ವಿಶಿಷ್ಠ,ವೈಭವಿತ 'ಕ್ರಿಸ್ ಮಸ್ ಟ್ರೀ'…

ಲೇಖನ : ಸವಿ ಶಿವಶಂಕರ್
(ಕ್ರೈಸ್ಟ್ ಪಿ.ಯು.ಕಾಲೇಜಿನ ವಿದ್ಯಾರ್ಥಿನಿ)

ಸತತ ಪ್ರಯತ್ನದ ಮೂಲಕ ಬಹುತೇಕ ಏನನ್ನಾದರೂ ಸಾಧಿಸಬಹುದು.ಮತ್ತೆ ಮತ್ತೆ ಪ್ರಯತ್ನಿಸಿದರೆ ಅತ್ಯಂತ ಕಠಿಣವಾದ ದುರ್ಗುಣವನ್ನು ತೊಡೆದು ಹಾಕಬಹುದು. ಮತ್ತೆ ಮತ್ತೆ ಪ್ರಯತ್ನಿಸಿದರೆ, ಸಾಧಿಸಲು ಯಾವುದೂ ಅಸಾಧ್ಯವಲ್ಲ. ಈ ಭೂಮಿಯಲ್ಲಿ ಎಲ್ಲ ಮಹತ್ಸಾಧನೆಗಳ ಹೆಗ್ಗುರುತು ಇದೇನೇ.

‘ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ದೃಢ ಪ್ರಯತ್ನವನ್ನು ನಿಮ್ಮ ಆಪ್ತ ಗೆಳೆಯನನ್ನಾಗಿ ಮಾಡಿಕೊಳ್ಳಿ, ಅನುಭವವನ್ನು ನಿಮ್ಮ ಆಪ್ತ ಸಲಹೆಗಾರನಾಗಿ, ಜಾಗರೂಕತೆಯನ್ನು ನಿಮ್ಮ ಹಿರಿಯಣ್ಣನಾಗಿ ಹಾಗೂ ಆಶಾಭಾವವನ್ನು ನಿಮ್ಮ ಸಂರಕ್ಷಕ ದೇವತೆಯನ್ನಾಗಿ ಮಾಡಿಕೊಳ್ಳಿ’.

– ಜೋಸೆಫ್ ಆಡಿಸನ್

ಕೊರೆಯುವ ಚಳಿಯೊಡನೆ ಮನಸ್ಸಿಗೆ ಹೊಸ ಉತ್ಸಾಹವನ್ನು ನೀಡುವ ಕ್ರಿಸ್ ಮಸ್ ಮೈರೋಮಚನಗೊಳಿಸುತ್ತದೆ .ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಜಗತ್ ಗುರು ಯೇಸು ಕ್ರಿಸ್ತನ ಜನ್ಮದಿನವೇ ಕ್ರಿಸ್ ಮಸ್.ತಮ್ಮ ಅನುಯಾಯಿಗಳಿಗೂ ಪ್ರಿಯ ಅದ್ಬುತ ಅಮೃತವನ್ನು ಕುಡಿಸಿದರು. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಮೇರಿ ಹಾಗೂ ಜೋಸೆಫ್ ರವರ ಮೂಲಕ ಈ ಭವ್ಯ ಪ್ರಪಂಚಕ್ಕೆ ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವನವನ್ನು ಪಡೆಯಬೇಕೆಂದು ಆತನನ್ನು ನೀಡಿದನು.

ಕೇವಲ ಕ್ರಿಶ್ಚಯನ್ ಗಳಿಗೆ ಸೀಮಿತವಲ್ಲದ ಈ ಹಬ್ಬವನ್ನು ಪ್ರಪಂಚಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮನೆಯನ್ನು ಶುಚಿಗೊಳಿಸುವುದರಿಂದ ಕ್ರಿಸ್ ಮಸ್ ನ ರಾತ್ರಿಯವರೆಗೂ ಪ್ರತಿಯೊಬ್ಬರಲ್ಲಿಯೂ ಸಡಗರ ತುಂಬಿ ತುಳುಕುತ್ತದೆ.

ಬೆತ್ ಲ ಹಿಮ್ ನ ಜನರನ್ನು ರಕ್ಷಿಸುವಂತಹ ‘ಗಾಡ್ ಆಫ್ ಸೇವಿಯರ್’ ಆಗಿ ಜನಿಸಿದ ಮೇರಿಯ ಮುದ್ದು ಕಂದನಾದ ಯೇಸು, ತನ್ನ ಜೀವನವಿಡೀ ತಾನು ಸಾರಿದ ಶಾಂತಿ,ಪ್ರೀತಿ,ಕ್ಷಮೆಯ ಸಂದೇಶವನ್ನು ಪಾಲಿಸಿದ. ಧರ್ಮ, ಶಿಕ್ಷಣ ಕುರಿತಾದ ಅವರ ವಿಚಾರಗಳು ಮೌಲಿಕವೂ ಚಿರಕಾಲ ಮೆಲುಕು ಹಾಕುವಂತೆಯೂ ಇವೆ.ಮಾನವನ ಪುರಾಷಾರ್ಥಗಳಲ್ಲಿ ಪ್ರಥಮವಾದ ಧರ್ಮದ ಬಗ್ಗೆ ಅವರು ವ್ಯಕ್ತಪಡಿಸಿದ ಭಾವನೆಗಳು ಗಮನಾರ್ಹವಾಗಿವೆ. ಅವು ಧರ್ಮದ ಮರ್ಮವನ್ನು ತಿಳಿಸಲು ಸಮರ್ಥವಾಗಿವೆ ಹಾಗೂ ಚೇತೋಹಾರಿಯೂ , ಪ್ರಯೋಜನಕಾರಿಯೂ ಆಗಿವೆ.

ಧರ್ಮವೆಂಬುದು ಸಂಸ್ಕೃತಿಯ ಅಂತಃಸ್ವತ, ಸಾಮಾಜಿಕ ಸಂಘಟನೆಯೆಂಬ ದೇಹಕ್ಕೆ ಜೀವವಿದ್ದಂತೆ. ಆದರೆ ದೃಢವಾದ ಚಿರಂತನವಾದ ಏಕತಾನವಾಗಬೇಕಾದರೆ ಭಾವನೆಗಳ, ಆದರ್ಶಗಳ ಬಾಂಧವ್ಯವನ್ನು ದೃಢಪಡಿಸಬೇಕು. ಮಾನವ ಕೋಟಿಯ ಮನೆಯನ್ನು ಕಟ್ಟುವ ಕೆಲಸದಲ್ಲಿ ವಿಜ್ಞಾನದಷ್ಟೇ ಧರ್ಮದ ಪಾತ್ರವೂ ಮುಖ್ಯವಾದದು.

‘ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಲಿಸಿಕೊಟ್ಟನೇ ಹೊರತು ತೀರ್ಪುಮಾಡುವುದಕ್ಕಾಗಿ ಕಳುಹಿಸಲಿಲ್ಲ’.
– ಯೋಹಾನ ೩:೧೭

ಜಗತ್ತಿನಾದ್ಯಂತ ನಡೆಯುತ್ತಿರುವ ಅನಾಚಾರಗಳನ್ನು ಕೊನೆಗೊಳಿಸುವ ದಿಟ್ಟ ಹೆಜ್ಜೆಯನ್ನು ಈ ಶುಭದಿನದಂದು ಇಡಬೇಕಾಗಿದೆ.
-ಪು.ತಿ.ನೋ

ಕ್ರಿಸ್ ಮಸ್ ಟ್ರೀ ಹೇಗೆ ತನ್ನ ಮೇಲೆ ಹಿಮ ರಾಶಿ ಬಿದ್ದರೂ ಕೂಡ ತನ್ನ ನೋಟವನ್ನು ಮಂದಗೊಳಿಸುವುದಿಲ್ಲವೋ ಹಾಗೆಯೇ ಜೀವನದಲ್ಲಿ ನಮ್ಮ ಮೇಲೆ ಎಷ್ಟೇ ಒತ್ತಡಗಳಿದ್ದರೂ ಸಹ ಸಂತೋಷ ಮತ್ತು ಭರವಸೆಯು ಕಿರಣವಾಗಿ ಎಂದೂ ಕಂಗೊಳಿಸಲಿ.

ಹಸಿರು ಎಲೆಗಳು ಹಾಗು ಬೇರಿ೯ಗಳಿಂದ ಅಲಂಕಾರಗೊಂಡು ಮನೆಯ ಮುಂಬಾಗಿಲಿನಲ್ಲಿ ಕಾಣುವ ಕ್ರಿಸ್ ಮಸ್ ದೇವರ ಅಂತ್ಯವೇ ಇಲ್ಲದ ಪ್ರೀತಿಯನ್ನು ಸಾರುತ್ತದೆ. ಅದಕ್ಕೆ ಅನುಗುಣವಾಗಿ ನಾವು ಸಹ ಸತ್ಯ,ನ್ಯಾಯ ಮುಂತಾದ ಪುಣ್ಯ ಕಾರ್ಯಗಳಿಗೆ ಅಂತ್ಯವಿಲ್ಲ ಎಂಬುದನ್ನು ಮನಸ್ಸಿನಲ್ಲಿ ದೃಢವಾಗಿ ಮನ್ನಿಸಿ ಅದರ ಪ್ರಕಾರ ನಡೆದುಕೊಳ್ಳಬೇಕು.

ಸುಖಮಯವಾದ ಜೀವನ ನಮ್ಮದಾದಲ್ಲಿ ಜಗತ್ತು ಆಕರ್ಷಿತವಾಗಿ ಕಾಣುತ್ತದೆ.ತನಗಾಗುವ ನೋವಿಗೆ ಕಾರಣವಾದವರನ್ನು ಕ್ಷಮಿಸಿ ಶಾಂತಿಧೂತನಾದ ಯೇಸು ನೋವು ಮೀರಿದ ಮಾನವೀಯ ಆಯಾಮವನ್ನು ದೊರಕಿಸಿಕೊಟ್ಟಿತು. ಅಂತಹ ಮಾದರಿ ಪ್ರಪಂಚದ ಶಿಲ್ಪಿಗಳಾಗಿ ನಾವು ರೂಪಗೊಳ್ಳಬೇಕು.

ಮೋ೦ಬತ್ತಿ ಜ್ಞಾನದ ಸಂಕೇತ,ಅಜ್ಞಾನದಿಂದ ಬಳಲುತ್ತಿರುವ ಮಾನವರನ್ನು ಜ್ಞಾನದ ಕಡೆಗೆ ಕರೆದೊಯ್ಯುವುದರ ದ್ಯೋತಕ, ಮೋ೦ಬತ್ತಿ ನಿಧಾನವಾದ ಉರಿಯುವಿಕೆ ‘ದುಡುಕಿದರೆ ದುರಂತ, ನಿಧಾನವಾಗಿ ಆಲೋಚಿಸಿದರೆ ಎಲ್ಲದಕ್ಕೂ ಪರಿಹಾರ ಗೋಚರಿಸುತ್ತದೆ’. ಎಂಬುದನ್ನು ಜಗತ್ತಿಗೆ ಸಾರುತ್ತದೆ.

ಕ್ರಿಸ್ ಮಸ್ ಟ್ರೀ ಯಂತೆಯೇ ಸ್ಟಾರ್ ಕೂಡ ಹೆಚ್ಚು ಮುಖ್ಯವಾದದು .ಇದು ಕ್ರಿಸ್ತನ ಜನನವನ್ನು ಸಂಕೇತಿಸುತ್ತದೆ. ದೇವ ಪುತ್ರನ ಜನನ ಸಮಯದಲ್ಲಿ ಈ ನಕ್ಷತ್ರಗಳು ಆಕಾಶದಲ್ಲಿ ಕಾಣಿಸಿಕೊಂಡಿದ್ದವು. ‘ಸ್ಟಾರ್ ಆಫ್ ಬೆತ್ಲ ಹೆಮ್’ ಎಂಬುದಾಗಿ ಕರೆಯಲಾಗುತ್ತದೆ. ಯೇಸುಕ್ರಿಸ್ತನ ಕಡೆಗೆ 3 ವಿವೇಕಿಗಳಿಗೆ ದಾರಿಯನ್ನು ತೋರಿದ ನಕ್ಷತ್ರಗಳು ಇಂದು ದಾರಿತಪ್ಪಿದ ಪ್ರತಿಯೊಬ್ಬರಿಗೂ ಜ್ಞಾನ,ಮಾನವೀಯತೆಯ ಬೆಳಕನ್ನು ನೀಡಿ,ಉಜ್ವಲ ಬದುಕನ್ನು ನಿರ್ಮಿಸಿಕೊಳ್ಳಲು ವಿಶಾಲವಾದ ದಾರಿಯನ್ನು ತೋರಲಿ ಎಂದು ಆಶಿಸೋಣ.

(ಸೂಚನೆ: ಉತ್ತಮ ಲೇಖನಗಳನ್ನು ಆಕೃತಿ ಕನ್ನಡದಲ್ಲಿ ಪ್ರಕಟಿಸಲಾಗುತ್ತದೆ. ಆಸಕ್ತರು ತಮ್ಮ ಲೇಖನವನ್ನು aakritikannada@gmail.com ಕಳುಹಿಸಿಕೊಡಬಹುದು. )

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW