‘ಬಾಳ ಸಂಗಾತಿ’ ಕವನ – ನಿಜಗುಣಿ ಎಸ್ ಕೆಂಗನಾಳ

ಈ ಕವಿತೆಯಲ್ಲಿ ಬರುವ ಪ್ರತಿಯೊಂದು ಸಾಲುಗಳಲ್ಲಿ ಕವಿ ಕಂಡಿರುವ ಸಾವಿರಾರು ಕನಸುಗಳಿವೆ. ಕವಿ ನಿಜಗುಣಿ ಎಸ್ ಕೆಂಗನಾಳ ಅವರ ಲೇಖನಿಯಲ್ಲಿ ಅರಳಿದ ಕವನ, ಮುಂದೆ ಓದಿ…

ನನ್ನ ಕಲ್ಪನೆಯ ರಾಜಕುಮಾರಿ ನೀನು.
ನಿನ್ನ ಕನಸಿನ ರಾಜಕುಮಾರ ನಾನು.
ನನ್ನ ಕವಿತೆಯ ಸಾಲುಗಳಿಗೆ ಜೀವ
ನೀಡಿರುವ ನನ್ನ ದ್ರುವತಾರೆ ನೀನು.
ನಿನ್ನ ಮನದೋಳು ಹರಿದು ಬರುವ
ಆಸೆಯೆಂಬ ಸಾಗರಕ್ಕೆ ಸರದಾರ ನಾನು.

ನನ್ನೋಳಗೆ ಅರಳಿದ ಆಸೆ ಕನಸುಗಳಿಗೆ
ಬೆಳಗುವ ನಂದಾದೀಪ ಆಗಿರುವೇ ನೀನು.
ನಿನ್ನೋಳಗೆ ಇದೀಗ ತಾನೆ ಚಿಗುರಿ
ನಿಂತಿರುವ ಹೊಸ ಹೊಸ ಕನಸುಗಳಿಗೆ
ಕಾವ್ಯ ಕಸ್ತೂರಿಯೆಂಬ ಹೆಸರನಿಟ್ಟು
ಆ ಕನಸುಗಳ ಏಳಿಗೆಗಾಗಿ ಹಗಲಿರುಳು
ಕಾಯುತ್ತಿರುವ ಅಮರ ಪ್ರೇಮಿ ನಾನು.

ಮುಂಜಾನೆಯ ಆ ರವಿಯ ಕಣ್ಣುಗಳಲ್ಲಿ
ಕಾಣುವ ಹೊಂಗಿರಣದ ತೇಜಸ್ಸು
ನಮ್ಮಿಬ್ಬರ ಈ ಸುಂದರವಾದ
ಕ್ಷಣಗಳಿಗೆ ಮುನ್ನುಡಿ ಬರಿಯುವಂತೆ
ಆ ರವಿಯ ಕಲ್ಪನೆಗೆ ಜೀವ ತುಂಬುವ
ಕಾವ್ಯವನ್ನು ರಚಿಸಿದ ದಾಸ ನಾನು.
ಈ ದಾಸನ ಬದುಕಿಗೆ ಸ್ಪೂರ್ತಿಯೇ ನೀನು.

ನನ್ನವಳ ಮೊಗದಲ್ಲಿ ಮಲ್ಲಿಗೆಯಂತೆ
ಅರಳಿರುವ ಆ ನಾಚುವಂತ ನಗೆಯ
ಕಂಡು ಅವಳ ಪ್ರೀತಿಗಾಗಿ ಏಳು ಜನ್ಮವೇ
ಕಾಯುತ್ತಿರುವ ಅವಳ ಹೃದಯ
ಸಿಂಹಾಸನದ ಕಾವಲುಗಾರ ನಾನು.

ಈ ಕಾವಲುಗಾರನ ಪ್ರತಿಯೊಂದು
ಕನಸುಗಳಿಗೆ ಉಸಿರಾಗಿ ನಿಂತಿರುವ
ನನ್ನ ಬದುಕಿನ ಬಾಳಸಂಗಾತಿ ನೀನು.


  • ನಿಜಗುಣಿ ಎಸ್ ಕೆಂಗನಾಳ (ಸಾಹಿತಿಗಳು ರಂಗಭೂಮಿ ಕಲಾವಿದರು) ಕಲಬುರಗಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading