‘ಎಷ್ಟು ಕಾಲ ಇನ್ನೂ ಹೀಗೆ’ ಕವನ – ಹೆಚ್. ಪಿ. ಕೃಷ್ಣಮೂರ್ತಿ

ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಎಷ್ಟು ಕಾಲ ಇನ್ನೂ ಹೀಗೆ
ನನ್ನ ಕಾಡುವೆ!?
ಮರೆತ ಒಲವ ರಾಗವನ್ನೆ
ಮತ್ತೆ ಹಾಡುವೆ!?

ಸವಿದ ಮಧುರ ದಿನಗಳದುವೆ
ಇರಲಿ ಹಾಗೆಯೇ
ಹಾಡಿ ಮತ್ತೆ ನೆನಪ ತರಲು
ಸುಖವೆ ಮನಸಿಗೆ!?

ಸದಾಕಾಲ ಸುರಿಯುವಂತೆ
ಜಡಿಯು ಅವನಿಗೆ
ಸುರಿಸದಿರು ನೆನಪ ಮಳೆಯು
ಎದೆಯ ಬಯಲಿಗೆ

ಸಾವಿರಾರು ಕನಸು ಹೆಣೆದ
ಮನದ ಆಸೆಗೆ
ಒಂದಾದರೂ ದಕ್ಕಿತೇನು
ಅದರ ಪಾಲಿಗೆ!?


  •  ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading