ಎಷ್ಟು ಕರಿಬೇಕು ನಿನ್ನ ಊಟಕ್ಕೆ ಅಂತ ಅಮ್ಮ ಒಂದೇ ಸಮ ರೇಗಿದಾಗಲೇ ಕಣ್ಣು ಗಡಿಯಾರದತ್ತ ಸರಿದು ಸಮಯ ಅಲೆದಾಗ ಆಗಲೇ ಒಂದು ಘಂಟೆ. ಬಂದೆ ಎಂದವಳು ಆಹಾ ಏನಮ್ಮ ನಿನ್ನ ಕೈಗುಣ ಎನ್ನುತ್ತಾ ಮೂರೂ ತುತ್ತು ಹೆಚ್ಛೆ ಸವಿದೆ,ಅಮ್ಮ ನಗುತ್ತ ಊರಿಂದ ಬರುವಾಗ ತಂದ ,ಮನೆಯಲ್ಲಿಯೇ ಬೆಳೆದ ತರಕಾರಿಯಿಂದ ಅಡುಗೆ ಮಾಡಿದ್ದುಅದಕ್ಕೆ ರುಚಿ. ಬದುಕಿಗಾಗಿ ದುಡ್ಡಿನ ಹಿಂದೆ ಜೀವ ಪಣಕ್ಕಿಟ್ಟು ಓಡುವ ನಗರ ಜನರಿಗೆ ಇದೆಲ್ಲ ಎಲ್ಲಿ ಲಭ್ಯ ಎಂದು ನಿಟ್ಟುಸಿರು ಬಿಟ್ಟರು.
ಅಮ್ಮ ಹೇಳಿದ ಆ ಮಾತುಗಳು ನೂರಕ್ಕೂ ನೂರು ಸತ್ಯ. ಮದುವೆ ಆಗಿ ಬೆಂಗಳೂರಿಗೆ ಬಂದಾಗ ನಗರ ಜೀವನ ಎಲ್ಲವೂ ಹೊಸತು. ಹಳ್ಳಿಯ ಸೊಗಡಲ್ಲಿ ಬೆಳೆದ ನನ್ನನ್ನು ಕ್ಯಾಂಕ್ರೀಟ್ ನಾಡು ಸ್ವಾಗತಿಸಿತ್ತು.
Creative Farmer Organic Ways Cow Manure – Vermi Compost for Home Garden (5 kg)
ಗೃಹಿಣಿಯಾಗಿ, ಶಿಕ್ಷಕಿಯಾಗಿ ತೃಪ್ತಿದಾಯಕ ಬದುಕು. ಊರ, ಬಾಲ್ಯ ಪೇಟೆಯಲ್ಲೂ ಕಾಡಲು ನಿಂತಾಗ ಆರಂಭಿಸಿದ್ದು ಈ ನಮ್ಮ ಹೆಮ್ಮೆಯ ಟೆರೇಸ್ ಗಾರ್ಡನ್. ಬೆಂಗಳೂರಿನ ದುಬಾರಿ ದುನಿಯಾದಲ್ಲಿ ನಮ್ಮದೊಂದು ಸ್ವಂತ ಚಿಕ್ಕ ಸೂರು 20*30ರ ನಿವೇಶನ. ಇದರಲ್ಲೇ ಮೊದಲಿಗೆ ಸಣ್ಣದಾಗಿ 5-6 ಮೂಟೆಗಳಲ್ಲಿ ಬೆಳೆಸಿ ಈಗ ಅದು ಸುಮಾರು 90 ಮೂಟೆಗಳಷ್ಟು ವಿಸ್ತರಿಸಿದೆ.
ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತು ನಿಜಕ್ಕೂ ಇಲ್ಲಿ ಅನ್ವಯ. ಮೊದಲಿಗೆ ಹರಿವೆ ಸೊಪ್ಪಿನಿಂದ ಪ್ರಾರಂಭಗೊಂಡು ಈಗ ಬೀನ್ಸ್, ಮೂಲಂಗಿ, ಬಸಳೆ, ಪಾಲಕ್, ಬೆಂಡೆ, ಬದನೇಕಾಯಿ, ದಂಟಿನ ಸೊಪ್ಪು, ಪುದಿನ, ಮಂಗಳೂರು ಮಲ್ಲಿಗೆ, ಕೆಸು ಇತ್ಯಾದಿಗಳನ್ನ ಒಳಗೊಂಡಿದೆ. ಬಿಡುವಿನ ಸಮಯ ಮೀಸಲಿಟ್ಟರೆ ಖಂಡಿತ ರುಚಿಯಾದ ಶುಚಿಯಾದ ತರಕಾರಿಗಳು ನಮ್ಮನೆ ಅಡುಗೆ ಮನೆಯಲ್ಲಿ ಪಾಲು ಪಡೆಯೋದರಲ್ಲಿ ಸಂದೇಹವಿಲ್ಲ.
ಒಂದು ತಿಂಗಳಿಗೊಮ್ಮೆ ಹಸುವಿನ ಗೊಬ್ಬರ ಮತ್ತು ಶೇಂಗಾ ಹಿಂಡಿಯನ್ನು 4-5 ದಿನಗಳ ಕಾಲ ನೆನಸಿ ಹಾಕುವುದು ಸೂಕ್ತ. ಇರುವ ಸ್ವಲ್ಪ ಜಾಗದಲ್ಲೇ ಹರಿವೆ, ಪಾಲಕ್, ಬಸಳೆ, ಪುದಿನ ಬೆಳೆಸಿ ತುಸು ಮಟ್ಟಿಗೆ ಆರ್ಗಾನಿಕ್ ಸಿಹಿಯನ್ನು ಸವಿಯಬಹುದು. ಶ್ರದ್ಧೆ ಜೊತೆಗೆ ಛಲವಿದ್ದರೆ ನಮಗಾಗುವಷ್ಟು ಫ್ರೆಶ್ ರಾಸಾಯನಿಕ ಮುಕ್ತ ಅಡುಗೆ ನಮ್ಮದು. ಕಷ್ಟ ಪಟ್ಟರೆ ಅಮೃತದ ಸವಿ ನಮ್ಮದು ಏನಂತೀರಾ?
ಲೇಖನ : ನೀತಾ ಉರಾಳ
ಲೇಖಕಿಯ ಪರಿಚಯ : ನೀತಾ ಉರಾಳ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಕೈತೋಟ, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು. ತಮ್ಮ ಟೆರೆನ್ಸ್ ನಲ್ಲಿ ವಿವಿಧ ತರಕಾರಿಗಳನ್ನು ಬೆಳೆಸಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ಲೇಖನವನ್ನು ಓದಿ, ಲೈಕ್ ಮಾಡಿ,ಶೇರ್ ಮಾಡಿ.
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು.)
ಇನ್ನಷ್ಟು ಇತರೆ ಲೇಖನಗಳು :
- ‘ಏಕತಾ ಪ್ರತಿಮೆ’ ಹಿಂದಿರುವ ರಾಮ್ ವಾಂಜಿ ಸುತಾರ್ ಅವರ ಕಲಾ ಪಯಣ
- ಧಾರಾವಾಹಿಗಳು ಸಮಾಜಕ್ಕೆ ನೀಡುವ ಸಂದೇಶವೇನು?
- ಮಲೆನಾಡಿನ ಬಹುಪಯೋಗಿ “ಮುರುಗಲು” ಮರ