ಕಾಣದಾ ಕಡಲಿಗೇ… ಹಂಬಲಿಸಿದೆ ಮನ…

ಯಾಕೋ ಪದೇ ಪದೇ ಈ ಹಾಡು ನೆನಪಿಗೆ ಬರ್ತಾ ಇತ್ತು ಇವತ್ತು.. ಅದಕ್ಕೆ ಕಡಲಂಚಿಗೆ ಬಂದು ಕುಳಿತೆ. ನೀನು ದೂರವಾದ ಮೇಲೆ ನನ್ನ ಮೊದಲ ಭೇಟಿ ಇದು ಸಮುದ್ರತೀರಕ್ಕೆ. ಯಾಕೋ ನಮ್ಮ ಮಾಮೂಲು ಜಾಗದಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಪ್ರಯತ್ನಪೂರ್ವಕವಾಗಿ ಅಲ್ಲಿಂದ ಬೇರೆ ಕಡೆ ಹೋಗಿ ಕುಳಿತೆ…

ನೀನು ಹೋಗಿ ಸರಿಯಾಗಿ ಒಂದು ವರ್ಷ ಇವತ್ತಿಗೆ. ಅಂತದ್ದೇನಿತ್ತು, ದೂರಾಗುವಂತದ್ದು?

ಇವತ್ತಿಗೂ ನನಗೆ ಪ್ರಶ್ನೆಯೇ.. ಪ್ರತಿಯೊಂದಕ್ಕೂ ಕಾರಣ ಕೇಳುತ್ತಿದ್ದ ನೀನು ಕಾರಣವೇ ಹೇಳದೇ ದೂರದೆ. ಎಂತ ವಿಪರ್ಯಾಸ!..

ಏನೆಂದರೆ ಏನೂ ಆಗಿರದ ಕಾಲದಲ್ಲಿ ಹುಟ್ಟಿದ ಪ್ರೀತಿಯ ಆಯಸ್ಸು ಐದೇ ವರ್ಷ ಎಂದು ಎಂದಿಗಾದರೂ ಯೋಚಿಸಿದ್ದೆವಾ ನಾವು? ಎಲ್ಲವೂ ದಕ್ಕಿದ ಮೇಲೆ ಗಳಿಸಿದ ಪ್ರೀತಿ ನಗಣ್ಯವಾಗಲು ಸಾಧ್ಯವೇ? ಇಂದಿಗೂ ಉತ್ತರ ದೊರಕುತ್ತಿಲ್ಲ..

ಬರಡಾದ ನೆಲದಲ್ಲಿ ಬೆಳೆ ಬೆಳೆಯುವುದು ಅಸಾಧ್ಯ. ಎದೆನೆಲವೂ ಬರಡಾದ ಭಾವ.. ಯಾವ ಭಾವನೆಯ ಬೀಜ ಬಿತ್ತಿದರೂ ಕರಕಲಾಗುವ ಸಾಧ್ಯತೆ. ಘಾಸಿಗೊಂಡ ಹೃದಯದ ಮಾತು ಬೇರೆಯವರನ್ನೂ ಘಾಸಿಗೊಳಿಸೀತು…

ಛೇ.. ಏನೇನೋ ಯೋಚನೆ. ನಿನ್ನ ಮನಸ್ಥಿತಿಯ ಅನುಸಾರ ಕೈಗೊಂಡ ತೀರ್ಮಾನ. ನೀನು ಸ್ವತಂತ್ರಳು. ಕಾಲನ ಕೈಗೊಂಬೆಗಳು ತಾನೇ ನಾವೆಲ್ಲ? ಎಲ್ಲದಕ್ಕೂ ಕಾರಣ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನ ನಿರ್ಧಾರ ನಿನಗೆ ಖುಷಿ ನೀಡಿದ್ದರೆ ಸಾಕು. ಅಷ್ಟೇ ಪ್ರಪಂಚ.. ಇದು ಇತ್ತೀಚಿಗೆ ಕಲಿತ ಪಾಠ

ನೀರಲ್ಲಿರುವ ನೈದಿಲೆಯ ಎಲೆಯ ಹಾಗೆ ಏನನ್ನೂ ಅಂಟಿಸಿಕೊಳ್ಳದಿರುವುದನ್ನು ರೂಢಿಸಿಕಳ್ಳಬೇಕು.. ಆಗ ಸುಖದು:ಖಗಳಿಗೆ ಸಮಾನವಾಗಿ ಪ್ರತಿಕ್ರಿಯಿಸಲು ಸಾಧ್ಯ.. ಈ ಯೋಚನೆ ಬರುತ್ತಿದ್ದಂತೆ ಉಬ್ಬರದ ಅಲೆಗಳಂತಿದ್ದ ಮನ ಶಾಂತ ಸಾಗರವಾಗಿತ್ತು…

ಲೇಖನ : ಚಿನ್ಮಯಾನಂದ್ ಹೆಗ್ಡೆ

ಪರಿಚಯ : ಚಿನ್ಮಯಾನಂದ್ ಹೆಗ್ಡೆ ಅವರು ಮೂಲತಃ ಶಿರಸಿಯವರು. ಓದಿನಲ್ಲಿ ಹೆಚ್ಚು ಆಸಕ್ತಿಯುಳ್ಳವರು.  ಪತ್ರಿಕೋದ್ಯಮ ಡಿಪ್ಲೋಮ ಸ್ನಾತ್ತಕೋತ್ತರ ಪದವಿಯಲ್ಲಿ ಬಂಗಾರ ಪದಕವನ್ನು ಪಡೆದಿದ್ದಾರೆ. ಹಲವಾರು ಕವನಗಳನ್ನು ಈಗಾಗಲೇ ರಚಿಸಿ ಅದಕ್ಕೆ ಹಾಡಿನ ರೂಪವನ್ನು ನೀಡಿದ್ದಾರೆ.

amma

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಇತರೆ ಕವನಗಳು :

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW