ಬಿಗ್ ಬಿಸ್ ಸೀಸನ್ ೬ರ ಸ್ಪರ್ಧಿ ಅಕ್ಷತಾ ಪಾಂಡವಪುರ ಬಿಗ್ ಬಾಸ್ ಮುಗಿದ ಮೇಲೆ ಎಲ್ಲಿ ಹೋದ್ರು? ಟ್ರೋಲ್ ನಿಂದ ಬೇಸರಗೊಂಡು ನಟನೆಯಿಂದ ದೂರ ಸರಿದು ಬಿಟ್ರಾ ಎನ್ನುವ ಸಣ್ಣ ಗುಮಾನಿ ಇದೆ.
ಆದರೆ ಅಕ್ಷತಾ ಯಾವ ಟ್ರೋಲ್ ಗೂ ತಲೆಕೆಡಿಸಿಕೊಳ್ಳದೆ ತಮ್ಮ ಹೊಸ ಸಿನಿಮಾ ‘ವ್ಯಾಪ್ತಿ ಪ್ರದೇಶ ಹೊರಗೆ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ‘ಆಕ್ಟಿಂಗ್ ಸ್ಟುಡಿಯೋ ಮತ್ತು ಅಕ್ಷತಾ’ಸ್ ಕಿಚೆನ್ ಸ್ಟುಡಿಯೋ’ ಬಿಡುಗಡೆಗೆ ಸಜ್ಜಾಗಿದೆ. ಅಕ್ಷತಾ ಅವರ ಮಾರ್ಗದರ್ಶನದಲ್ಲಿ ನಟನೆಗೆ ಸಂಬಂಧಿಸಿದಂತೆ ಎಲ್ಲ ವಿಚಾರಗಳನ್ನು ಅವರ ಸ್ಟುಡಿಯೋದಲ್ಲಿ ಹೇಳಿ ಕೊಡಲಾಗುತ್ತದೆ. ಈ ಸ್ಟುಡಿಯೋದಲ್ಲಿ ಅಡುಗೆ ಮನೆಯು ಇದ್ದೂ, ಅಲ್ಲಿ ರುಚಿ ರುಚಿಯಾದ ಅಡುಗೆಯು ರೆಡಿ ಆಗುತ್ತದೆ. ಆ ರುಚಿಯನ್ನು ಸ್ವತಃಹ ಅಕ್ಷತಾ ಅವರೇ ಸಿದ್ದ ಪಡಿಸುತ್ತಿರುವುದು ಒಂದು ವಿಶೇಷ.
ಅಕ್ಷತಾ ಅವರು ಅತ್ಯುತ್ತಮ ನಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಮಧ್ಯೆ ಅಡುಗೆಯ ನಂಟು ಹೇಗೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡಬಹುದು. ಇದಕ್ಕೆಲ್ಲ ಮುಖ್ಯ ಕಾರಣಕರ್ತರು ಬಿಗ್ ಬಾಸ್ ಸೀಸನ್ ೬ ರ ಸ್ಪರ್ಧಿಗಳು. ಬಿಗ್ ಬಾಸ್ ಮನೆಯಲ್ಲಿ ಏನೆಲ್ಲ ಮನಸ್ತಾಪಗಳು ಬಂದಿದ್ದರೂ ಅಡುಗೆಯ ವಿಷಯ ಬಂದಾಗ ಎಲ್ಲ ಸ್ಪರ್ಧಿಗಳ ಬಾಯಲ್ಲಿ ಅಕ್ಷತಾ ಎನ್ನುವ ಹೆಸರು ಬರುತ್ತಿತ್ತು.ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅಭಿಮಾನಿಗಳ ಮನೆಯಲ್ಲಿಯೂ ಅಡುಗೆ ಮಾಡಿ ಅವರಿಂದಲೂ ವಾಹ್ವಾಹ್ ಅನ್ನಿಸಿಕೊಂಡಾಗ ಅಡುಗೆ ಮಾಡುವಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಯಿತು ಅಂತೆ.
‘ನಾನು ಅಡುಗೆಯನ್ನು ಒಂದು ಕಲೆಯಾಗಿ ನೋಡಿದವಳು. ಅಡುಗೆಯಲ್ಲಿ ವಿವಿಧ ಪದಾರ್ಥಗಳನ್ನು ಬಳಸಿದಾಗ ಆಗುತ್ತಿದ್ದ ಬಣ್ಣಗಳಲ್ಲಿನ ಬದಲಾವಣೆ ನೋಡಿ ನನಗೆ ಹೊಸದೊಂದು ಆಲೋಚನೆ ಮೂಡುವಲ್ಲಿ ಕಾರಣವಾಗುತ್ತಿತ್ತು. ಹಾಗಾಗಿ ನನ್ನ ನಟನೆಗೂ ಹಾಗೂ ಅಡುಗೆಗೂ ಒಂದು ನಂಟು ಬೆಳೆಯುತ್ತಲೇ ಹೋಯಿತು.ಇದರ ಪರಿಣಾಮವೇ ‘ಆಕ್ಟಿಂಗ್ ಸ್ಟುಡಿಯೋ ಮತ್ತು ಅಕ್ಷತಾ’ಸ್ ಕಿಚೆನ್ ಸ್ಟುಡಿಯೋ’ ಈಗ ಸಜ್ಜಾಗಿ ನಿಂತಿದೆ ಎನ್ನುತ್ತಾರೆ ಅಕ್ಷತಾ ಪಾಂಡವಪುರ.
ಈ ಎರಡು ಸ್ಟುಡಿಯೋವನ್ನು ಬಿಗ್ ಬಾಸ್ ಸೀಸನ್ ೬ ರ ಸ್ಪರ್ಧಿಗಳೇ ಉದ್ಘಾಟಿಸುತ್ತಿರುವುದು ಇನ್ನೊಂದು ವಿಶೇಷ.