ಕವಿ ಚಂದ್ರಗೌಡ ಕುಲಕರ್ಣಿ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಗುರಿಯನು ಮುಟ್ಟಲು ಸಾಗುತಲಿರುವುದು
ಅನಂತ ವಿಶ್ವದ ಯಾನ !
ಅತ್ತಿತ್ ವಾಲದೆ ಮುನ್ನಡೆದಿರುವುದು
ಬಳಸುತ ಒಡಲಿನ ತ್ರಾಣ !
ಹಿಮನದಣ ಮುಂದಣ ಇಂದಣ ಗತಿಯನು
ಸೂಚಿಸುತಿರುವವು ಗಾಲಿ !
ನೆಲದಾಕರ್ಷಣೆ ಸಂಬಾಳಿಸುವುದು
ತಪ್ಪದೆ ಹಿಡಿಯುತ ಜೋಲಿ !
ಎತ್ತು ಜತ್ತಿಗೆ ನುಂಗಿದ ಹಾಗೆ
ಹ್ಯಾಂಡ್ಲು ಪೆಡ್ಲು ಕಾಲು !
ಒಂದರೊಳೊಂದು ಬೆರೆತೊಂದಾಗಿವೆ
ಕಾಣಿಸದಂತೆ ಸಾಲು !
ಯತ್ನ ಅದೃಷ್ಟವ ಎಳೆದೊಯ್ಯುವವು
ಮುಟ್ಟುವ ದಿಕ್ಕಿನ ಕಡೆಗೆ !
ಗುರಿಯನು ಮುಟ್ಟಲಿ ಮುಟ್ಟದೆ ಇರಲಿ
ಸಲುವುದು ಶ್ರದ್ಧೆಯ ನಡೆಗೆ !
- ಚಂದ್ರಗೌಡ ಕುಲಕರ್ಣಿ
