ಕವನ : ಅಮೃತ ಎಂ
ಪರಿಚಯ : ಅಮೃತ ಅವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಎಂ ಎಸ್ಸಿ ಓದುತ್ತಿದ್ದು, ಕವನ, ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ.
ಕನಸಿನ ಜೋಪಡಿಯಲ್ಲಿ
ಕಟ್ಟಿದ ಸೂತಕದ ಅರಮನೆ ಇದೆ..!
ಸೂರ್ಯನಂತೆ ಪ್ರಜ್ವಲಿಸಿದ
ದೀಪ ನಂದಿ ಹೋಗುತ್ತಲಿದೆ..!
ಬಾಳ ಬೆಳಗ ಬೇಕಿದ್ದ ಜ್ಯೋತಿ
ಬದುಕನ್ನೇ ನಂದಿಸುತ್ತಿದೆ .!
ಉಸಿರಾಗಬೇಕಿದ್ದ ಒಡನಾಡಿಯೇ
ಉಸಿರ ಬಿಗಿಹಿಡಿಯುತ್ತಲಿದೆ.!
ಬೇಲಿಯೇ ಎದ್ದು ಹೊಲವ ಮೇಯ್ದಂತೆ
ಪ್ರೀತಿಸಿದ ಜೀವವೇ ದ್ವೇಷಿಸುತ್ತಿದೆ ..!
ಹೂವಿನಂತೆ ಇರುವ ಮೃದು ಪ್ರೀತಿ
ಇಂದು ಮುಳ್ಳಾಗಿ ತರಚುತ್ತಿದೆ..!
ಕಣ್ಣೀರ ತಾಪಕ್ಕೂ ಜಗ್ಗದ
ಕಲ್ಲು ಹೃದಯದ ಸಂಗಡವಿದೆ..!
ಮಾತಿಗೂ ಬಗ್ಗದ ಮನಸ್ಸು
ಹೃದಯವನ್ನೇ ಹಿಂಡುತ್ತಲಿದೆ..!
ಯಾವ ಜನ್ಮದಲ್ಲೂ ಸಿಗದ ಪ್ರೀತಿಯ
ಗಣಿ ನೀ ಎಂದು ಭಾವಿಸಿದ್ದೆ..!
ನನ್ನ ನಂಬಿಕೆಯ ಮೇರು ಪರ್ವತವೇ
ದಿಕ್ಕೇ ಕಾಣದೆ ದಿಕ್ಕಾಪಾಲಾಗಿ ಹೋಗಿದೆ..!
ಕವನ : ಅಮೃತ ಎಂ
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು.)
ಇನ್ನಷ್ಟು ಕವನಗಳು :