ಈ ಶತಮಾನದ ಸಾಹಸಿ ಹೆಣ್ಣು : ಅನನ್ಯ ಪ್ರಸಾದ್

ಅನನ್ಯ ಪ್ರಸಾದ್ ಅವರು ಏಕಾಂಗಿಯಾಗಿ ಸುಮಾರು 4800 ಕಿಮೀ ದೂರ ಅಟ್ಲಾಂಟಿಕ್ ಮಹಾಸಾಗರವನ್ನು ಯಶಸ್ವಿಯಾಗಿ ದಾಟಿದ ಹೆಮ್ಮೆಯ ಮಹಿಳೆ. ಈ ಅನನ್ಯ ಯಾರು ? ಅವರ ಸಾಧನೆಯೇನು?… ಇಣುಕು ನೋಟವನ್ನು ತಪ್ಪದೆ ಮುಂದೆ ಓದಿ…

ಡಾಕ್ಟರ್ ಮಕ್ಕಳು ಡಾಕ್ಟರ್ ಆಗ್ಬೇಕು, ಎಂಜಿನಿಯರ್ ಮಕ್ಕಳು ಇಂಜಿನಿಯರ್ ಆಗ್ಬೇಕು, ಸಾಹಿತಿಗಳ ಮಕ್ಕಳು ಸಾಹಿತಿನೇ ಆಗ್ಬೇಕು, ಡೈರೆಕ್ಟರ್ ಮಕ್ಕಳು ಡೈರೆಕ್ಟರೇ ಆಗ್ಬೇಕು ಅಂತ ಕೂತಿದ್ರೆ ಯಾರ ಮನೆಯಲ್ಲಿಯೂ ಸಾಧಕರು ಬೆಳೆಯುತ್ತಿರಲಿಲ್ಲ. ಪ್ರತಿ ಮಕ್ಕಳಲ್ಲಿಯೂ ಅವರದೇ ಆದ ಆಸಕ್ತಿಗಳಿವೆ, ಅಭಿರುಚಿಗಳಿವೆ. ಮನೆಯವರು ಅದನ್ನು ಗುರುತಿಸಿ ಪೋಷಿಸಿದರೆ ಅವರು ಕೇವಲ ರಾಜ್ಯಕಷ್ಟೇ ಅಲ್ಲ, ದೇಶಕ್ಕೆ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ಅನನ್ಯ ಪ್ರಸಾದ್ ಅವರು.

ಈ ಅನನ್ಯ ಪ್ರಸಾದ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಏಕಾಂಗಿಯಾಗಿ ಹುಟ್ಟು ದೋಣಿ (ರೋವಿಂಗ್) ಯಲ್ಲಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದ ಭಾರತದ ಹೆಮ್ಮೆಯ ಪುತ್ರಿ. ಅವರ ಹೆಸರು ಈಗ ವಿಶ್ವ ದಾಖಲೆಯ ಪುಟದಲ್ಲಿ ಸೇರಿದೆ.

ಅನನ್ಯ ಅವರು ಬೆಳೆದದ್ದು ಇಂಗ್ಲೆಂಡ್ ನಲ್ಲಾದರೂ ಹುಟ್ಟಿದ್ದು ನಮ್ಮ ಬೆಂಗಳೂರಿನಲ್ಲಿ. ಅಪ್ಪ- ಅಮ್ಮಇಂಗ್ಲೆಂಡ್ ನಲ್ಲಿ ವೈದ್ಯರಾಗಿದ್ದಾರೆ. ಅನನ್ಯ ಅವರ ಸಾಧನೆಯಲ್ಲಿ ಪಾಲಕರ ಪಾತ್ರ ದೊಡ್ಡದಿದೆ. ಮಗಳ ಆಸೆ, ಕನಸ್ಸುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಇಂದು ಜಗತ್ತು ಅನನ್ಯ ಅವರತ್ತ ನೋಡುವಂತಾಗಿದೆ.

ಅನನ್ಯ ಪ್ರಸಾದ್ ಹುಟ್ಟು ದೋಣಿ (ರೋವಿಂಗ್) ಕಲಿಕೆಯ ಆರಂಭದ ದಿನಗಳಲ್ಲಿ ತಮ್ಮ ಸಂತೋಷಕ್ಕಾಗಿ ಕಲಿತರು. ಅನಂತರ ದಿನಗಳಲ್ಲಿ ಅವರ ರೋವಿಂಗ್ ಕಲಿಕೆ ಮೇಲಿನ ಆಸಕ್ತಿ ಹೆಚ್ಚಾಗುತ್ತಾ ಹೋಯಿತು. ಪ್ರತಿನಿತ್ಯ ದೇಹ ದಂಡನೆ, ಸಾಕಷ್ಟು ಕಸರತ್ತುಗಳ ಫಲವೇ ಈ ಸಾಧನೆಗೆ ಕಾರಣವಾಯಿತು.

34 ವರ್ಷದ ಅನನ್ಯ ಅವರು ಅಟ್ಲಾಂಟಿಕ್ ಮಹಾಸಾಗರವನ್ನ ಏಕಾಂಗಿಯಾಗಿ ದೋಣಿಗೆ ಹುಟ್ಟು ( ರೋವಿಂಗ್) ಹಾಕುತ್ತಾ ಸಮುದ್ರವನ್ನು ದಾಟವುದು ಎಂದರೆ ಸಾಮಾನ್ಯವಲ್ಲ. ಚಳಿ, ಗಾಳಿ ಎನ್ನದೆ ರೋವಿಂಗ್ ಮಾಡುವಾಗ ಸಾಕಷ್ಟು ಸವಾಲುಗಳಿದ್ದವು. ಅವುಗಳನ್ನು ಎದುರಿಸಿ ಸತತವಾಗಿ ೫೨ ದಿನಗಳು, ೫ ಗಂಟೆ, ೪೪ ನಿಮಿಷ ಚಲಿಸಿ ಮಹಾಸಾಗರವನ್ನು ಯಶಸ್ವಿಯಾಗಿ ದಾಟಿದರು. ಸುತ್ತಲೂ ನರಪಿಳ್ಳೆಗಳಿಲ್ಲ ಎಲ್ಲಿ ನೋಡಿದರಲ್ಲಿ ನೀರು, ಅಲೆಗಳ ಅಬ್ಬರ, ಹಗಲು ರಾತ್ರಿ ಎನ್ನದೆ ಒಬ್ಬಂಟಿಯಾಗಿ ಮುನ್ನುಗುವುದೆಂದರೆ ದೊಡ್ಡ ಸಾಹಸವೇ. ಅನನ್ಯ ಅವರು ಯಾವುದಕ್ಕೂ ಅಂಜದೇ ಅಟ್ಲಾoಟಿಕ್ ಮಹಾ ಸಾಗರದಲ್ಲಿಯೇ ಕ್ರಿಸ್ ಮಸ್, ಹೊಸವರ್ಷವನ್ನು ಕಳೆದರು. ಈ ಸಮುದ್ರಯಾನದ ಮೂಲಕ ದಕ್ಷಿಣ ಭಾರತದಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ “ದೀನಬಂಧು ಟ್ರಸ್ಟ್‌”, ಹಾಗೂ ಇಂಗ್ಲೆಂಡಿನಲ್ಲಿ “ಮಾನಸಿಕ ಆರೋಗ್ಯ ಪ್ರತಿಷ್ಠಾನ”ಕ್ಕೆ ತಮ್ಮ ಸಾಹಸದ ಮೂಲಕ ಬೆಂಬಲ ನೀಡಿದ್ದಾರೆ.

ಇತಿಹಾಸದಲ್ಲೇ ಏಷ್ಯಾ ಪ್ರಾಂತ್ಯದಿಂದ ಈ ರೀತಿ ಸಾಹಸ ಮಾಡಿರುವ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಅನನ್ಯ ಅವರು ಭಾಜನರಾಗಿದ್ದಾರೆ. ಇದಕ್ಕೂ ಮುಂಚೆ ಕೇವಲ caucasian ಮಹಿಳೆಯರು ಮಾತ್ರ ಈ ದಾಖಲೆಯನ್ನು ಸಾಧಿಸಿದ್ದಾರೆ.

This slideshow requires JavaScript.

ಇನ್ನೊಂದು ಸ್ವಾರಸ್ಯಕರ ವಿಚಾರವೆಂದರೆ ಅನನ್ಯ ಅವರು ನಾಡಿನ ಹೆಮ್ಮೆಯ ರಾಷ್ಟಕವಿ ಜಿ ಎಸ್ ಶಿವರುದ್ರಪ್ಪನವರ ಮೊಮ್ಮಗಳು, ಅವರ ಸೋದರ ಮಾವ ನಾಡಿನ ಖ್ಯಾತ ಸಾಹಿತಿಗಳಾದ ಸಾ ಶಿ ಮರುಳಸಿದ್ದಪ್ಪನವರು, ಹಾಗೂ ಖ್ಯಾತ ಸಿನಿಮಾ ನಿರ್ದೇಶಕರಾದ ಕೆ ಎಂ ಚೈತನ್ಯ ಅವರು ಅನನ್ಯ ಅವರ ಮಾವ. ಇಂತಹ ಪ್ರತಿಭಾವಂತ ಕುಟುಂಬದಲ್ಲಿ ಜನಿಸಿದ ಅನನ್ಯ ಅವರ ಸಾಧನೆ ಭಾರತ ಹಾಗು ಇಂಗ್ಲೆಂಡ್ ದೇಶಗಳಿಗೆ ಮಾತ್ರವಲ್ಲ, ಪ್ರಪಂಚದ ಎಲ್ಲ ಮಹಿಳೆಯರಿಗೂ ಸ್ಫೂರ್ತಿ ಹಾಗು ಹೆಮ್ಮೆಯ ವಿಷಯವಾಗಿದೆ.

ಅನನ್ಯ ಅವರಿಗೆ ಆ ಭಗವಂತ ಆಯಸ್ಸು ಆರೋಗ್ಯ ಯಶಸ್ಸು ನೀಡಲಿ ಎಂದು ಆಕೃತಿ ಕನ್ನಡ ಶುಭ ಹಾರೈಸುತ್ತದೆ.


5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW