ವೃತ್ತಿಪರ ಕೋರ್ಸ್ ಮಾಹಿತಿ

‘ಬದುಕು ಕಮ್ಮ್ಯೂನಿಟಿ ಕಾಲೇಜು’ ಪ್ರತಿ  ವರ್ಷವೂ ಕ್ರಿಯಾಶೀಲ ಯುವಕ – ಯುವತಿಯರಿಗಾಗಿ ಬೇರೆ ಬೇರೆ ರೀತಿಯ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಪರಿಚಯಿಸಿದೆ. ಅದೇ ರೀತಿ ಈ ವರ್ಷವೂ ಅನೇಕ ಸರ್ಟಿಫಿಕೇಟ್ ಕೋರ್ಸ್ಗಳು ಆರಂಭವಾಗುತ್ತಿದ್ದುಆಸಕ್ತರಿಗೆ  ಅರ್ಜಿ ಆಹ್ವಾನಿಸಿದೆ. 

ಬದುಕು ಕಮ್ಮ್ಯೂನಿಟಿ ಕಾಲೇಜಿನ ಕಿರು ಪರಿಚಯ : 

ಬದುಕು ಕಮ್ಮ್ಯೂನಿಟಿ ಕಾಲೇಜು ೧೦ ವರ್ಷಗಳಿಂದ ಯುವ ಪೀಳಿಗೆಯ ಬದುಕನ್ನು ಶಿಕ್ಷಣದ ಮೂಲಕ ಕಟ್ಟಿಕೊಡುವತ್ತ ಶ್ರಮಿಸುತ್ತಿದೆ. ಬದುಕಿಗೆ ಪೂರಕವಾಗುವಂತೆ ಶಿಕ್ಷಣದ ಪಠ್ಯ ಕ್ರಮವನ್ನು ರೂಪಿಸಿ, ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಮುಂದೆ ತರಲು ಈ ಸಂಸ್ಥೆ ಹಗಲಿರುಳು ದುಡಿಯುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಈ ಕಾಲೇಜಿನಲ್ಲಿಪತ್ರಿಕೋದ್ಯಮ, ತ್ಯಾಜ್ಯ ಕ್ಷೇತ್ರ ಅಧ್ಯಯನ ಸೇರಿದಂತೆ ಕ್ರಿಯಾಶೀಲತೆಗೆ ಸಂಬಂಧ ಪಟ್ಟ ೧೩ ಬೇರೆ ಬೇರೆ ವಿಷಯಗಳ ಕುರಿತಾದ ಸರ್ಟಿಫಿಕೇಟ್ ಕೋರ್ಸ್ಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಕೋರ್ಸಿಗೆ ತಕ್ಕಂತೆ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಲು ಆ ಕ್ಷೇತ್ರದಲ್ಲಿ ನುರಿತ ಶಿಕ್ಷಕರನ್ನು ದೇಶ ಮತ್ತು ವಿದೇಶಗಳಿಂದ ಕರೆಸಲಾಗುತ್ತದೆ. ತರಗತಿಗಳು ಕನ್ನಡ ಹಾಗೂ ಇಂಗ್ಲೀಷ ಮಾಧ್ಯಮದಲ್ಲಿ ನಡೆಯುತ್ತವೆ.

ಈ ಕಾಲೇಜು ಸರ್ಕಾರದಿಂದ ಮಾನ್ಯತೆಯನ್ನು ಪಡೆದುಕೊಂಡಿದ್ದು, ೧೦ ದಿನದ ಫೌಂಡೇಶನ್ ಕೋರ್ಸ್, ೨೫ ದಿನದ ಸರ್ಟಿಫಿಕೇಟ್ ಕೋರ್ಸ್, ೯೦ ದಿನಗಳ ಡಿಪ್ಲೋಮ ಕೋರ್ಸ್ ಮತ್ತು ೯ ತಿಂಗಳು ಪಿಜಿ ಡಿಪ್ಲೋಮ ಕೋರ್ಸ್ಗಳನ್ನು ಒಳಗೊಂಡಿರುತ್ತವೆ. ಇಲ್ಲಿ ಆಯಾ ಕ್ಷೇತ್ರಗಳ ಅನುಭವಿ ಶಿಕ್ಷಕರಿದ, ಕಲಿಯಲು ಒಳ್ಳೆಯ ವಾತಾವರಣವನ್ನು ಇಲ್ಲಿ ಕಲ್ಪಿಸಲಾಗಿದೆ.

ಅವಕಾಶ ವಂಚಿತ, ಯುವ ಜನತೆ ಈ ಕಾಲೇಜಿನಲ್ಲಿ ಆಸಕ್ತಿಯಿದ್ದರೆ ಅರ್ಜಿಸಲ್ಲಿಸಬಹುದು. ಕಡಿಮೆ ಶುಲ್ಕದಲ್ಲಿ ಸುಸಜ್ಜಿತ ಕಲಿಕಾ ಮತ್ತು ವಸತಿ ವ್ಯವಸ್ಥೆಯನ್ನು ಈ ಕಾಲೇಜು ಒದಗಿಸುತ್ತದೆ. ಈ ಕಾಲೇಜಿನಿಂದ ಸರ್ಟಿಫಿಕೇಟ್ ಸಿಕ್ಕ ನಂತರ ಕೆಲಸವನ್ನು ಒದಗಿಸಲು ಸಹ ಈ ಬದುಕು ಕಮ್ಮ್ಯುನಿಟಿ ಕಾಲೇಜು ನೆರವು ನೀಡುತ್ತದೆ. ಅನೇಕ ಮಲ್ಟಿ ನ್ಯಾಷನಲ್ ಕಂಪನಿಗಳು ಈ ಸಂಸ್ಥೆಗೆ  ಅನುದಾನ ನೀಡುತ್ತಿವೆ.

ಬದುಕು ಕಮ್ಮ್ಯೂನಿಟಿ ಕಾಲೇಜಿಗೆ ಸೇರ್ಪಡೆಯಾಗಲು ಇರಬೇಕಾದ ಅರ್ಹತೆಗಳು :

೧. ನಗರ ಮತ್ತು ಗ್ರಾಮೀಣ ಪ್ರದೇಶದ ಕಡು ಬಡವರು.

೨. ಮಹಿಳೆಯರು

೩.ದಲಿತರು, ಆದಿವಾಸಿಗರು ಮತ್ತು ಹಿಂದುಳಿದ ವರ್ಗದವರು.

೪. ನಿರಾಶ್ರಿತರು ಮತ್ತು ಅವಕಾಶ ವಂಚಿತರು.

೫. ೨೧ ರಿಂದ ೩೫ ವರ್ಷ ವಯೋಮಾನ.

ಹೆಚ್ಚಿನ ಮಾಹಿತಿಗೆ : http://www.sumvadabaduku.org

ಬದುಕು ಕಮ್ಮ್ಯೂನಿಟಿ ಕಾಲೇಜಿನ ವಿಳಾಸ :

ಸಂವಾದ

೧೩೬/೭, ೨ ನೇ ಕ್ರಾಸ್, ಎಲಿಫೆಂಟ್ ರಾಕ್ ರೋಡ್

ಸೌತ್ ಅಂಡ್ ಎಂಡ್ ಸರ್ಕಲ್, ೩ ನೇಯ ಬ್ಲಾಕ್ ಜಯನಗರ

ಬೆಂಗಳೂರು – ೫೬೦೦೧೧

ಫೋನ್ ನ೦ : ೦೮೦ – ೨೬೬೪೦೨೪೪

ಇಮೇಲ್ : badukucollege.media@gmail.com

#ಆಕತನಯಸ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW