ಕವನ : ಅಮೃತ ಎಂ.ಡಿ
ಸರಿಯುವ ಕಾಲವೇ
ಕವಾಲುದಾರಿಯ ನೆಂಟ .!
ನಾವು ನೀವು ಎಲ್ಲರೂ
ನಿಮಿತ್ತ ಕಾಲದ ಭಂಟ.!
ಒಳಗೆ ಧಗ ಧಗಿಸೋ ದ್ವೇಷ
ಹೊರಗೆ ಹಿತೈಷಿಯ ರೂಪ .!
ಎದುರಲ್ಲಿ ಹೊಗಳಿಕೆಯ ದೀಪ್ತಿ
ಮರೆಯಲ್ಲಿ ತೆಗಳಿಕೆಯ ಧೂಪ.!
ಕಂಡು ಕಾಣದಿರು ಈ
ಹಾಳು ಬಿದ್ದ ಸಮಾಜವ .!
ಅಂಕು ಡೊಂಕುಗಳ
ತಿದ್ದುವ ನಾಗರೀಕರಾಗುವ.!
ಅರಿಯಲಾರರು ಈ
ಕವಲು ದಾರಿಯ ಮರ್ಮ ..!
ತಿಳಿಯಲಾರದು ಈ
ಕಣ್ಣ ಮುಚ್ಚಾಲೆಯ ಕರ್ಮ!