ನಮ್ಮನ್ನೆಲ್ಲಾ ಅಗಲಿದ ಧಾರವಾಡದ ಹಿರಿಯ ರಂಗಕರ್ಮಿ ವಿರೂಪಾಕ್ಷ ನಾಯಕರಿಗೆ ಒಂದು ನಮನ.
ಧಾರವಾಡ ಹಿರಿಯ ರಂಗಜೀವಿ ವಿರೂಪಾಕ್ಷ ನಾಯಕ ಕನ್ನಡ ರಂಗಭೂಮಿಗಾಗಿಯೇ ಮೀಸಲಾದ ‘ರಂಗತೋರಣ’ ಮಾಸಪತ್ರಿಕೆಯನ್ನು ೧೯೮೫ ರಲ್ಲಿಯೇ ಪ್ರಾರಂಭಿಸಿದರು. ವಿರೂಪಾಕ್ಷ ನಾಯಕರು ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಕಷ್ಟದಲ್ಲಿಯೂ ಪತ್ರಿಕೆಯನ್ನ ನಡೆಸಿದರು. ನಾಡಿನ ಬೇರೆ ಬೇರೆ ಭಾಗಗಳ ರಂಗಕರ್ಮಿಗಳ ಜೊತೆ ಸಂಪರ್ಕವಿಟ್ಟುಕೊಂಡ ಅವರು ಎಲ್ಲರಿಗೂ ಪತ್ರ ಬರೆಯುವುದರ ಮುಖಾಂತರ ಲೇಖನ ತರಿಸಿಕೊಳ್ಳುತ್ತ,ಪತ್ರಿಕೆಯಲ್ಲಿ ಮೌಲಿಕ ಲೇಖನಗಳು ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದ್ದರು.
ಕಾಲೇಜು ದಿನಗಳಲ್ಲೇ ‘ಸೊಹ್ರಾಬ್ ರುಸ್ತಮ್’ ನಾಟಕದಲ್ಲಿ ಮೀನುಗಾರನಾಗಿ ಬಣ್ಣ ಹಚ್ಚಿದ ಅವರು ಮುಂದೆ ನಿರಂತರ ರಂಗಭೂಮಿಯ ನಂಟನ್ನು ಕಾಯ್ದುಕೊಂಡರು. ಧಾರವಾಡದ ‘ಕರ್ನಾಟಕ ಕಲೋದ್ಧಾರಕ’ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ‘ರವಿವಾರ ರಂಗಶಾಲೆ’ ಯನ್ನು ಶುರುಮಾಡಿ ಮಕ್ಕಳಿಗಾಗಿ ರಂಗಭೂಮಿಯ ಕದವನ್ನು ತೆರೆದಿದ್ದರು. ಜಿ.ಬಿ.ಜೋಶಿ, ಶ್ರೀರಂಗರ ನಾಟಕಗಳನ್ನ ಕಲೋದ್ಧಾರಕ ಸಂಘದಿಂದ ಆಡಿಸಿದ್ದರು.ಕನ್ನಡ ರಂಗಭೂಮಿ ವಿರೂಪಾಕ್ಷ ನಾಯಕರನ್ನಎಂದೆಂದೂ ಸ್ಮರಿಸುತ್ತದೆ.
ಬರಹ : ಕಿರಣ ಭಟ್
( ಮಕ್ಕಳ ನಾಟಕ ನಿರ್ದೇಶಕ, ರಂಗ ಕರ್ಮಿ)