
ಬಾಲ್ಯದಲ್ಲಾಡಿದೆ ಚಿನ್ನಿ ದಾಂಡ
ಯೌ ವನದಲ್ಲಿ ನನ್ನ ಕಂಡು ನಲುಗಿತು ಆನಕೊಂಡ
ಮಧ್ಯ ವಯಸ್ಸಿನಲ್ಲಿ ಬಂತು ಕೋರೋಣ ಕರ್ಮಕಾಂಡ
ಲಾಕ್ ಡೌನ್ ನಲ್ಲಿ ಮನೆಯಲ್ಲೇ ಮಾಡುತ ಕುಳಿತಿರುವೆ ‘
ಆಲೂ ಬೋಂಡಾ
*****

ಮಳೆಯಿಂದ ಎಲ್ಲೆಡೆ ವದ್ದೆ ವದ್ದೆ
ಹೊರಹೋಗಲಾರದೆ ಮನೆಯಲ್ಲೇ ಇದ್ದೆ
ಕೆಂಪು ಡಬ್ಬದಲ್ಲಿತ್ತು ರಾಗಿ ಒಂದು ಸಿದ್ದೆ
ಮಡದಿ ಮಾಡಿದಳು ಬಿಸಿ ಬಿಸಿ ಮುದ್ದೆ
ತಿಂದರೆ ಆರೋಗ್ಯಕ್ಕಿಲ್ಲ ಬಾದೆ
ಹೊಟ್ಟೆ ಬಿರಿದು ತಿಂದು ಈಗ ಬರಿ ನಿದ್ದೆ ನಿದ್ದೆ ನಿದ್ದೆ
*****

ಸ್ಟಾಕಲ್ಲಿರಲಿಲ್ಲ ದೋಸೆ ಹಿಟ್ಟು
ಸತಿ ಹೌಹಾರಿದಳು ತಲೆ ಕೆಟ್ಟು
ಕೊನೆಗೊಂದು ಉಪಾಯ ಹೊಳೆದಿತ್ತು
ತಿಂಡಿಗೆ ಕಾದಿತ್ತು ಪೆಸರಟ್ಟು
ಒಂದರ ಹಿಂದೊಂದು ಪ್ಲೇಟಿಗೆ ಬೀಳುತ್ತಿತ್ತು
ಕ್ಷಣಾರ್ಧದಲ್ಲಿ ದಬರಿ ತಳವ ಕಂಡಿತ್ತು
ತಿಂಡಿಯ ಆತ ಮುಗಿದಿತ್ತು
*****

ಭಾವವಿಲ್ಲದಿರಲು
ಮಡದಿಗೆ ಹೊಸರುಚಿಯಲ್ಲಿ ಅಭಿರುಚಿಯಿರಲು
ಪೂರಿ ರಾಸಾಯದ ಜೊತೆ ಸ್ಪ್ರೌಟ್ಸ್ ಮಸಾಲವ
ಸ್ಟೇಟಸ್ ಗೆ ಹಾಕು ಎಂದು ಸರ್ವಜ್ಞ
ಕವನ : ವಿನಯ ಹೆಗ್ಡೆ
ಪರಿಚಯ : ಅವರು ಹುಟ್ಟಿ ಬೆಳೆದದ್ದು ಶಿರಸಿಯಲ್ಲಿ. ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಕವನ, ಕತೆಯಲ್ಲಿ ಆಸಕ್ತಿಯುಳ್ಳವರು.

( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಇತರೆ ಕವನಗಳು :
-
ಲಾಕ್ ಡೌನ್ ನಲ್ಲಿ ಕವಿಯಾದ ವಿನಯ ಹೆಗ್ಡೆ
-
ನನ್ನೊಳಗಿನ ನಾನು ಋಜುವಾತು ಮಾಡಬೇಕಿದೆ
-
ಇದು ಕೊರೊನಾ ಸಮಯ
-
ರಾಜೀವ ಸಖ
-
ಇಳೆ-ಆಕಾಶದ ಒಲವೀ ಮಳೆಯು