ಹಣೆಬರಹವ ಶಪಿಸುತ ಕುಳಿತರಿಲ್ಲಿ, ಬದುಕು ಎಂದಿಗೂ ಬದಲಾಗದಿಲ್ಲಿ, ಎದುರಿಸಿ ನಿಲ್ಲಬೇಕು ಗೆಲ್ಲಬೇಕು…ಜೀವನಕ್ಕೆ ಉತ್ಸಾಹ ತುಂಬುವ ಕವಿ ನಾಗರಾಜ ಜಿ. ಎನ್. ಬಾಡ ಅವರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಲ್ಲು ಮುಳ್ಳು ಕೊರಕಲು
ತುಂಬಿದೆ ಸಾಗುವ ದಾರಿಯಲ್ಲಿ
ಸುಲಭದಲ್ಲಿ ಸಿಗದು ಗೆಲುವು
ನಮ್ಮ ಈ ಬಾಳಿನಲ್ಲಿ
ಮುಗಿದು ಹೋಗಬಾರದು
ಬದುಕು ಬರೀ ಗೋಳಿನಲ್ಲಿ
ಕಷ್ಟ ಎಂದುಕೊಂಡು ಸುಮ್ಮನಾದರೆ
ಯಾವುದೂ ಅಸಾಧ್ಯವಿಲ್ಲಿ
ಹೊಸತನವನ್ನು ತುಂಬಲು
ಎಲ್ಲವೂ ಸಾಧ್ಯವಿಲ್ಲಿ
ಕಷ್ಟಪಟ್ಟು ಇಷ್ಟಪಟ್ಟು ದಿನವೂ
ದುಡಿದರೆ ಮಾತ್ರ ಗೆಲ್ಲಬಹುದಿಲ್ಲಿ
ಹಣೆಬರಹವ ಶಪಿಸುತ ಕುಳಿತರಿಲ್ಲಿ
ಬದುಕು ಎಂದಿಗೂ ಬದಲಾಗದಿಲ್ಲಿ
ಏನೇ ಬಂದರೂ ಎದೆಗುಂದದೆ
ಎದುರಿಸಿ ನಿಲ್ಲಬೇಕು ಗೆಲ್ಲಬೇಕು
ಕಲ್ಲು ಮುಳ್ಳಿನ ಹಾದಿಯನ್ನೂ
ನಾವು ಹೂವಾಗಿ ಅರಳಿಸಬೇಕು
ಸುರಿಸಿದ ಪ್ರತಿ ಬೆವರ ಹನಿಯು
ಮುತ್ತಾಗಿ ಮರಳಿ ನಮಗೆ ಸಿಗಬೇಕು
ದುಡಿಮೆಯೇ ದೇವರು ಎಂದು ತಿಳಿದು
ಸದಾ ನಾವು ದುಡಿಯಬೇಕು
ಗೆಲುವು ನಲಿವು ಪಡೆಯ ಬೇಕು
- ನಾಗರಾಜ ಜಿ. ಎನ್. ಬಾಡ – ಕುಮಟ, ಉತ್ತರ ಕನ್ನಡ.
