ಇದು ಅಡಿಕೆ ಸಸಿ
ತಯಾರಾಗಿದೆ ತೋಟದಲ್ಲಿ ಪ್ರತಿಸ್ಠಾಪನೆಗಾಗಿ
ಇದರ ಮಾಲೀಕರು ರಾಮಚಂದ್ರಮತಿ
ಅಡಿಕೆ ಕೆಲಸದಲ್ಲೇ ನಿರತರಾಗಿರುವವರು ಜೊತೆಗೂಡಿ…
ಈ ವಯೋಮಾನದಲ್ಲಿ ಉತ್ಸಾಹದ ಚಿಲುಮೆಯಂತೆ
ಬೆವರಿಳಿಸಿ ದುಡಿಯುವವರು ಸ್ವಾಭಿಮಾನಕ್ಕಾಗಿ
ಮಳೆಗಾಲದ ಆರಂಭ
ಸಸಿ ನೆಡುವ ಕಾಲವದು
ಆರಿದ್ರ ಮಳೆ ಜೀವಾಳ
ಅಡಿಕೆ ಬೆಲೆಯೇ ಜೀವನಾಧಾರ
ಫಸಲಿಗೆ ಬೆಲೆ ಬಂದರೆ
ಮನೆಯಲ್ಲಿ ಹರುಷದ ಬಂಗಾರ
ಮುಗಿಲೆತ್ತರ ಕುಣಿಯುವ
ಅಡಿಕೆ ಪೈರು
ಇವರ ಬದುಕಿನ ಪ್ರಗತಿಯ ತೇರು
“ಭೂಮಿಹುಣ್ಣಿಮೆ” ಗೆ ಪೂಜಿಸಿ ನಮಿಸುವರು
ಪ್ರತಿಫಲ ಏನೇ ಬಂದರೂ
ನಗುತ ಬದುಕಿನ ಬಂಡಿ ನಡೆಸುವರು
ದುಡಿಮೆಯೇ ದೇವರು ಎಂಬ
ಜೀವನ ನುಡಿ ಸಾರುವರು…
ಕವನ : ವಾಣಿರಾಜ್ ಜೋಶಿ