ಸೀತೆಯನ್ನ ಅಪಹರಿಸಲು ಪಂಚವಟಿ ಅರಣ್ಯಕ್ಕೆ ಬರಬೇಕಿದ್ದ ರಾವಣನ ಪುಷ್ಪಕ ವಿಮಾನ ಸೌದಿ ಅರೇಬಿಯಾದ ಮರಭೂಮಿಯಲ್ಲಿ ಲ್ಯಾoಡ್ ಆಗುತ್ತಿತ್ತು ಇನ್ನಷ್ಟು ಕುತೂಹಕರ ವಿಷಯವನ್ನು ಪ್ರಕಾಶ ಉಳ್ಳೆಗಡ್ಡಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಉತ್ತರಕ್ಕೆ ಮುಖ ಮಾಡಿ ನಿಂತರೆ ಹಿಂದೂ ಮಹಾಸಾಗರ ಕಾಣುತ್ತಿತ್ತು ದೆಹಲಿಯಲ್ಲ.. ದಕ್ಷಿಣಕ್ಕೆ ಮುಖ ಮಾಡಿದರೆ ತಂಜಾನೀಯ ಕಾಣುತ್ತಿತ್ತೆ ಹೊರತು ಕನ್ಯಾಕುಮಾರಿಯಲ್ಲ.. ಚೆನ್ನೈನಿಂದ ಶ್ರೀಲಂಕಾ ಕಡೆಗೆ ಹಾರಿದರೆ ನೀವು ಅಂಟಾರ್ಟಿಕಾ ಮೇಲೆ ಲ್ಯಾಂಡ್ ಆಗುತ್ತೀದ್ದೀರಿ. ಬೆಂಗಳೂರಿನಿಂದ ಜಮ್ಮುಗೆ ಹಾರಿದರೆ ಉಗಾಂಡ ತಲುಪುತ್ತಿದ್ದೀರಿ. ಕಾರಿನಲ್ಲಿ ಕೋಲ್ಕತ್ತಾಗೆ ಪ್ರಯಾಣಿಸಿದರೆ ಆಸ್ಟ್ರೇಲಿಯಾದ ಪರ್ತ್ ತಲುಪುತ್ತಿದ್ದೀರಿ. ಸೀತೆಯನ್ನ ಅಪಹರಿಸಲು ಪಂಚವಟಿ ಅರಣ್ಯಕ್ಕೆ ಬರಬೇಕಿದ್ದ ರಾವಣನ ಪುಷ್ಪಕ ವಿಮಾನ ಸೌದಿ ಅರೇಬಿಯಾದ ಮರಭೂಮಿಯಲ್ಲಿ ಲ್ಯಾoಡ್ ಆಗುತ್ತಿತ್ತು.
ಫೋಟೋ ಕೃಪೆ : google
ಹೀಗೂ ಉಂಟೆ?..ಹೀಗಾಗಿರಲು ಸಾಧ್ಯವೇ?..
ಹೌದು, 12 ಕೋಟಿ ವರ್ಷಗಳ ಹಿಂದೆ ಭಾರತದ ಭೂ ಪ್ರದೇಶ ಈಗಿರುವ ಜಾಗದಲ್ಲಿ ಇರಲಿಲ್ಲ. ಬದಲಾಗಿ 9,000 ಮೈಲ್ಸ್ ದೂರದ ಆಫ್ರಿಕಾ ಖಂಡವನ್ನ ತಬ್ಬಿಕೊಂಡಿತ್ತು. ಆಫ್ರಿಕಾ, ಸೌತ್ ಅಮೇರಿಕಾ, ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕಾ ಸೇರಿ ಗೊಂಡ್ವಾನ ಖಂಡ ಎನಿಸಿತ್ತು. ಅದರಂತೆ, ಈಗಿರುವ ಏಳು ಖಂಡಗಳು ಬೇರೆ ಎಲ್ಲೆಲ್ಲೋ ಇದ್ದವು. ಕೆಳಗಿನ ಚಿತ್ರವನ್ನು ನೋಡಿ.
ಕ್ರಮೇಣ ಟೇಪ್ಟಾನಿಕ್ ಪ್ಲೇಟ್ ಗಳು ಸರಿದಾಡಿ ಬೇರೆ ಬೇರೆ ಜಾಗಗಳಿಗೆ ವಲಸೆ ಹೋದವು.. ಎಲ್ಲಾ ಖಂಡಗಳು ವರ್ಷಕ್ಕೆ ಕೇವಲ 5 ಸೆಂಟಿಮೀಟರ್ ನಷ್ಟು ಸರಿದರೆ ಭಾರತ ಬಲುವೇಗವಾಗಿ ಅಂದರೆ ವರ್ಷಕ್ಕೆ 15 ಸೆಂಟಿಮೀಟರನಷ್ಟು ಸರಿಯುತ್ತಾ ಆಫ್ರಿಕಾದಿಂದ ಬೆರ್ಪಟ್ಟು, ಸಮುದ್ರವನ್ನು ಸೀಳುತ್ತಾ, ಸೀಳುತ್ತಾ ಬಂದು ತಲುಪಿದ್ದು ಯುರೇಶಿಯಾ ಖಂಡವನ್ನ.
ಫೋಟೋ ಕೃಪೆ : google
ಯುರೇಶಿಯಾ ಮತ್ತು ಭಾರತದ ಭೂ ಪ್ರದೇಶಗಳು ಡಿಕ್ಕಿ ಹೊಡೆದಾಗ ಬೆಟ್ಟ ಪರ್ವತಗಳು ಹುಟ್ಟಿಕೊಂಡವು.. ಹಿಮಾಲಯ ಹುಟ್ಟಿದ್ದು ಇದೆ ಡಿಕ್ಕಿಯಿಂದ, ಆಕಾಶವೆಲ್ಲ ಮೋಡ ತುಂಬಿಕೊಂಡಿತು, ಅದರ ಪರಿಣಾಮವೇ ಭೂ ಗ್ರಹದ ಐಸ್ ಏಜ್ ಪ್ರಾರಂಭವಾಗಿದ್ದು.. ಅದ್ರಷ್ಟಕ್ಕೆ ಆಗ ಮನುಷ್ಯ ಇನ್ನು ಹುಟ್ಟಿರಲಿಲ್ಲ, ಕೇವಲ ಸಸ್ಯವರ್ಗ, ಪ್ರಾಣಿವರ್ಗ ಮಾತ್ರ ಇತ್ತು..
ಭಾರತ ಆಫ್ರಿಕಾದಿಂದ ಬೆರ್ಪಟ್ಟು ಉತ್ತರಕ್ಕೆ ಪ್ರಯಾಣಿಸುತ್ತಾ ಯುರೇಶಿಯಾ ತಲುಪಲು ಸುಮಾರು 7 ಕೋಟಿ ವರ್ಷಗಳೇ ಸಂದವು. ಬರುವಾಗ ತನ್ನಲ್ಲಿಯ ಸಸ್ಯವರ್ಗ ಪ್ರಾಣಿವರ್ಗವನ್ನು ಹೊತ್ತು ತಂದಿತು, ಕೆಲವು ಪ್ರಾಣಿಗಳು ಭೂಮಿಯ ಮೇಲಿಂದ ಸಮುದ್ರದೊಳಗಿನ ಜೀವಸಂಕುಲದೊಂದಿಗೆ ಬೆರೆತು ವೇಲ್ಸ್ ತಿಮಿಂಗಲುಳಾಗಿ ಮಾರ್ಪಟ್ಟವು ಎಂದು ವಿಜ್ಞಾನ ಹೇಳುತ್ತೆ..
ಇದು ಕಥೆಯಲ್ಲ, ಇದೆ ಭೂ ಗ್ರಹದಲ್ಲಿ ನಡೆದ ವಿಸ್ಮಯ, ಇದನ್ನ ದ್ರಡಪಡಿಸಿದ್ದು ಅಮೇರಿಕಾದ ಸುಪ್ರಸಿದ್ದ ಎಂ.ಐ.ಟಿ. ಕೆಳಗೆ ಲಿಂಕ್ ಇದೆ, ಆಸಕ್ತಿಯುಳ್ಳವರು ಓದಬಹುದು..
- ಪ್ರಕಾಶ ಉಳ್ಳೆಗಡ್ಡಿ, ಮಸ್ಕತ್ತ್