೆ ? ಎಲ್ಲವನ್ನು ಅವಳಿಂದ ಪಡೆದ ನಾವು ಮಿತಿ ಇಲ್ಲದೆ ಅವಳ ತೇಜೋವಧೆ ಮಾಡುತ್ತಿದ್ದೇವೆ. ಶರವಾತಿ ಉಳಿಯಲು ಅವಳೊಂದಿಗೆ ನಾವು ಬೆಳೆಯುತ್ತವೆ. ಅವಳ ಉಳಿಸಲು ನಾವೆಲ್ಲರೂ ಪಣ ತೊಡ ಬೇಕಿದೆ ಪರಿಸರ ಉಳಿಸ ಬೇಕಿದೆ …..
ಮತ್ತೆ ಮತ್ತೆ ಕಾಡುವ ಶರಾವತಿಯ ಕೊಗು ಶಿಬಿರ ಮುಗಿದರು ಕೇಳಿಸುತ್ತಿದೆ.


  • ರೇಶ್ಮಾ ಗುಳೇದಗುಡ್ಡಾಕರ್ (ಕವಿಯತ್ರಿ, ಲೇಖಕಿ )

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW