ಇಂದು ಅಂತರಾಷ್ಟ್ರೀಯ “ಯೋಗ” ದಿನ.
ಯೋಗದಿಂದ ಸುಯೋಗ, ಯೋಗದತ್ತ ಜಗದ ಚಿತ್ತ
ಇಂದು ಇಡೀ ಜಗತ್ತಿನಲ್ಲಿ ಯೋಗ ಮಾಡುವುದನ್ನು ಕಾಣಬಹುದು. ಆದರೆ ಇದನ್ನು ಒಂದೇ ದಿನಕ್ಕೆ ಸೀಮಿತ ಗೊಳಿಸಿಕೊಳ್ಳದೇ ನಮ್ಮ ದಿನಚರಿಯಲ್ಲಿ ರೂಢಿಸಿಕೊಂಡರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಚ್ಚರಿಯ ಬದಲಾವಣೆ ಕಾಣಬಹುದು.
“ಯೋಗ” ಮಾಡುವುದರಿಂದ “ಯೋಗ” ಲಭಿಸುವುದು ಎಂದು ನಮ್ಮ ಪೂರ್ವಜರು ಹೇಳಿರುವುದರಲ್ಲಿ ಎಷ್ಟು ಮಹತ್ವ ಇದೆ.
ಯೋಗಾಭ್ಯಾಸವನ್ನು….
ಯುವಾ ವೃದ್ದೋತಿ ವೃದ್ಧಿ ವಾ
ವ್ಯಾಧಿತೋ ದುಬ೯ಲೋಪಿ ವಾ।
ಅಭ್ಯಾಸಾತ್ ಸಿದ್ಧಿ ಮಾಪ್ನೋತಿ ಸವ೯ಯೋಗೇಷ್ಠ ತಂದ್ರಿತಃ।।
ಯುವಕರು,ವೃದ್ಧರು,ಅಬಾಲ ವೃದ್ಧರು, ವ್ಯಾಧಿಗ್ರಸ್ತರು,
ದುಬ೯ಲರು ಎಲ್ಲರೂ ಮಾಡಬಹುದಾದ ಈ ವಿದ್ಯೆಯನ್ನು ಸತತಾಭ್ಯಾಸದಿಂದ ಪೂಣ೯ತೆಯನ್ನು ಸಾಧಿಸಬಹುದು ಎನ್ನುತ್ತಾರೆ” ಪತಂಜಲಿ ಮಹಷಿ೯ಗಳು”
ಯೋಗಾಭ್ಯಾಸವು ಸಮೃದ್ಧ ಆರೋಗ್ಯವನ್ನು ಕೊಟ್ಟು ರೋಗವನ್ನು ದೂರಮಾಡುವುದು, ರೋಗಬಾರದಂತೆ ನೋಡಿಕೊಳ್ಳುವುದು. ಆದ್ದರಿಂದ ಯೋಗವು ಆರೋಗ್ಯದ ಸಂಜೀವಿನಿ,ರೋಗ ನಿವಾರಕ, ರೋಗ ನಿರೋಧಕ ಮತ್ತು ಸೌಂದಯ೯ಕ್ಕೆ ಸಂವಧ೯ಕ.
ಇಷ್ಟೊಂದು ಮಜಲುಗಳಿರುವ ಯೋಗವನ್ನು ಓದಿ ತಿಳಿಯಬೇಕು ಮಾಡಿ ಕಲಿಯಬೇಕು.
ಯೋಗಶಾಸ್ತ್ರದ ಪಿತಾಮಹ ಮಹಷಿ೯ ಪತಂಜಲಿಯವರು ತನ್ನ ‘ಪಾತಂಜಲ ಯೋಗ ಸೂತ್ರ‘ ದಲ್ಲಿ ಯೋಗವನ್ನು ಹೀಗೆ ವಿವರಿಸಿದ್ದಾರೆ.
೧) “ಯೋಗಃ ಚಿತ್ತ ವೃತ್ತಿ ನಿರೋಧಕ” ಮನಸ್ಸಿನಲ್ಲಿ ಏಳುವ ಅಲೆಗಳ ನಿರೋಧವೇ ಯೋಗ.
೨) “ಮನಃಪ್ರಶ ಮನೋಪಾಯಃ ಯೋಗ ಇತ್ಯಭಿಧೀಯತೇ” ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧ ಉಪಾಯವೇ ಯೋಗ.
೩) “ಸಮತ್ವ ಯೋಗ ಉಚ್ಯತೇ” ಸಮಸ್ಥಿತಿ ಯನ್ನು ಸಾಧಿಸುವುದೇ ಯೋಗ.
೪) “ಯೋಗಃ ಕಮ೯ಸು ಕೌಶಲಮ್” ಕಾಯ೯ ಕುಶಲತೆಯೇ ಯೋಗ.
ಎಷ್ಟು ಅಥ೯ಗಭಿ೯ತ ವ್ಯಾಖ್ಯಾನಗಳು :
ಹಣ ಕೊಟ್ಟು ಆಚೆ ತಿಂದು ಅದನ್ನು ಕರಗಿಸಲು ಹಣ ತೆತ್ತು ವಕೌ೯ಟ್ ಮಾಡುವುದಕ್ಕಿಂತ
“ಮುಂಜಾನೆ ಹೊತ್ತಲ್ಲಿ
ರವಿಕಿರಣ ಬೀಳುವಲ್ಲಿ
ಯೋಗಾಭ್ಯಾಸದ ಪರಿ
ಆರೋಗ್ಯ ಬಲಗೊಳ್ಳಿಸಿಕೊಳ್ಳುವ ದಾರಿ”
ಶಿಸ್ತು, ಸಹನೆಗೆ ಮತ್ತು ಜೀವನ ಮೌಲ್ಯಕ್ಕೆ ಬೇಕು ಯೋಗ. ಜೊತೆಗೆ ದಿನವೂ ಅಭ್ಯಂಗ ಸ್ನಾನ, ಸಾತ್ವಿಕ ಆಹಾರ, ಸರಳ ಜೀವನ ರೂಢಿಸಿಕೊಂಡರೆ ಉಲ್ಲಾಸಕರ ಬದುಕು ನಿಮ್ಮದಾಗುತ್ತದೆ.
ಲೇಖನ : ವಾಣಿ . ಆರ್ (ಯೋಗ ಶಿಕ್ಷಕಿ)