ಜನಪ್ರಿಯ ಲೇಖಕಿ ಕೆ.ವಿ.ರಾಜೇಶ್ವರಿ ಅವರ ೧೦೦ ನೆಯ ಪುಸ್ತಕವಿದು. ಇದರಲ್ಲಿ ೧೫ ಸಣ್ಣ ಕಥೆಗಳ ಸಂಕಲನವಾಗಿವಿದ್ದು, ಈ ಕೃತಿಯ ಕುರಿತು ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ : ಆಸೆಯ ಅಲೆಗಳ ಮೇಲೆ.
ಲೇಖಕರು: ಕೆ.ವಿ. ರಾಜೇಶ್ವರಿ.
ಚಾರುಮತಿ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೫.
ಪುಟಗಳು:೧೩೨.
ಬೆಲೆ:೮೦.
ಸುತ್ತುತ್ತಿರುವ ಕಾಲಚಕ್ರದಲ್ಲಿ ಯಾರೂ ಏನೂ ಆಗಬಹುದು. ಎನ್ನುವುದು “ಯೋಗ್ಯತೆ “ಎಂಬ ಕತೆಯ ತಾತ್ಪರ್ಯ. ಸುಧಾಕರ ರಾಯರಿಗೆ ಮನೆಗೆಲಸದ ಮಾದಮ್ಮನ ಮಗ ರಾಜುವನ್ನು ಕಂಡರಾಗದು. ತಮ್ಮ ಹೆಂಡತಿ ಸುಶೀಲ ದಿನವೂ ಉಳಿದ ಅನ್ನ ತಿಂಡಿ,ಕೆಲವೊಮ್ಮೆ ಅವನಿಗೆ ಪರೀಕ್ಷೆಯ ಫೀಜಿಗೆ ದುಡ್ಡು ಕೊಡುವುದು ಇದೆಲ್ಲಾ ಸಿಟ್ಟು ತರಿಸಿತ್ತು. ಕಾರಣಾಂತರದಿಂದ ಅವರು ಆ ಊರು ಬಿಟ್ಟು ಬೆಂಗಳೂರಿಗೆ ಹೋಗುತ್ತಾರೆ.ಮುಂದೆ ಅವನು ಕಷ್ಟಪಟ್ಟು ಓದಿ ಕಲೆಕ್ಟರ್ ಆಗುತ್ತಾನೆ.
ಇತ್ತ ಸುಧಾಕರ ರಾಯರ ನಿವೃತ್ತಿಯಾಗಿ, ಇದ್ದೊಬ್ಬ ಮಗಳಿಗೆ ಮದುವೆಯಾಗಿದ್ದರೂ, ಸ್ಕೂಟರ್,ವರದಕ್ಷಿಣೆಯ ಕಾರಣಕ್ಕೆ ಅವಳನ್ನು ತವರಿಗೆ ಕಳಿಸಿದ ಅವಳ ಗಂಡನ ಮನೆಯವರ ಜೊತೆ ಸಂಧಾನ ನಡೆಸುತ್ತಾ,ಕಾಯಿಲೆಯ ಹೆಂಡತಿ ಮತ್ತು ಅಪಘಾತವಾಗಿದ್ದ ಮಗನ ಅಪರೇಷನ್ ಎಂದು ಸಾಲದಲ್ಲಿ ಮುಳುಗಿಹೋಗಿದ್ದರು. ಆಗ ಆಪಧ್ಭಾಂಧವನಂತೆ ಬಂದ ರಾಜು ಅವರಿಗೆ ಸಹಾಯ ಮಾಡಿದ್ದು ಹೇಗೆ? ಎನ್ನುವುದು ಬಹಳ ಹೃದಯಸ್ಪರ್ಶಿಯಾಗಿದೆ.

“ಆಸೆಯ ಅಲೆಗಳ ಮೇಲೆ’ ಹಾಗೂ “ಬಣ್ಣ “ಎನ್ನುವ ಎರಡೂ ಕಥಾ ವಸ್ತುಗಳಲ್ಲಿ ಬಹಳ ಸಾಮ್ಯತೆಯಿದೆ. ಅಮೆರಿಕದಲ್ಲಿದ್ದ ಸ್ವಾತಿಗೆ ಕಡೇ ಪಕ್ಷ ಮೂರು ತಿಂಗಳಾದರೂ ಇಂಡಿಯಾದಲ್ಲಿ ತನ್ನ ಸೋದರಿಯರು, ಬಂಧುಗಳ ಜೊತೆ ಇರುವಾಸೆ. ಆದರೆ ಆಕೆ ತರುವ ಉಡುಗೊರೆಗಳ ಆಶೆಯಿಂದ ಮಾತ್ರ ಸತ್ಕರಿಸುವ ಸೋದರಿಯರ ನಿಜ ಸ್ವಭಾವದ ಅರಿವಾಗುತ್ತಿದ್ದಂತೆ , ಗಂಡ ದಿಲೀಪನಿಗೆ ಆದಷ್ಟು ಬೇಗನೇ ತಮ್ಮ ಗೂಡಿಗೆ ಹೋಗೋಣವೆಂದು ಒತ್ತಾಯಿಸುತ್ತಾಳೆ.
ಹಾಗೇ ಕೆಲವು ವರ್ಷಗಳಿಂದ ಉದ್ಯೋಗದ ನಿಮಿತ್ತ ಕುವೈಟಿನಲ್ಲಿ ವಾಸ್ತವ್ಯ ಹೂಡಿದ್ದ ಅನ್ನಪೂರ್ಣೆಯ ಕುಟುಂಬ ಇರಾನ್ ಯುದ್ಧ ಭೀತಿಯ ಅಪಾಯಕ್ಕೆ ಸಿಕ್ಕಿ ಭಾರತದ ಮೂಲಮನೆಗೆ ಬರುತ್ತಾರೆ.ಇಷ್ಟುದಿನ ಅವರಿಂದ ಹಣ ಸಹಾಯ ಪಡೆದು ಇಂದು ಸುಸ್ಥಿತಿಯಲ್ಲಿದ್ದರೂ, ಓರಗಿತ್ತಿಯರ ಅನಾದರದಿಂದ ಅವರ ಅಂತರಂಗದ ನಿಜ ಬಣ್ಣ ಗೊತ್ತಾಗಿ ನಲುಗುವ ಅನ್ನಪೂರ್ಣೆಗೆ ಗಂಡ ಹೇಳಿದ ಶುಭ ಸಮಾಚಾರ ಯಾವುದು?.

ನೋಡಲು ಕಪ್ಪಾಗಿದ್ದರೂ, ಒಳ್ಳೆಯ ಉದ್ಯೋಗದಲ್ಲಿದ್ದ ಅತ್ತಿಗೆಯನ್ನು ಅಣ್ಣ ಮೆಚ್ಚಿ ಮದುವೆಯಾಗಿದ್ದು ವತ್ಸಲೆಗೆ ಸ್ವಲ್ಪವೂ ಇಷ್ಟವಾಗಿರಲಿಲ್ಲ. ಕರಿಮುದ್ದೆ,ಎಂದು ಹಿಂದಿನಿಂದ ಕರೆದು ಹಂಗಿಸುತ್ತಾ ಅವಳೊಂದಿಗೆ ಸರಿಯಾಗಿ ಮಾತನ್ನೂ ಆಡದೇ ವರ್ಷಗಳುರುಳಿ ವತ್ಸಲಾ ಳಿಗೂ ಈಗ ಮದುವೆಯಾಗಿತ್ತು. ಅವಳೀಗ ಹೆಣ್ಣುಮಗುವಿನ ತಾಯಾಗಿ ಆಸ್ಪತ್ರೆ ಯಲ್ಲಿದ್ದಳು. ಮಗುವನ್ನು ನೋಡಿದಂತೆ ಅವಳಿಗೆ ತನ್ನ ತಪ್ಪುಗಳ ಬಗ್ಗೆ ಪಶ್ಚಾತ್ತಾಪವಾಗಿ ಅತ್ತಿಗೆಯಲ್ಲಿ ಕ್ಷಮೆ ಯಾಚಿಸಬೇಕು ಎನ್ನಿಸಿದ್ದೇಕೆ? ಎನ್ನುವುದನ್ನು” ಹುಟ್ಟು” ಎನ್ನುವ ಶೀರ್ಷಿಕೆಯ ಕಥೆಯಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ.
ನಾನಿಲ್ಲಿ ಹೇಳಿದ್ದು ಕೆಲವನ್ನು ಮಾತ್ರ.ಇನ್ನಷ್ಟು ಇಂತಹ ಚೆಂದದ ಕಥೆಗಳನ್ನು ನೀವೂ ಪುಸ್ತಕ ಓದಿಯೇ ಅನುಭವಿಸಬೇಕು. ಅಗಾಧ ಜೀವನ ಪ್ರೀತಿಯಿಂದ ಬಾಳನ್ನು ರೂಪಿಸಿಕೊಳ್ಳುವ ಸಮಾಜದಲ್ಲಿನ ಮಹಿಳೆಯರ ತಲ್ಲಣಗಳನ್ನು ಲೇಖಕಿ ಕಟ್ಟಿಕೊಡುವ ರೀತಿ ಮೆಚ್ಚುಗೆಯಾಗುತ್ತದೆ. ಇವರ ಬರವಣಿಗೆ ಸಹಜ ಸರಳ ಶೈಲಿಯಿಂದ ಗಮನ ಸೆಳೆಯುತ್ತದೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ಮಾಲತಿ ರಾಮಕೃಷ್ಣ ಭಟ್
