ಹೃದಯಘಾತ ದಿಢೀರ್ ಎಂದು ಬರುವುದಿಲ್ಲ!!

ಲೇಖನ : ನಾಗರಾಜ್‌ ಲೇಖನ್‌ (ಹರಡಸೆ, ಹೊನ್ನಾವರ)

amma

(ಪರಿಚಯ : ನಾಗರಾಜ್ ಲೇಖನ್ ಅವರು  ಹುಟ್ಟಿ ಬೆಳೆದದ್ದು ಹೊನ್ನಾವರದ ಹರಡಸೆಯಲ್ಲಿ , ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಾಗಿದ್ದಾರೆ. ಕಥೆ, ಕವನ, ಚುಟುಕು, ಚಿತ್ರಕಥೆ , ಸ೦ಭಾಷಣೆ, ಸಾಹಿತ್ಯ  ಬರೆಯುವುದು ಅವರ ಹವ್ಯಾಸಗಳು.)

ವ್ಯಕ್ತಿಗೆ ೧೨ ಗಂಟೆ ಅಥವಾ ೨೪ ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. 

ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು. ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ, ಮುನ್ಸೂಚನೆ ಎಂದು ಅರಿವಾಗುವುದಿಲ್ಲ. ಬೇರೆಯವರಿಗೂ, ಮನೆಯವರಿಗೂ  ಹೇಳುವುದಿಲ್ಲ.

೧.ವಿಪರೀತ ಬೆವರುವುದು

೨.ಸುಸ್ತಾಗುವುದು

೩.ಯಾವುದಾದರು ರಟ್ಟೆ ವಿಪರೀತ ನೋಯುವುದು

೪.ಎದೆ ಕಿವುಚಿದಂತೆ ಆಗುವುದು

ಇಂಥ ಲಕ್ಷಣಗಳು ಹೆಚ್ಚಾಗಿ ನಡೆಯುವಾಗ, ಮೆಟ್ಟಿಲು ಹತ್ತುವಾಗಲೂ ಕಾಣಿಸುತ್ತವೆ. ಆಗ ನಿರ್ಲಕ್ಷಿಸಬಾರದು. ತಕ್ಷಣ ಆಸ್ಪತ್ರೆಯನ್ನು ಸೇರಬೇಕು.

ಯಾವ ಸಂದರ್ಭ ಹೇಗೆ ಬರುತ್ತದೆ ಎಂದು ಯಾರು ತಿಳಿಯರು. ಅದಕ್ಕೆ ಪೂರ್ವ ತಯಾರಿ ಹೀಗಿರಲಿ: 

*ಹೃದಯಾಘಾತವಾದ ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು. 40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

*ವಯಸ್ಸಾದವರು, ಈಗಾಗಲೇ ಚಿಕಿತ್ಸೆಯಲ್ಲಿ ಇರುವವರು ಹೊರಗೆ ಹೋಗುವಾಗ ಯಾವಾಗಲು ಹಣ, ಮೊಬೈಲ್, (ಯಾವುದಾದರು),  ಎಟಿಎಂ ಕಾರ್ಡ್, ಐಡಿ ಕಾರ್ಡ್  ಮತ್ತು ನೀರಿನ ಬಾಟಲಿ (200 ಎಂ.ಎಲ್. ಆದರೂ ಪರವಾಗಿಲ್ಲ) ಜೊತೆಯಲ್ಲಿ  ತೆಗೆದುಕೊಂಡು ಹೋಗವುದು ಶ್ರೇಯಕರ.

ಯೋಗ ಮಾಡುವುದು, ನಡೆಯುವುದು, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಸಸ್ಯಾಹಾರಿಯಾಗಿದ್ದಾರೇ, ಬೊಜ್ಜುಇಲ್ಲದೇ ಇರುವುದು, ತೆಳ್ಳಗೆ ಇರುವವರು, ಚಿಕ್ಕ ವಯಸ್ಸು ಇದ್ದವರಿಗೆ  ಹೃದಯಾಘಾತ ಆಗುವುದಿಲ್ಲ ಎಂದು ಕೊಳ್ಳಬಾರದು. ಅನುವಂಶಿಕ ಕಾರಣಗಳ ಜೊತೆಗೆ ಇತರೆ ಕಾರಣಗಳು ಇರುತ್ತವೆ.

ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು(ಕ್ಲಾಟ್) ಸ್ವಲ್ಪವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ  ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ ನಿಯಂತ್ರಣದಲ್ಲಿರುತ್ತದೆ.

ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ. ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಕೂಡ ಮೇಲ್ಪಟ್ಟು ಕೂಡ ಪತ್ತೆಯಾಗಿರುತ್ತದೆ.  ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು ಆರಾಮವಾಗಿ ಆರೋಗ್ಯವಾಗಿರಬಹುದು. ಯಾವುದಕ್ಕೂ ಹೆದರಬೇಕಾಗಿಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ. ಎಲ್ಲರಂತೆ ಸುಖ ಜೀವನ ನಡೆಸಬಹುದು. ಸಾವಿಗೆ ಹೆದರಬಾರದು. ಆದರೆ ಕೆಲವು ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿದರೆ ಉತ್ತಮ.

ಇತರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಸಮಯವಿರುತ್ತದೆ. ಆದರೆ ಹೃದಯ  ಖಾಯಿಲೆ ಹಾಗಲ್ಲ. ಕೆಲವೊಮ್ಮೆ ಒಂದು ನಿಮಿಷ ಕೂಡ ಸಮಯವನ್ನೇ ನೀಡುವುದಿಲ್ಲ. ತಕ್ಷಣ ಸಾವಿಗೆ ನೂಕಿ ಬಿಡುತ್ತದೆ. ಆಗ ಬದುಕಲು ಅದೃಷ್ಟ ಬೇಕು.

heart

ವೈದ್ಯರು ಹೇಳುವುದು ಒಂದೇ :
*ಉತ್ತಮ ಆಹಾರ ಕ್ರಮ ಅನುಸರಿಸಿ

*ಸದಾ ಚಟುವಟಿಕೆಯಿಂದ ಇರಿ

*ಸರಳ ಜೀವನ ನಡೆಸಿ

ನಿಮ್ಮ ಕುಟುಂಬದ ಹಾಗು ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಅವರನ್ನು ನಡು ನೀರಿನಲ್ಲಿ ಕೈ ಬಿಡಬೇಡಿ. ಅವರಿಗಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ದಯವಿಟ್ಟು ಅಮೂಲ್ಯ ಜೀವ ಉಳಿಸಲು ಹಾಗೂ ಚಿಕ್ಕ ಮಕ್ಕಳ ಭವಿಷ್ಯ ರೂಪಿಸಲು ಎಲ್ಲರಿಗೂ ಹಂಚಿ.

*****

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ನಾಗರಾಜ್ ಲೇಖನ್ ಅವರ ಹಿಂದಿನ ಬರಹ : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW