‘ಗೆಳತಿ ನೀ ನಲ್ಲೆಯಾದವಳು’ ಕವನ – ಟಿ ತ್ಯಾಗ ರಾಜು ಮೈಸೂರು

‘ಬಾಳಪಯಣದ ಕುರುಹಾಗಿ, ಜೀವ ಜೀವನವ ನಡೆಸಿದೆ, ದೇವಿ ಎನ್ನಲೇ ಮನದೈವವೇ ಎನ್ನಲೇ’….ತಪ್ಪದೆ ಓದಿ ಟಿ ತ್ಯಾಗ ರಾಜು ಅವರ ಸುಂದರ ಕವನ…

ದಿನವೆದ್ದರೆ ಮನೆಗೆಲಸದವಳಂತೆ
ದುಡಿವೆ ಇರುವವರೆಗೂ ನಿದ್ರೆ
ಮರೆತು ಹಗಲು ಇರುಳು ಎನ್ನದೇ
ಬೆರೆವೆ ಎಲ್ಲರ ಜೊತೆ ಬೆರೆತು
ಏನಾದರೂ ನಿನ್ನ ಕೆಲಸ
ನಿನ್ನದೇ ನಿರ್ಧಾರದ ನೆಲೆ
ಬರುವ ಸುದಿನಗಳ ಆರೈಕೆ ಮಾಡಲೆ
ತಂದೆ ತಾಯಿ ಅಣ್ಣ ತಮ್ಮಂದಿರ
ನೀ ಸಂಭಾಳಿಸಿದೆ
ಗಂಡ ಮಕ್ಕಳು ಅತ್ತೆ ಮಾವರ
ತೂಕ ಹಾಕದೆ ಪ್ರೀತಿ ನೀಡಿದೆ
ಮನಮನೆಯ ಗರತಿಮಗಳಾಗಿ
ಬಾಳಪಯಣದ ಕುರುಹಾಗಿ
ಜೀವ ಜೀವನವ ನಡೆಸಿದೆ
ದೇವಿ ಎನ್ನಲೇ ಮನದೈವವೇ ಎನ್ನಲೇ
ಹೆಣ್ಣೇ ನೀನಿಡದ ಹೆಜ್ಜೆ ಯಾವುದು
ಎಲ್ಲಾ ಕ್ಷೇತ್ರಗಳಲ್ಲಿ ನಿನ್ನದೇ ಛಾಪು
ಓನಪು ಚಂದ ಅರಿತವರಿಗೆ ನೀ
ನೀನಿರದ ದಿನವು ನನಗಂತೂ
ತುಂಬಾನೇ ನೋವು ಅಪ್ಪಿ ತಪ್ಪಿಯೂ
ದೂರಾಗದಿರು ನಾ ಬದುಕಿರುವವರೆಗೂ
ಮಡದಿ ನೀ ಮಗಳು ನೀ ಅಕ್ಕ ತಂಗಿ ನೀ
ಗೆಳತಿ ನೀ ನಲ್ಲೆಯಾದವಳು ನೀ ಇರುವೆ
ನನ್ನ ಬಾಳಲ್ಲಿ ಪ್ರಥಮ ಆದ್ಯತೆ ನಿನಗೇನೆ…

  • ಟಿ ತ್ಯಾಗ ರಾಜು ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW